Editorial
- Editorial

ಸಂಪಾದಕೀಯ…
ರಾಜ್ಯದ ಖಜಾನೆ ಖಾಲಿಯಾಗಿದೆ. ಬೊಕ್ಕಸದಲ್ಲಿ ಹಣವಿಲ್ಲ, ಆದರೂ ಘೋಷಣೆಗಳಿಗೆ ಕೊನೆಯಿಲ್ಲ. ಇದೀಗ ಸ್ವತಃ ಹಣಕಾಸು ಇಲಾಖೆಯೇ ಬೆಚ್ಚಿಬಿದ್ದು ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಕಿವಿಮಾತು ಹೇಳಿದೆ. ಹಣಕಾಸು ಇಲಾಖೆ ಎಚ್ಚರಿಕೆ ಏನು? ಬಜೆಟ್ನಲ್ಲಿ ಇಲ್ಲದ ಸಾವಿರಾರು ಕೋಟಿ ರೂಪಾಯಿಯ ಹೊಸ ಪ್ರಾಜೆಕ್ಟ್ ಬೇಡ. ಇದು 2026-27 ಮತ್ತು 2027-28 ಎರಡು ವರ್ಷದ ಯೋಜನೆ. ಬಜೆಟ್ನಲ್ಲಿ ಹಣವನ್ನೇ ಇಟ್ಟಿಲ್ಲ, ಮೂಲವನ್ನೇ ಗುರುತಿಸಿಲ್ಲ. ಈಗ ಹೊಸದಾಗಿ ಶುರು ಮಾಡಿದರೆ Cash Flow ಮತ್ತು Fiscal Management ಸಂಪೂರ್ಣ ಹಳಿ ತಪ್ಪುತ್ತದೆ ಎಂದು FD ಖಡಕ್ಕಾಗಿ ಹೇಳಿದೆ. ಅಂಕಿ-ಅಂಶಗಳೇ ಭಯ ಹುಟ್ಟಿಸುತ್ತಿವೆ: Fiscal Deficit 2.95% – FRBM ಮಿತಿ 3% ಮಾತ್ರ. Revenue Deficit Rs. 22,957 ಕೋಟಿ – FRBM ಪ್ರಕಾರ NIL ಇರಬೇಕು. ಒಟ್ಟು ಸಾಲ / GSDP 24.94% – ಮಿತಿ 25%. ಅಂದರೆ ರಾಜ್ಯ ಸಾಲ ಮಾಡುವ ಮಿತಿಯನ್ನೇ ಮುಟ್ಟಿದೆ. ರಾಜ್ಯ ದಿವಾಳಿಯ ಅಂಚಿನಲ್ಲಿದೆ ಎಂದು ಹಣಕಾಸು ಇಲಾಖೆಯೇ ಹೇಳುತ್ತಿದೆ. ಆದರೂ ಸಿಎಂ ಆದೇಶದ ಮೇರೆಗೆ ಈ ಪ್ರಸ್ತಾವನೆ ಸಂಪುಟಕ್ಕೆ ಹೋಗಿದೆ ಎನ್ನುವುದು ಆತಂಕಕಾರಿ. ಲೀಕ್ ಹಿಂದಿನ ರಾಜಕೀಯ? ಈ ಪತ್ರ ಈಗ ವಿಪಕ್ಷ ಮತ್ತು ಮಾಧ್ಯಮಗಳಿಗೆ ಲೀಕ್ ಆಗಿದೆ. ಇದು ಆಕಸ್ಮಿಕವಲ್ಲ, ಕಾಂಗ್ರೆಸ್ ಒಳಗಿನಿಂದಲೇ ಡಿಕೆ ಅವರ ಇಮೇಜ್ ಡ್ಯಾಮೇಜ್ ಮಾಡುವ ಯತ್ನ ನಡೆಯುತ್ತಿದೆ ಎಂಬ ಮಾತು ದಟ್ಟವಾಗಿದೆ. ಸಿದ್ದರಾಮಯ್ಯನವರು ಕಸರತ್ತಿನಿಂದ ಬಜೆಟ್ ಮಂಡಿಸಿ ಹೋದರು. ಎಲ್ಲಿಂದ ಹಣ ತರಬೇಕು ಎನ್ನುವುದೇ ಈಗ ದೊಡ್ಡ ಪ್ರಶ್ನೆ. ಕೆಚ್ಚಲಲ್ಲಿ ಹಾಲೇ ಇಲ್ಲ, ಇನ್ನು ಎಲ್ಲಿಂದ ಕರೆಯುವುದು? ಎಂದು ಹಣಕಾಸು ಇಲಾಖೆ ಚಿಂತೆಯಲ್ಲಿದೆ. ಇತ್ತ ಆಡಳಿತ ಯಂತ್ರ ಸತ್ತು ಬಿದ್ದಿದೆ. ಸಾಮಾನ್ಯ ಫೈಲ್ ವಿಲೇವಾರಿಗೆ 3-4 ತಿಂಗಳು ಬೇಕು. ಎಲ್ಲೆಡೆ ಲಂಚದ ರೇಟ್ ದುಪ್ಪಟ್ಟಾಗಿದೆ. ಶಂಖ ಊದಿ ಜಾಗಟೆ ಬಾರಿಸಿದರೂ ಅಧಿಕಾರಶಾಹಿ ಕೆಲಸ ಮಾಡುತ್ತಿಲ್ಲ. ಸಿಎಂ ಕಚೇರಿಯಲ್ಲಿ ಜಾತಿ-ಧರ್ಮ, ನಮ್ಮವರು-ತಮ್ಮವರು ಎಂಬ ಭಾವವೇ ಇಲ್ಲ, ಬರೀ ವ್ಯವಹಾರಕ್ಕೆ ಮಾತ್ರ ಮನ್ನಣೆ ಎಂಬ ಅಸಮಾಧಾನ ಅಧಿಕಾರಿಗಳಲ್ಲೇ ಇದೆ. ಹೀಗಾಗಿ ಸಿಎಂ ಅವರದೇ ಸಮುದಾಯದ ಅಧಿಕಾರಿಗಳು …
KANNADA NEWS
- ರಾಜಕೀಯ

ಇಂದಿನಿಂದ ಕಾಂಗ್ರೆಸ್ ‘ಭಾರತ್ ಜೋಡೋ 2.0’ ಯಾತ್ರೆ ಆರಂಭ!
ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಪಾದಯಾತ್ರೆಗಳ ಹವಾ ಜೋರಾಗಿದೆ. ಇಂದಿನಿಂದ ಕಾಂಗ್ರೆಸ್ ಪಕ್ಷವು ಮಹತ್ತ್ವಾಕಾಂಕ್ಷೆಯ ‘ಭಾರತ್ ಜೋಡೋ 2.0’ ಯಾತ್ರೆ ನಡೆಯಲಿದೆ. ವಿಶೇಷವೆಂದರೆ, ಬಿಜೆಪಿ ರಾಜ್ಯಾಧ್ಯಕ್ಷ…
Read More » -

-

-









































