bengaluru

ಬೆಂಗಳೂರಲ್ಲಿ ಖಾಲಿ ನಿವೇಶನ ಮಾಲೀಕರಿಗೆ GBA ಶಾಕ್!

GBA shock for vacant plot owners in Bengaluru!

ಬೆಂಗಳೂರು : ರಾಜಧಾನಿಯಲ್ಲಿ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಡದ ಮಾಲೀಕರಿಗೆ GBA ಬಿಗ್ ಶಾಕ್ ನೀಡಿದೆ. ಖಾಲಿ ನಿವೇಶನಗಳನ್ನು ಕಡ್ಡಾಯವಾಗಿ ಸ್ವಚ್ಛವಾಗಿಟ್ಟುಕೊಳ್ಳುವಂತೆ ಸೂಚಿಸಿರುವ GBA, ತಪ್ಪಿದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ “ತ್ಯಾಜ್ಯದಿಂದ ಸ್ವಾತಂತ್ರ್ಯ” ಅಭಿಯಾನವನ್ನು ಹಮ್ಮಿಕೊಂಡಿರುವ GBA, ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ನಗರದ ಎಲ್ಲಾ ಖಾಲಿ ನಿವೇಶನಗಳ ಮಾಲೀಕರಿಗೆ ಆಗಸ್ಟ್ 15ರೊಳಗೆ ತಮ್ಮ ನಿವೇಶನಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವಂತೆ ಕಟ್ಟುನಿಟ್ಟಿನ ಡೆಡ್‌ಲೈನ್ ವಿಧಿಸಿದೆ.

ಆಗಸ್ಟ್ 15ರೊಳಗೆ ಸ್ವಚ್ಛಗೊಳಿಸದಿದ್ದರೆ GBAಯಿಂದಲೇ ಕಸ ತೆರವು ಕಾರ್ಯಾಚರಣೆ ನಡೆಯಲಿದೆ. ಅಷ್ಟೇ ಅಲ್ಲದೆ, ಸ್ವಚ್ಛತಾ ವೆಚ್ಚ ಹಾಗೂ ತ್ಯಾಜ್ಯ ಸಾಗಾಣಿಕೆ ವೆಚ್ಚ ಮಾಲೀಕರಿಂದಲೇ ವಸೂಲಿ ಮಾಡಲಾಗುವುದು.

ನಿವೇಶನವಾರು ಸ್ವಚ್ಛತಾ ಮತ್ತು ಸಾಗಾಣಿಕೆ ವೆಚ್ಚದ ವಿವರ:

20×30 ನಿವೇಶನಕ್ಕೆ ಸ್ವಚ್ಛತಾ ವೆಚ್ಚ ₹6,700ರಿಂದ ₹7,700
30×40 ನಿವೇಶನಕ್ಕೆ ಸ್ವಚ್ಛತಾ ವೆಚ್ಚ ₹13,400ರಿಂದ ₹14,400
50×80 ನಿವೇಶನಕ್ಕೆ ಸ್ವಚ್ಛತಾ ವೆಚ್ಚ ₹46,700ರಿಂದ ₹47,700
50×80 ನಿವೇಶನದ ಡೆಬ್ರಿಸ್ ಸಾಗಾಣಿಕೆಗೆ ₹1.28 ಲಕ್ಷ ವೆಚ್ಚ

ಇನ್ನು ಹೆಚ್ಚಿನ ವಿಸ್ತೀರ್ಣದ ನಿವೇಶನಗಳಿಗೆ ಅದಕ್ಕನುಗುಣವಾಗಿ ಶುಲ್ಕ ವಿಧಿಸಲಾಗುವುದು.

Comments (0)

Your email address will not be published. Required fields are marked *

Back to top button