National

ಪಂಜಾಬ್‌ನಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ ಅವಘಡ!

Fire incident on a moving train in Punjab!

ಚಂಡೀಗಢ : ಅಮೃತಸರ್‌ನಿಂದ ಜಲ್ಪಿಗುರಿಯತ್ತ ಸಂಚರಿಸುತ್ತಿದ್ದ ಕರ್ಮಭೂಮಿ ಎಕ್ಸ್‌ಪ್ರೆಸ್ ರೈಲಿನ 4 ಬೋಗಿಗಳು ಬೆಂಕಿ ಹೊತ್ತಿ ಉರಿದಿದೆ. ಈ ಘಟನೆ ಪಂಜಾಬ್‌ನ ಪಟಿಯಾಲಾ ಜಿಲ್ಲೆಯ ಬಸಂತಪುರ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ರೈಲಿನ ಎಂಜಿನ್‌ನಿಂದ 5ನೇ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಲೋಕೋ ಪೈಲಟ್‌ ರೈಲು ನಿಲ್ಲಿಸಿದ್ದು, ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ಲೋಕೋ ಪೈಲಟ್‌ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಈ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಲ್ಲದೇ ಯಾರಿಗೂ ಗಾಯಗಳಾಗಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. 

Comments (0)

Your email address will not be published. Required fields are marked *

Back to top button
Verified by MonsterInsights