
ನವದೆಹಲಿ: ದೇಶದ ಆರ್ಥಿಕತೆ ಮತ್ತು ಪೆಟ್ರೋಲ್ ಬೆಲೆ ಏರಿಕೆಯ ಬಗ್ಗೆ ಪ್ರತಿಪಕ್ಷಗಳು ಟೀಕೆ ಮಾಡುತ್ತಿರುವ ಬೆನ್ನಲ್ಲೇ, ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಕಾಂಗ್ರೆಸ್‌ಗೆ ಹಳೆಯ ಇತಿಹಾಸವನ್ನು ನೆನಪಿಸುವ ಮೂಲಕ ತೀಕ್ಷ್ಣವಾಗಿ ಎದುರುತ್ತರ ನೀಡಿದ್ದಾರೆ. ಯುಪಿಎ ಸರ್ಕಾರದ ಅವಧಿಯ ವೈಫಲ್ಯಗಳನ್ನು ಪಟ್ಟಿ ಸಮೇತ ವರದಿ ನೀಡಿದ್ದ ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತದ ಆರ್ಥಿಕತೆ ಎಷ್ಟು ಬಲಿಷ್ಠವಾಗಿದೆ ಎಂಬ ಅಂಕಿಅಂಶಗಳನ್ನು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌರವ್ ಭಾಟಿಯಾ, “ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಾನು ಗೌರವದಿಂದ ಒಂದು ವಿಷಯ ನೆನಪಿಸಲು ಬಯಸುತ್ತೇನೆ. 2012ರ ಸೆಪ್ಟೆಂಬರ್‌ನಲ್ಲಿ ಪೆಟ್ರೋಲ್ ಬೆಲೆ ಏರಿಕೆಯ ಬಗ್ಗೆ ಪ್ರಶ್ನೆ ಎದ್ದಾಗ, ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ‘ಗಿಡದಲ್ಲಿ ಹಣ ಬೆಳೆಯುವುದಿಲ್ಲ’ ಎಂಬ ವಿತಂಡವಾದದ ಹೇಳಿಕೆ ನೀಡಿ ಕೈ ತೊಳೆದುಕೊಂಡಿದ್ದರು. ಅಂದು ದೇಶದ ಜನರ ಸಂಕಷ್ಟಕ್ಕೆ ಅವರಿಂದ ಬೇಜವಾಬ್ದಾರಿ ಉತ್ತರ ಸಿಕ್ಕಿತ್ತು” ಎಂದು ನೆನಪಿಸಿದರು.
ಯೋಧರಿಗಿರಲಿಲ್ಲ ಹಣ-ಹೆಲಿಕಾಪ್ಟರ್ ಗಳಲ್ಲಿ ಗಾಂಧಿ ಫ್ಯಾಮಿಲಿ ಬಣ
ಯುಪಿಎ ಸರ್ಕಾರದ ರಕ್ಷಣಾ ನೀತಿಯನ್ನು ಟೀಕಿಸಿದ ಭಾಟಿಯಾ, “2013-14ರಲ್ಲಿ ಅಂದಿನ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು ಖಜಾನೆಯಲ್ಲಿ ಹಣವಿಲ್ಲ ಎಂದಿದ್ದರು. ದೇಶದ ಭದ್ರತೆಗೆ,ಸೈನಿಕರ ಬುಲೆಟ್ ಪ್ರೂಫ್ ಜಾಕೆಟ್‌ಗಳಿಗೆ ಅಂದು ಹಣವಿರಲಿಲ್ಲ. ಆದರೆ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಬಳಸುವ ವಿವಿಐಪಿ ಹೆಲಿಕಾಪ್ಟರ್‌ಗಳಿಗೆ ಮಾತ್ರ ಹಣದ ಕೊರತೆ ಇರಲಿಲ್ಲ” ಎಂಬ ಗಂಭೀರ ಆರೋಪವನ್ನು ಮಾಡಿದರು.
ಭಾರತದ ವಿದೇಶಿ ವಿನಿಮಯ ಮೀಸಲು ಈಗ 710 ಶತಕೋಟಿ USD!
ಇಂದಿನ ಭಾರತದ ಆರ್ಥಿಕ ಬಲವನ್ನು ಶ್ಲಾಘಿಸಿದ ಅವರು, “ಜಾಗತಿಕ ಮಟ್ಟದಲ್ಲಿ ಅಸ್ಥಿರತೆ ಇದ್ದರೂ ಸಹ ಭಾರತವು ಇಂದು ಬಲಿಷ್ಠವಾಗಿದೆ. ಕಳೆದ ಎರಡು ತಿಂಗಳುಗಳಿಂದ ಜಾಗತಿಕ ಮಾರುಕಟ್ಟೆಯಲ್ಲಿ ಏರುಪೇರಿದ್ದರೂ, ಭಾರತದ ಬಳಿ ಸುಮಾರು 710 ಶತಕೋಟಿ ಯುಎಸ್ ಡಾಲರ್ (USD) ವಿದೇಶಿ ವಿನಿಮಯ ಮೀಸಲು ಸಂಗ್ರಹವಿದೆ.ಇದು ಮೋದಿ ಸರ್ಕಾರದ ಆರ್ಥಿಕ ಶಕ್ತಿಗೆ ಸಾಕ್ಷಿ” ಎಂದರು.
ಪ್ರತಿಪಕ್ಷಗಳು ಜನರ ನಡುವೆ ಕೇವಲ ಗೊಂದಲ ಸೃಷ್ಟಿಸಲು, ಭಯ ಹರಡಲು ‘ಪ್ಯಾನಿಕ್ ಬಟನ್’ ಒತ್ತುತ್ತಿವೆ. ಆದರೆ ದೇಶದ ಆರ್ಥಿಕ ಅಡಿಪಾಯ ಭದ್ರವಾಗಿದೆ ಎಂದು ಭಾಟಿಯಾ ವಿಶ್ವಾಸ ವ್ಯಕ್ತಪಡಿಸಿದರು.
#GauravBhatia #BJP #Congress #ManmohanSingh #IndianEconomy #ForexReserves #RahulGandhi #UAPvsNDA #PoliticalWar #FreedomTV #BreakingNews #DelhiNews




