National

ಮಧ್ಯಪ್ರಾಚ್ಯದಲ್ಲಿ ನಿಲ್ಲದ ಯುದ್ಧದ ಕಾರ್ಮೋಡ – ಇರಾನ್‌ನ 3 ತೈಲ ಟ್ಯಾಂಕರ್‌ ಧ್ವಂಸ!

Unrelenting war clouds over the Middle East – Three Iranian oil tankers destroyed!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿದಿದ್ದು, ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಅಮೆರಿಕನ್ ನೌಕಾಪಡೆಯ ಹಡಗುಗಳ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಇರಾನ್‌ಗೆ ತಕ್ಕ ತಿರುಗೇಟು ನೀಡಿರುವ ಅಮೆರಿಕ ಪಡೆಗಳು, ಇರಾನ್‌ಗೆ ಸೇರಿದ ಮೂರು ಬೃಹತ್ ತೈಲ ಟ್ಯಾಂಕರ್‌ಗಳನ್ನು ಕ್ಷಿಪಣಿ ದಾಳಿ ನಡೆಸಿ ಧ್ವಂಸಗೊಳಿಸಿವೆ.

ಅಮೆರಿಕದ ನೌಕಾಪಡೆ ಹಾಗೂ ಯುದ್ಧನೌಕೆಗಳ ಮೇಲೆ ಇರಾನ್ ಪಡೆಗಳು ನಡೆಸಿದ ಸರಣಿ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳಿಗೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ. ದಾಳಿಯ ತೀವ್ರತೆಗೆ ಮೂರೂ ತೈಲ ಟ್ಯಾಂಕರ್‌ಗಳು ಬೆಂಕಿಹೊತ್ತಿ ಸುಟ್ಟುಕರಕಲಾಗಿವೆ.

ಈ ಘಟನೆಯಿಂದಾಗಿ ಪರ್ಷಿಯನ್ ಕೊಲ್ಲಿ ಮತ್ತು ಮಧ್ಯಪ್ರಾಚ್ಯದ ಕಡಲ ಮಾರ್ಗಗಳಲ್ಲಿ ಉದ್ವಿಗ್ನತೆ ತೀವ್ರಗೊಂಡಿದ್ದು, ಜಾಗತಿಕ ತೈಲ ಮಾರುಕಟ್ಟೆಯ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯಿದೆ. ಮುಂಬರುವ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಗನಕ್ಕೇರುವ ಭೀತಿ ಎದುರಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಪೂರ್ಣ ಪ್ರಮಾಣದ ಯುದ್ಧ ಭುಜಿತುಕೊಳ್ಳುವ ಮುನ್ಸೂಚನೆ ಸಿಕ್ಕಿದೆ.

Comments (0)

Your email address will not be published. Required fields are marked *

Back to top button