bengaluru

ಇಂದಿನಿಂದ ಬೆಂಗಳೂರು ಫ್ಲೈಓವರ್​​ಗಳಲ್ಲಿ ಹೊಸ ನಿಯಮ ಜಾರಿ!

New rule implemented on Bengaluru flyovers starting today!

ಬೆಂಗಳೂರು : ನಗರದಲ್ಲಿ ರಸ್ತೆ ಸುರಕ್ಷತೆ ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಬೆಂಗಳೂರು ಪೊಲೀಸ್ ಇಲಾಖೆಯು ಮಹತ್ವದ ಹೆಜ್ಜೆ ಇಟ್ಟಿದೆ. ರಾಜಧಾನಿಯ ಪ್ರಮುಖ ನಾಲ್ಕು ದಿಕ್ಕುಗಳ ಫ್ಲೈಓವರ್‌ಗಳಲ್ಲಿ ದ್ವಿಚಕ್ರ ವಾಹನ, ಆಟೋರಿಕ್ಷಾ ಹಾಗೂ ಸರಕು ಸಾಗಾಣಿಕೆ ವಾಹನಗಳ ಸಂಚಾರದ ಮೇಲೆ ಹೊಸ ನಿಬಂಧನೆಗಳನ್ನು ಜಾರಿಗೊಳಿಸಲಾಗಿದೆ.

ಟ್ರಾಫಿಕ್ ಸಮಸ್ಯೆ ನಿವಾರಣೆ, ವ್ಹೀಲಿಂಗ್ ಪಿಡುಗಿಗೆ ಬ್ರೇಕ್ ಹಾಕುವುದು ಮತ್ತು ರಸ್ತೆ ಅಪಘಾತಗಳಲ್ಲಿ ಪ್ರಾಣಹಾನಿ ತಡೆಯುವ ನಿಟ್ಟಿನಲ್ಲಿ ಪ್ರಮುಖ ಫ್ಲೈಓವರ್‌ಗಳಲ್ಲಿ ಈ ನೂತನ ಸಂಚಾರಿ ನಿಯಮಗಳು ಇಂದಿನಿಂದ ಅಧಿಕೃತವಾಗಿ ಜಾರಿಗೆ ಬಂದಿವೆ.

ಯಾವ ಫ್ಲೈಓವರ್‌ನಲ್ಲಿ ಯಾವ ವಾಹನಗಳಿಗೆ ನಿರ್ಬಂಧ?

  • ಪೀಣ್ಯ ಎಲಿವೇಟೆಡ್ ಕಾರಿಡಾರ್: ಆಟೋ ರಿಕ್ಷಾ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ನಿರ್ಬಂಧ
  • ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್: ಮಧ್ಯಮ ಹಾಗೂ ಭಾರಿ ಸರಕು ವಾಹನಗಳು ಮತ್ತು ಆಟೋ ರಿಕ್ಷಾಗಳಿಗೆ ನಿರ್ಬಂಧ
  • ಡಬಲ್ ಡೆಕ್ಕರ್ ಫ್ಲೈಓವರ್: ಭಾರಿ ಸರಕು ವಾಹನಗಳ ಸಂಚಾರಕ್ಕೆ ನಿರ್ಬಂಧ
  • ಏರ್‌ಪೋರ್ಟ್‌ ರಸ್ತೆ ಫ್ಲೈಓವರ್: ಬೈಕ್, ಆಟೋ ಹಾಗೂ ಗೂಡ್ಸ್ ವಾಹನಗಳಿಗೆ ನಿರ್ಬಂಧ

ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ಸೆಪ್ಟೆಂಬರ್ 11 ರಿಂದ ನಿರ್ದಿಷ್ಟ ವಾಹನಗಳ ಸಂಚಾರ ನಿಷೇಧ ಜಾರಿಗೆ ಬರಲಿದೆ. ಈ ಮೂಲಕ ನಗರದ ಒಟ್ಟು 5 ಪ್ರಮುಖ ಫ್ಲೈಓವರ್‌ಗಳಲ್ಲಿ 24 ಗಂಟೆಯೂ ಕೆಲ ವರ್ಗದ ವಾಹನಗಳ ಸಂಚಾರಕ್ಕೆ ನಿರ್ಬಂಧ ಇರಲಿದೆ.

Comments (0)

Your email address will not be published. Required fields are marked *

Back to top button