ಪ್ರದೋಷ್ ಮಾಫಿ ಸಾಕ್ಷಿ ಆದೇಶ ಪ್ರಶ್ನಿಸಿ ದರ್ಶನ್ ಅರ್ಜಿ – ಇಂದು ಹೈಕೋರ್ಟ್ ಮಹತ್ವದ ತೀರ್ಪು!
Darshan's application challenging Pradosh's pardon witness order - High Court's important decision today!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜೈಲಿನಲ್ಲಿರುವ ನಟ ದರ್ಶನ್ ಹಾಗೂ ಗ್ಯಾಂಗ್ ಸಂಕಷ್ಟಗಳು ಹೆಚ್ಚಾಗುತ್ತಿದೆ. ದರ್ಶನ್ ಆಪ್ತನೆ ಮಾಫಿ ಸಾಕ್ಷಿಯಾಗಿ ತಿರುಗಿದ್ದಾನೆ. ಇಂದು ಸಂಜೆ 4 ಗಂಟೆಗೆ ಹೈಕೋರ್ಟ್ ಮಹತ್ವದ ಆದೇಶ ಪ್ರಕಟಿಸಲಿದೆ.
ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿವರ್ತಿಸಿರುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ಗೆ ಸಲ್ಲಿಸಲಾಗಿರುವ ಅರ್ಜಿಯ ತೀರ್ಪು ಇಂದು ಹೊರಬೀಳಲಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಇಂದು ಸಂಜೆ 4 ಗಂಟೆಗೆ ಈ ಕುರಿತಾದ ಮಹತ್ವದ ಆದೇಶವನ್ನು ಪ್ರಕಟಿಸಲಿದೆ.
ಪ್ರದೋಷ್ ಮಾಫಿ ಸಾಕ್ಷಿಯಾಗಿ ಬದಲಾಗಿರುವುದು ಪ್ರಕರಣದ ತನಿಖೆ ಮತ್ತು ವಿಚಾರಣೆಯ ದಿಕ್ಕನ್ನೇ ಬದಲಿಸುವ ಸಾಧ್ಯತೆಯಿದೆ. ಹೀಗಾಗಿ, ಹೈಕೋರ್ಟ್ ಪೀಠದ ಇಂದಿನ ತೀರ್ಪು ಹೇಗಿರಲಿದೆ ಎಂಬ ಕುತೂಹಲ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳಲ್ಲಿದೆ.
ಹೈಕೋರ್ಟ್‌ನಲ್ಲಿ ದರ್ಶನ್ ಪರವಾಗಿ ತೀರ್ಪು ಬಂದು, ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿರುವ ಆದೇಶ ರದ್ದಾದರೆ, ಅದು ಪ್ರಕರಣದಲ್ಲಿ ಪ್ರದೋಷ್ ಕಾನೂನು ಹೋರಾಟಕ್ಕೆ ತೀವ್ರ ಹಿನ್ನಡೆಯನ್ನುಂಟು ಮಾಡಲಿದೆ. ಇದರಿಂದ ಅವರ ಮುಂದಿನ ಕಾನೂನು ನಡೆಗಳು ಮತ್ತಷ್ಟು ಕಠಿಣವಾಗಲಿವೆ.




