National

2026ರ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡ ಕೇರಳದ ಕಾಜಿಯಾ!

Kajia from Kerala crowned Miss Universe India 2026!

ಜೈಪುರ : ದೇಶದ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಗಳಲ್ಲಿ ಒಂದಾದ ‘ಮಿಸ್ ಯೂನಿವರ್ಸ್ ಇಂಡಿಯಾ 2026’ ಕಿರೀಟವನ್ನು ಕೇರಳದ 19 ವರ್ಷದ ಕಾನೂನು ವಿದ್ಯಾರ್ಥಿನಿ ಕಾಜಿಯಾ ಲಿಜ್ ಮೆಜೊ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಭಾನುವಾರ ಜೈಪುರದಲ್ಲಿ ನಡೆದ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ 52 ಇತರ ಸ್ಪರ್ಧಿಗಳನ್ನು ಹಿಂದಿಕ್ಕಿದ ಕಾಜಿಯಾ, ‘ಮಿಸ್ ಯೂನಿವರ್ಸ್ ಇಂಡಿಯಾ 2026’ ವಿನ್ನರ್ ಆಗಿ ಹೊರಹೊಮ್ಮಿದರು. ಈ ಮೂಲಕ ಈ ವೇದಿಕೆಯಲ್ಲಿ ಗೆಲುವು ಕಂಡ ಕೇರಳದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಜೈಪುರದಲ್ಲಿ ನಡೆದ ವರ್ಣರಂಜಿತ ಗ್ರ್ಯಾಂಡ್ ಫಿನಾಲೆಯಲ್ಲಿ ಕಿರೀಟ ಧರಿಸಿರುವ ಕಾಜಿಯಾ ಲಿಜ್ ಮೆಜೊ, ಮುಂಬರುವ ನವೆಂಬರ್‌ನಲ್ಲಿ ಪೋರ್ಟೊ ರಿಕೊದಲ್ಲಿ ನಡೆಯಲಿರುವ ಪ್ರತಿಷ್ಠಿತ 75ನೇ ಮಿಸ್ ಯೂನಿವರ್ಸ್ ವಿಶ್ವಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಅಧಿಕೃತವಾಗಿ ಪ್ರತಿನಿಧಿಸಲಿದ್ದಾರೆ.

ತಮಿಳುನಾಡಿನ ವೈಷ್ಣವಿ ಗಣೇಶ್ ಮೊದಲ ರನ್ನರ್ ಅಪ್ ಆಗಿ ಆಯ್ಕೆಯಾದರೆ, ಗುಜರಾತ್‌ನ ಅನುಶ್ರೀ ಸತವ್ಲೇಕರ್ ಎರಡನೇ ರನ್ನರ್ ಅಪ್ ಆಗಿ, ಮಹಾರಾಷ್ಟ್ರದ ತೇಜಸ್ವಿನಿ ಶ್ರೀವಾಸ್ತವ ಮೂರನೇ ರನ್ನರ್ ಅಪ್ ಆಗಿ, ಉತ್ತರಾಖಂಡದ ಅನುಭಾ ವಶಿಷ್ಟ್ ಚೌಧರಿ ನಾಲ್ಕನೇ ರನ್ನರ್ ಅಪ್ ಆಗಿ ಸೌಂದರ್ಯ ಸ್ಪರ್ಧೆಯಲ್ಲಿ ಸ್ಥಾನ ಪಡೆದರು.

Comments (0)

Your email address will not be published. Required fields are marked *

Back to top button