Top Newsಸುದ್ದಿ

ಅಯೋಧ್ಯೆ ರಾಮೋತ್ಸವ; ಮೋದಿಯಿಂದ ರೋಡ್ ಶೋ

Ayodhya Airport inauguration: ರಾಮನಗರಿ ಅಯೋಧ್ಯೆ ರಾಮ ಘೋಷಣೆಯಿಂದ ರಾರಾಜಿಸುತ್ತಿದೆ.ಅಯೋಧ್ಯಾ ರಾಮಮಂದಿರವನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಿ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಮೋದಿಯಿಂದ ಹೊಸ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮರುಅಭಿವೃದ್ಧಿಗೊಂಡ ರೈಲು ನಿಲ್ದಾಣ ಸೇರಿದಂತೆ ಇತರೆ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಪ್ರಧಾನಮಂತ್ರಿಯವರು ಅಯೋಧ್ಯೆಗೆ ತಲುಪಿದಾಗ ಅವರನ್ನು ದೇಶಾದ್ಯಂತದ ಕಲಾವಿದರ ವಿವಿಧ ಕಲಾತಂಡಗಳಿಂದ ಅದ್ದೂರಿ ಸ್ವಾಗತ ಕೋರಿದ್ದಾರೆ.

ರಾಮನಗರ ಉದ್ಘಾಟನೆಗಾಗಿ ಅಲ್ಲಿ ಸುಮಾರು 16 ಸಾವಿರ ಕೋಟಿ ರೂ.ಗಳ ಯೋಜನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಕೆಲ ವರದಿಗಳು ತಿಳಿಸಿವೆ. ಪ್ರಧಾನಿಯವರು ರಾಮಪಥ್, ಭಕ್ತಿಪಥ, ಧರ್ಮಪಥ್ ಮತ್ತು ಶ್ರೀ ರಾಮ ಜನ್ಮಭೂಮಿ ಪಥ ಅಯೋಧ್ಯೆಯಲ್ಲಿ ರೋಡ್ ಶೋ ಮಾಡಿ ಗಮನ ಸೆಳೆದಿದ್ದಾರೆ. ಏಕಕಾಲಕ್ಕೆ ಎರಡು ಅಮೃತ್ ಭಾರತ್ ಮತ್ತು ಆರು ಹೊಸ ವಂದೇ ಭಾರತ್ ರೈಲುಗಳನ್ನು ಸಹ ಫ್ಲ್ಯಾಗ್ ಆಫ್ ಮಾಡಿಲಿದ್ದಾರೆ.

ಪ್ರಧಾನಮಂತ್ರಿಯವರು ಅಯೋಧ್ಯೆಯಲ್ಲಿ ಹೊಸದಾಗಿ ಮರು ಅಭಿವೃದ್ಧಿಪಡಿಸಿದ, ವಿಸ್ತರಿಸಿದ ಮತ್ತು ಸುಂದರಗೊಳಿಸಿದ ನಾಲ್ಕು ರಸ್ತೆಗಳನ್ನು ಉದ್ಘಾಟಿಸಲಿದ್ದಾರೆ. ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣ, ರಾಮ್ ಪಥ್ ಮಾರ್ಗ್ ವರೆಗೆ ಒಟ್ಟು 40 ಸ್ಟೇಜ್ ಗಳನ್ನು ಸಿದ್ಧವಾಗಿದ್ದು, 1,400ಕ್ಕೂ ಹೆಚ್ಚು ಕಲಾವಿದರು ಜಾನಪದ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ್ಧಾರೆ. ಇನ್ನು ಅಯೋಧ್ಯೆಯಲ್ಲಿ ಉಜ್ವಲ ಯೋಜನೆಯ ಫಲಾನುಭವಿ ಪಡೆದ ಕುಟುಂಬಸ್ಥರನ್ನು ಪ್ರಧಾನಿ ಮೋದಿ ಭೇಟಿ ಮಾತಾನಾಡಿಸಿದ್ದಾರೆ.

Comments (0)

Your email address will not be published. Required fields are marked *

Back to top button