ರಾಜಕೀಯ

ಡಿ.ಕೆ. ಶಿವಕುಮಾರ್‌ ಸರ್ಕಾರಕ್ಕೆ 100 ದಿನಗಳ ಸಂಭ್ರಮ!

Celebrations marking 100 days of the D.K. Shivakumar government!

ಬೆಂಗಳೂರು : ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್‌ ನೇತೃತ್ವದ ಸರ್ಕಾರಕ್ಕೆ ಇಂದಿಗೆ 100 ದಿನ ಪೂರ್ಣಗೊಂಡಿದೆ. ಈ ವಿಶೇಷ ಸಂದರ್ಭವನ್ನು ಸ್ಮರಣೀಯವಾಗಿಸಲು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಇಂದು ಅಧಿಕೃತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಜನತೆಗೆ ಸಿಎಂ ಮಹತ್ವದ ಯೋಜನೆ ಘೋಷಣೆ ಮಾಡುವ ಸಾಧ್ಯತೆಯಿದೆ.

15 ಲಕ್ಷ ನಿವೇಶನ ಹಂಚಿಕೆ ಐತಿಹಾಸಿಕ ಘೋಷಣೆ ಸರ್ಕಾರದ 100 ದಿನಗಳ ಸಾಧನೆಯ ಸಂಭ್ರಮದ ಭಾಗವಾಗಿ, ರಾಜ್ಯದ ನಿವೇಶನ ರಹಿತ ಬಡ ಕುಟುಂಬಗಳಿಗೆ ಭರ್ಜರಿ ಸಿಹಿ ಸುದ್ದಿ ಸಿಗಲಿದೆ. ಇಂದು ರಾಜ್ಯಾದ್ಯಂತ ಬಡವರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಬರೋಬ್ಬರಿ 15 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡುವ ಬೃಹತ್ ಯೋಜನೆಗೆ ಸಿಎಂ ಡಿ.ಕೆ. ಶಿವಕುಮಾರ್ ಅಧಿಕೃತ ಚಾಲನೆ ನೀಡಲಿದ್ದಾರೆ. ಕೇವಲ ನಗರ ಪ್ರದೇಶ ಮಾತ್ರವಲ್ಲದೆ, ಪ್ರತಿ ಜಿಲ್ಲೆ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿಯೂ ಹಂತ ಹಂತವಾಗಿ ಅರ್ಹ ಫಲಾನುಭವಿಗಳಿಗೆ ‘ಸೈಟ್ ಗ್ಯಾರಂಟಿ’ಯಡಿ ನಿವೇಶನಗಳನ್ನು ಹಂಚಿಕೆ ಮಾಡುವ ಕುರಿತು ಮಹತ್ವದ ರೂಪುರೇಷೆಗಳನ್ನು ಇಂದು ಪ್ರಕಟಿಸುವ ಸಾಧ್ಯತೆಯಿದೆ.

ಕಾಂಗ್ರೆಸ್ ಜಿಲ್ಲಾಧ್ಯಕ್ಷರ ನೂತನ ಪಟ್ಟಿ ಬಿಡುಗಡೆ ಸರ್ಕಾರದ ನೂರು ದಿನಗಳ ಸಂಭ್ರಮದ ಜೊತೆಗೆ ಪಕ್ಷದಲ್ಲೂ ಸಂಘಟನಾತ್ಮಕ ಚಟುವಟಿಕೆಗಳು ಗರಿಗೆದರಿವೆ. ‘ಸಂಘಟನಾ ಸೃಜನ್ ಅಭಿಯಾನ’ದಡಿ ಕಾಂಗ್ರೆಸ್‌ ಪಕ್ಷದ ನೂತನ ಜಿಲ್ಲಾಧ್ಯಕ್ಷರ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗುತ್ತದೆ.

ವಿಧಾನಸೌಧದಲ್ಲಿ ನಡೆಯಲಿರುವ ಈ ಬೃಹತ್ ಕಾರ್ಯಕ್ರಮದಲ್ಲಿ ಸಚಿವ ಸಂಪುಟದ ಸಚಿವರು, ಹಿರಿಯ ನಾಯಕರು ಹಾಗೂ ಪಕ್ಷದ ಪ್ರಮುಖರು ಭಾಗವಹಿಸಲಿದ್ದು, ಸರ್ಕಾರದ ಈ ಹೊಸ ಘೋಷಣೆಯು ರಾಜ್ಯದ ಲಕ್ಷಾಂತರ ಬಡ ಕುಟುಂಬಗಳ ಸ್ವಂತ ಸೂರು ಕನಸಿಗೆ ಮುಕ್ತಿ ನೀಡಲಿದೆ.

Comments (0)

Your email address will not be published. Required fields are marked *

Back to top button