bengaluru

ಬೆಂಗಳೂರಲ್ಲಿ ಹೊಸ ಟ್ರಾಫಿಕ್ ರೂಲ್ಸ್ – 5 ಫ್ಲೈಓವರ್​​ಗಳ ಮೇಲೆ ವಾಹನ ಸಂಚಾರಕ್ಕೆ ಬ್ರೇಕ್!

New traffic rules in Bengaluru – Vehicular movement halted on 5 flyovers!

ಬೆಂಗಳೂರು : ದಿನೇ ದಿನೇ ಹೆಚ್ಚುತ್ತಿರುವ ವಾಹನ ದಟ್ಟಣೆ ಮತ್ತು ಸರಣಿ ಅಪಘಾತಗಳಿಗೆ ಕಡಿವಾಣ ಹಾಕಲು ಬೆಂಗಳೂರು ಸಂಚಾರ ಪೊಲೀಸರು ಮಾಸ್ಟರ್‌ಪ್ಲಾನ್ ಮಾಡಿದ್ದಾರೆ. ನಗರದಲ್ಲಿ ಸಂಚಾರ ಸುರಕ್ಷತೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಪ್ರಮುಖ ಫ್ಲೈಓವರ್‌ಗಳ ಮೇಲೆ ಕೆಲವು ನಿರ್ದಿಷ್ಟ ವಾಹನಗಳ ಸಂಚಾರಕ್ಕೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ.

ನಗರದಲ್ಲಿ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಇದರಿಂದ ಉಂಟಾಗುತ್ತಿರುವ ಟ್ರಾಫಿಕ್ ಸಮಸ್ಯೆ ಮತ್ತು ಪ್ರಾಣಾಪಾಯಗಳನ್ನು ತಪ್ಪಿಸಲು ಈ ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಬಿಜಿಎಸ್ ಫ್ಲೈಓವರ್, ಪೀಣ್ಯ ಫ್ಲೈಓವರ್, ಡಬಲ್ ಡೆಕ್ಕರ್ ಫ್ಲೈಓವರ್, ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್ ಹಾಗೂ ಏರ್‌ಪೋರ್ಟ್ ಫ್ಲೈಓವರ್‌ಗಳಲ್ಲಿ ಈ ಹೊಸ ಬದಲಾವಣೆಗಳು ಅನ್ವಯವಾಗಲಿವೆ.

ಯಾವೆಲ್ಲಾ ಫ್ಲೈಓವರ್‌ಗಳ ಮೇಲೆ ಯಾವ ವಾಹನಗಳಿಗೆ ನಿಷೇಧ?

  • ಏರ್‌ಪೋರ್ಟ್ ಫ್ಲೈಓವರ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್: ಅತಿ ವೇಗದ ಸಂಚಾರ ಹಾಗೂ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಈ ಫ್ಲೈಓವರ್‌ಗಳಲ್ಲಿ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಸಂಪೂರ್ಣ ಬ್ರೇಕ್ ಹಾಕಲಾಗಿದೆ.
  • ಮೈಸೂರು ರಸ್ತೆಯ ಬಿಜಿಎಸ್ ಫ್ಲೈಓವರ್: ಈ ಮೇಲ್ಸೇತುವೆಯಲ್ಲಿ ಭಾರಿ ಗಾತ್ರದ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ದಟ್ಟಣೆಯನ್ನು ನಿಯಂತ್ರಿಸಲು ದಿನದ 24 ಗಂಟೆಯೂ ಭಾರೀ ವಾಹನಗಳ ಪ್ರವೇಶ ಇರುವುದಿಲ್ಲ.
  • ಪೀಣ್ಯ ಫ್ಲೈಓವರ್ ಮತ್ತು ಡಬಲ್ ಡೆಕ್ಕರ್ ಫ್ಲೈಓವರ್: ಈ ಮಾರ್ಗಗಳಲ್ಲೂ ಸಹ ಸುರಕ್ಷತಾ ಮುನ್ನೆಚ್ಚರಿಕೆಯಾಗಿ ಕೆಲವು ನಿರ್ದಿಷ್ಟ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಯಾವತ್ತಿನಿಂದ ಹೊಸ ರೂಲ್ಸ್ ಜಾರಿ?

ಸೆಪ್ಟೆಂಬರ್ 4ರಿಂದ ಬಿಜಿಎಸ್ ಫ್ಲೈಓವರ್, ಏರ್‌ಪೋರ್ಟ್ ಫ್ಲೈಓವರ್ ರಸ್ತೆ ಹಾಗೂ ಡಬಲ್ ಡೆಕ್ಕರ್ ಫ್ಲೈಓವರ್‌ನಲ್ಲಿ ಹೊಸ ನಿಬಂಧನೆಗಳು ಜಾರಿಗೆ ಬರಲಿವೆ. ಸೆಪ್ಟೆಂಬರ್ 11ರಿಂದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ದ್ವಿಚಕ್ರ ವಾಹನಗಳ ನಿಷೇಧದ ನಿಯಮ ಅಧಿಕೃತವಾಗಿ ಜಾರಿಯಾಗಲಿದೆ.

Comments (0)

Your email address will not be published. Required fields are marked *

Back to top button