ಕ್ರೈಂ ಸ್ಟೋರಿ

ಫ್ರೆಂಡ್​ಶಿಪ್ ನಿರಕಾರಿಸಿದ್ದಕ್ಕೆ ಚಾಕುವಿನಿಂದ ಇರಿದು ಮಾಡೆಲ್ ಹತ್ಯೆ!

Model murdered by stabbing for rejecting friendship!

ನವದೆಹಲಿ : ಸ್ನೇಹ ಬೆಳೆಸಲು ನಿರಾಕರಿಸಿದ್ದಕ್ಕೆ ಜಿಮ್ ಟ್ರೇನರ್ ಮನೆಗೆ ನುಗ್ಗಿ ಮಾಡೆಲ್‌ ಅನ್ನು ಕೊಲೆ ಮಾಡಿರುವ ಘಟನೆ ದೆಹಲಿಯ ತಿಲಕ್ ನಗರದಲ್ಲಿ ನಡೆದಿದೆ. 21 ವರ್ಷದ ಯುವತಿ ಮುಸ್ಕಾನ್ ಹತ್ಯೆಯಾದ ಮಾಡೆಲ್.‌

ಇಮ್ರಾನ್ ಯುವತಿಯ ಮನೆಯೊಳಗೆ ನುಗ್ಗಿ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ. ಮುಸ್ಕಾನ್ ಕೆಲವು ದಿನಗಳ ಹಿಂದಷ್ಟೇ ಆರೋಪಿಗೆ ಪರಿಚಯವಾಗಿದೆ. ಜಿಮ್‌ಗೆ ಹೋಗುತ್ತಿದ್ದಾಗ ಮುಸ್ಕಾನ್‌ಗೆ ಇಮ್ರಾನ್ ಪರಿಚಯವಾಗಿದೆ. ಅಲ್ಲದೇ ಭೇಟಿಯಾದಾಗಿನಿಂದಲೂ ಆಕೆಯೊಂದಿಗೆ ಸ್ನೇಹ ಬೆಳೆಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದ. ಇದೀಗ ಮನೆಯಲ್ಲಿ ಯಾರೂ ಇಲ್ಲದನ್ನು ತಿಳಿದು, ಮನೆಗೆ ನುಗ್ಗಿ ಕೊಲೆ ಮಾಡಿ, ಪರಾರಿಯಾಗಿದ್ದಾನೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ, ತನಿಖೆ ಆರಂಭಿಸಿದೆ. ಆರೋಪಿಯನ್ನು ಪತ್ತೆಹಚ್ಚಲು ಮತ್ತು ಘಟನೆಯ ಬಗ್ಗೆ ತಿಳಿಯಲು ಹತ್ತಿರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. 

Comments (0)

Your email address will not be published. Required fields are marked *

Back to top button