Nationalಶಿಕ್ಷಣ

ಪ್ರಶ್ನೆಪತ್ರಿಕೆ ಸೋರಿಕೆ – NEET UG-2026 ಪರೀಕ್ಷೆ ರದ್ದು

Neet exam cancel

ನವದೆಹಲಿ: ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ನಡೆಸುವ NEET UG ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಇತ್ತೀಚೆಗೆ ನಡೆಸಲಾಗಿದ್ದ NEET UG-2026 ರ ಪರೀಕ್ಷೆಯನ್ನೇ ರದ್ದು ಮಾಡಲು ಆದೇಶಿಸಲಾಗಿದೆ.ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿದ್ದು ರಾಜಸ್ಥಾನದಲ್ಲಿ ವಿಶೇಷ ತನಿಖಾ ದಳ 44 ಆರೋಪಿಗಳನ್ನು ಬಂಧಿಸಿದೆ. ವಿಶ್ವಾಸಾರ್ಹತೆ ಕಾಪಾಡಲು ಮೇ 3 ರಂದು ನಡೆಸಿದ್ದ ಪರೀಕ್ಷೆ ರದ್ದು ಮಾಡಿ, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದೆ.

ಸಿಬಿಐ ತನಿಖೆಗೆ ಆದೇಶ

ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಕಾರಣ ಲಕ್ಷಾಂತರ ವಿದ್ಯಾರ್ಥಿಗಳು ಈ ಕರ್ಮಕಾಂಡದಿಂದ ಮಾನಸಿಕವಾಗಿ ಜರ್ಜರಿತರಾಗಿದ್ದಾರೆ. ಹಲವಾರು ತಿಂಗಳ ನಿರಂತರ ಪರಿಶ್ರಮ ಹಾಗೂ ಕಠಿಣ ಓದು ಎಲ್ಲವೂ ವ್ಯರ್ಥವಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ NTA ಈ ಹಗರಣವನ್ನು ಸಿಬಿಐ ಗೆ ವಹಿಸಿದೆ. ಈ ಕುರಿತು ಎನ್‌ಟಿಎ ತನಿಖೆಗೆ ಸಂಪೂರ್ಣವಾಗಿ ಸಹಕರಿಸಲಿದ್ದು,ವಿಚಾರಣೆಗೆ ಅಗತ್ಯವಿರುವ ಎಲ್ಲ ದಾಖಲೆಗಳು, ಡಿಜಿಟಲ್ ಪುರಾವೆಗಳು ಮತ್ತು ಪರೀಕ್ಷೆಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮರುಪರೀಕ್ಷೆಗೆ ಹೊಸ ದಿನಾಂಕಗಳನ್ನು ಶೀಘ್ರದಲ್ಲೇ ಘೋಷಿಸುವ ನಿರೀಕ್ಷೆಯಿದೆ.
ಮರುಪರೀಕ್ಷಾ ಪ್ರಕ್ರಿಯೆಯ ಕುರಿತು ಎನ್‌ಟಿಎ ಹೊರಡಿಸಿದ ಅಧಿಕೃತ ಅಧಿಸೂಚನೆಗಳನ್ನು ಮಾತ್ರ ವಿದ್ಯಾರ್ಥಿಗಳು ನೋಡತಕ್ಕದ್ದು. ಸಾಮಾಜಿಕ ಮಾಧ್ಯಮಗಳಲ್ಲಿ ನೀಡುವ ತಪ್ಪು ಮಾಹಿತಿ ಅಥವಾ ವದಂತಿಗಳಿಗೆ ಅಭ್ಯರ್ಥಿಗಳು ಕಿವಿಗೊಡಬಾರದೆಂದು ಸೂಚನೆ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ,ವಿದ್ಯಾರ್ಥಿಗಳು NTA ಅಧಿಕೃತ ಪೋರ್ಟಲ್ neet-ug@nta.ac.in ಅನ್ನು ವೀಕ್ಷಿಸಬಹುದು.

#NEETUG2026 #PaperLeak #NEETCancelled #NTAUpdate #CBIProbe #RajasthanSOG #JusticeForStudents #ReNEET #MedicalEntrance #BreakingNews

Comments (0)

Your email address will not be published. Required fields are marked *

Back to top button