ಕ್ರೈಂ ಸ್ಟೋರಿ

ನಕಲಿ ಔಷಧಿ ದಂಧೆ ಕಿಂಗ್​ ಪಿನ್​ ಪ್ರಶಾಂತ್​ ಅರೆಸ್ಟ್!

Prashanth, the kingpin of the fake medicine racket, arrested!

ಬೆಂಗಳೂರು : ರಾಜ್ಯದಲ್ಲಿ ನಕಲಿ ಔಷಧಿ ದಂಧೆ ಪ್ರಕರಣ ಭಾರೀ ಸಂಚಲನ ಸೃಷ್ಟಿಸಿದ್ದು, ಈ ಪ್ರಕರಣ ಸಂಬಂಧ ಎಸ್‌ಐಟಿ ಹಾಗೂ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ (FSDA) ಜಂಟಿಯಾಗಿ ಇದರ ತನಿಖೆ ನಡೆಸುತ್ತಿವೆ. ಇದೀಗ ನಕಲಿ ಔಷಧಿ ದಂಧೆ ಕಿಂಗ್‌ಪಿನ್ ಪ್ರಶಾಂತ್‌ನನ್ನು ಎಸ್‌ಐಟಿ (SIT) ತಂಡ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಬಂಧಿಸಿದೆ.

ಅಜರ್‌ಬೈಜಾನ್ ದೇಶದಿಂದ ವಿಮಾನದಲ್ಲಿ ವಾಪಸ್ ಆಗುತ್ತಿದ್ದ ವೇಳೆ ಖಚಿತ ಮಾಹಿತಿ ಪಡೆದ ವಿಶೇಷ ತನಿಖಾ ತಂಡ (SIT), ಏರ್‌ಪೋರ್ಟ್‌ನಲ್ಲೇ ಆತನನ್ನು ವಶಕ್ಕೆ ಪಡೆದು ಸದ್ಯ ತೀವ್ರ ವಿಚಾರಣೆ ನಡೆಸುತ್ತಿದೆ. ನಕಲಿ ಔಷಧಿ ಜಾಲದ ಪ್ರಮುಖ ಆರೋಪಿಯಾಗಿದ್ದ ಪ್ರಶಾಂತ್ ವಿರುದ್ಧ ಈಗಾಗಲೇ ಲುಕ್ ಔಟ್ ನೋಟಿಸ್ (LOC) ಜಾರಿ ಮಾಡಲಾಗಿತ್ತು.

ವಿದೇಶಕ್ಕೆ ಪರಾರಿಯಾಗಿದ್ದ ಪ್ರಶಾಂತ್, ಅಜರ್‌ಬೈಜಾನ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ವಶದಲ್ಲಿದ್ದನು. ಕಾನೂನು ಪ್ರಕ್ರಿಯೆಗಳ ಬಳಿಕ ಅಜರ್‌ಬೈಜಾನ್ ಅಧಿಕಾರಿಗಳು ನಿನ್ನೆ ಆತನನ್ನು ಭಾರತಕ್ಕೆ ಕಳುಹಿಸಿಕೊಟ್ಟಿದ್ದರು. ಶಾರ್ಜಾದಿಂದ ಬಂದಿಳಿದ ವಿಮಾನದಲ್ಲಿ ಪ್ರಶಾಂತ್ ಬೆಂಗಳೂರಿಗೆ ಆಗಮಿಸಿದ್ದನು.

ಪ್ರಶಾಂತ್ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಎಸ್‌ಐಟಿ ಅಧಿಕಾರಿಗಳು ನಿಗಾ ವಹಿಸಿದ್ದರು. ವಿಮಾನ ನಿಲ್ದಾಣಕ್ಕೆ ಬಂದ ತಕ್ಷಣವೇ ಅಗತ್ಯ ಮಾಹಿತಿ ಕಲೆಹಾಕಿದ ಪೊಲೀಸರು, ಏರ್‌ಪೋರ್ಟ್‌ನಲ್ಲೇ ಆತನನ್ನು ಅರೆಸ್ಟ್‌ ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button
Verified by MonsterInsights