ರಾಜಕೀಯ

ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

Portfolios finally allocated to new ministers – who gets which portfolio?

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ನೂತನ ಸಚಿವರಿಗೆ ಖಾತೆ ಹಂಚಿಕೆಯ ಗೊಂದಲಕ್ಕೆ ಕೊನೆಗೂ ತೆರೆಬಿದ್ದಿದೆ. ಸಂಪುಟ ಪುನಾರಚನೆಯಲ್ಲಿ ಸಚಿವ ಸ್ಥಾನ ಪಡೆದ ನೂತನ ಸಚಿವರಿಗೆ ಅಂತಿಮವಾಗಿ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.

ಖಾತೆ ಹಂಚಿಕೆಗಾಗಿ ಸಚಿವ ಆಕಾಂಕ್ಷಿಗಳು ಹಾಗೂ ಹಿರಿಯ ನಾಯಕರು ನಡೆಸುತ್ತಿದ್ದ ಕಸರತ್ತು, ದೆಹಲಿ ಮಟ್ಟದ ಸಭೆಗಳು ಹಾಗೂ ಮುಖ್ಯಮಂತ್ರಿಗಳ ಜೊತೆಗಿನ ಸುದೀರ್ಘ ಚರ್ಚೆಗಳ ನಂತರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. 

ಅಂತಿಮ ಕ್ಷಣದವರೆಗೂ ನಡೆದ ಸಾಕಷ್ಟು ಬದಲಾವಣೆಗಳಿಂದಾಗಿ ಸಚಿವರ ಪಟ್ಟಿಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರಿಗೆ ಜಲಸಂಪನ್ಮೂಲ ಖಾತೆ ಸಿಗಲಿದೆ ಎಂಬ ನಿರೀಕ್ಷೆಯಿತ್ತಾದರೂ, ಕೊನೆಯ ಹಂತದಲ್ಲಿ ಅದಲು ಬದಲಾಗಿದೆ.

ಯಾರಿಗೆ ಯಾವ ಖಾತೆ?

  • ಚಲುವರಾಯಸ್ವಾಮಿ: ಜಲ ಸಂಪನ್ಮೂಲ ಖಾತೆ
  • ರಾಮಲಿಂಗಾ ರೆಡ್ಡಿ : ಅರಣ್ಯ ಖಾತೆ
  • ನಾಗೇಂದ್ರ: ಯೋಜನೆ ಮತ್ತು ಸಾಂಖ್ಯಿಕ
  • ನರೇಂದ್ರಸ್ವಾಮಿ: ಕೃಷಿ ಇಲಾಖೆ
  • ಮಾಗಡಿ ಬಾಲಕೃಷ್ಣ: ಪೌರಾಡಳಿತ
  • ಅಜಯ್ ಸಿಂಗ್: ಸಣ್ಣ ನೀರಾವರಿ
  • ವಿಜಯಾನಂದ ಕಾಶಪ್ಪನವರ್: ಸಣ್ಣ ಕೈಗಾರಿಕೆ
  • ಮಂಕಾಳು ವೈದ್ಯ: ಉಪ ಸ್ಪೀಕರ್ (ಡೆಪ್ಯುಟಿ ಸ್ಪೀಕರ್)
  • ಜಮೀರ್ ಅಹಮದ್ ಖಾನ್: ವಸತಿ ಖಾತೆ
  • ಕೆ.ಎಚ್‌. ಮುನಿಯಪ್ಪ: ಸಮಾಜ ಕಲ್ಯಾಣ
  • ಮಧು ಬಂಗಾರಪ್ಪ: ಶಿಕ್ಷಣ ಸಚಿವ
  • ಲಕ್ಷ್ಮಣ ಸವದಿ: ಸಹಕಾರ
  • ಶಿವರಾಜ್ ತಂಗಡಗಿ: ಹಿಂದುಳಿದ ವರ್ಗಗಳ ಕಲ್ಯಾಣ
  • ರಿಜ್ವಾನ್ ಅರ್ಷದ್: ಆಹಾರ, ನಾಗರಿಕ ಸರಬರಾಬು
  • ಬಸವಂತಪ್ಪ: ಮೀನುಗಾರಿಕೆ
  • ಟಿ. ರಘುಮೂರ್ತಿ: ಎಸ್‌ಟಿ ಕಲ್ಯಾಣ
  • ಕೆ.ಎಂ. ಶಿವಲಿಂಗೇಗೌಡ: ಅಬಕಾರಿ
  • ಎನ್.ಎಸ್. ಪೊನ್ನಣ್ಣ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ
  • ಆರ್‌.ವಿ. ದೇಶಪಾಂಡೆ: ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ

Comments (0)

Your email address will not be published. Required fields are marked *

Back to top button