ರಾಜಕೀಯ
ಶಾಸಕರು ರಾಜೀನಾಮೆ ಕೊಟ್ಟರೆ ತಕ್ಷಣವೇ ಅಂಗೀಕಾರ – ಸಿಎಂ ಡಿ.ಕೆ.ಶಿವಕುಮಾರ್ ಖಡಕ್ ವಾರ್ನಿಂಗ್!
If MLAs resign, their resignations will be accepted immediately – CM D.K. Shivakumar's stern warning!

ಬೆಂಗಳೂರು : ನೂತನ ಸಚಿವ ಸಂಪುಟ ರಚನೆ ಬೆನ್ನಲ್ಲೇ ಕಾಂಗ್ರೆಸ್ ಪಾಳಾಯದಲ್ಲಿ ಬಂಡಾಯ ಭುಗಿಲೆದ್ದಿದೆ. ಸಚಿವ ಸ್ಥಾನ ಕೈತಪ್ಪಿ ಅಸಮಾಧಾನಗೊಂಡಿರುವ ಹಾಗೂ ರಾಜೀನಾಮೆ ನೀಡುತ್ತೇವೆ ಎಂದು ಹೇಳಿಕೆ ನೀಡುತ್ತಿರುವ ಶಾಸಕರಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ರಾಜೀನಾಮೆ ನೀಡುವುದು ರಾಜಕೀಯದಲ್ಲಿ ಕಾಮನ್, ಶಾಸಕರು ರಾಜೀನಾಮೆ ಕೊಟ್ರೆ ಮುಲಾಜಿಲ್ಲದೇ ಅಂಗೀಕರಿಸುವುದಾಗಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ವೀರೇಂದ್ರ ಪಾಟೀಲ್ ಕಾಲದಲ್ಲಿ ಬಂಗಾರಪ್ಪ, ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಅವರಿಗೆ ಕೊಟ್ಟಿರಲಿಲ್ಲ. ನಾನು, ಪರಮೇಶ್ವರ್ ಕೂಡ ಸಚಿವ ಸ್ಥಾನ ಕೊಡದಿದ್ದಾಗ ಸುಮ್ಮನೆ ಇರಲಿಲ್ಲವಾ ಎಂದು ಪ್ರಶ್ನಿಸಿದ್ದಾರೆ.
ತಾಳ್ಮೆಯಿಂದ ಇರಬೇಕು, ನಾನು ತಾಳ್ಮೆಯಿಂದ ಇರಲಿಲ್ಲವಾ? ಎಲ್ಲರೂ ತಾಳ್ಮೆಯಿಂದ ಇರಬೇಕು. ಶಾಸಕರು ರಾಜೀನಾಮೆ ಕೊಟ್ಟರೆ ಎರಡೇ ನಿಮಿಷದಲ್ಲಿ ಅಂಗೀಕಾರ ಮಾಡಲು ಹೇಳಿದ್ದೇನೆ ಎಂದು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.




