bengaluru

ಇಂದು ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ!

Namma Metro train service expansion today!

ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಇಂದು ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ರೈಲು ಸೇವೆಗಳ ವೇಳೆಯನ್ನು ವಿಸ್ತರಿಸಿ ಬಿಎಂಆರ್‌ಸಿಎಲ್ (BMRCL) ಆದೇಶ ಹೊರಡಿಸಿದೆ.

ವೈಟ್‌ಫೀಲ್ಡ್ ಹಾಗೂ ಚಲ್ಲಘಟ್ಟ ನಿಲ್ದಾಣದಿಂದ ರಾತ್ರಿ 12ಕ್ಕೆ ಕೊನೆ ಮೆಟ್ರೋ ರೈಲು ಹೊರಡಲಿದೆ. ಮಾದವಾರ ನಿಲ್ದಾಣದಿಂದ ರಾತ್ರಿ 12:15ಕ್ಕೆ ಕೊನೆ ಮೆಟ್ರೋ ಸಂಚಾರ ಮಾಡಲಿದೆ. ರೇಷ್ಮೆ ಸಂಸ್ಥೆ ನಿಲ್ದಾಣದಿಂದ ರಾತ್ರಿ 12:20ಕ್ಕೆ ಕೊನೆ ಮೆಟ್ರೋ ಹೊರಡಲಿದೆ.

ಯೆಲ್ಲೋ ಮಾರ್ಗ ಆರ್.ವಿ ರಸ್ತೆ ನಿಲ್ದಾಣದಿಂದ ರಾತ್ರಿ 12:15ಕ್ಕೆ ಸಂಚರಿಸಲಿದೆ. ಬೊಮ್ಮನಹಳ್ಳಿ ನಿಲ್ದಾಣದಿಂದ ರಾತ್ರಿ 11:55ಕ್ಕೆ ಕೊನೆ ಮೆಟ್ರೋ ರೈಲು ಹೊರಡಲಿದೆ.

ವಾರಾಂತ್ಯದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆ ಮತ್ತು ರಾತ್ರಿ ವೇಳೆ ಸಂಚರಿಸುವವರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಬಿಎಂಆರ್‌ಸಿಎಲ್ ಈ ಮಹತ್ವದ ಹೆಜ್ಜೆ ಇಟ್ಟಿದೆ.

Comments (0)

Your email address will not be published. Required fields are marked *

Back to top button
Verified by MonsterInsights