ದರ್ಶನ್ಗೆ ಮಾಫಿ ಸಂಕಷ್ಟ – ನಾಳೆ ಪ್ರದೋಷ್ ಹೇಳಿಕೆ ದಾಖಲು!
Darshan faces 'Mafia' trouble – Pradosh's statement to be recorded tomorrow!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಒಪ್ಪಿದ್ದು, ಪ್ರದೋಷ್ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಾಳೆ ಕೋರ್ಟ್ನಲ್ಲಿ ನಡೆಯಲಿದೆ.
ನಾಳೆಯೇ ಪ್ರದೋಷ್ ಪ್ರಾಸಿಕ್ಯೂಷನ್ ವಿಟ್ನೆಸ್ ಹೇಳಿಕೆ ದಾಖಲು
ದರ್ಶನ್ ಆಪ್ತ, A14 ಆಗಿರುವ ಪ್ರದೋಷ್, ತಾನೇ ಕಣ್ಣಾರೆ ಕಂಡ ಘಟನೆಗಳನ್ನು ನ್ಯಾಯಾಧೀಶರ ಮುಂದೆ ವಿವರಿಸಲಿದ್ದಾರೆ. ಈ ಸಂಬಂಧ ಪ್ರದೋಷ್ ಅವರನ್ನು ಕೋರ್ಟ್ಗೆ ಹಾಜರುಪಡಿಸುವಂತೆ 59ನೇ ಸಿಸಿಹೆಚ್ ಕೋರ್ಟ್ ಜೈಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪ್ರದೋಷ್ ವಿಚಾರಣೆ ನಡೆದು ಅಧಿಕೃತ ಹೇಳಿಕೆ ದಾಖಲಾತಿ ಪ್ರಕ್ರಿಯೆ ನಾಳೆ ನಡೆಯಲಿದೆ.
ಪ್ರದೋಷ್ ಮಾಫಿ ಸಾಕ್ಷಿಯಾಗುವುದನ್ನು ತಡೆಯಲು ನಟ ದರ್ಶನ್ ಪರ ವಕೀಲರು ತೀವ್ರ ಪ್ರತಿರೋಧ ಒಡ್ಡಿದ್ದರೂ, ಕಾನೂನು ಹೋರಾಟದಲ್ಲಿ ಹಿನ್ನಡೆಯಾಗಿದೆ. ಪ್ರದೋಷ್ ಮಾಫಿ ಸಾಕ್ಷಿಯಾಗುವುದನ್ನು ತಡೆಯುವ ಪ್ರಯತ್ನ ವಿಫಲವಾಗಿರುವುದು ದರ್ಶನ್ಗೆ ದೊಡ್ಡ ಶಾಕ್ ನೀಡಿದೆ.
ಈ ಬೆಳವಣಿಗೆಯಿಂದ ಕಂಗಾಲಾಗಿರುವ ನಟ ದರ್ಶನ್, ಪ್ರದೋಷ್ ಮಾಫಿ ಸಾಕ್ಷಿ ಕ್ರಮವನ್ನು ಪ್ರಶ್ನಿಸಿ ಈಗ ನೇರವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಲು ನಿರ್ಧಾರ ಮಾಡಿದ್ದಾರೆ. ಸುಪ್ರೀಂಕೋರ್ಟ್ನಲ್ಲಿ ಈ ಆದೇಶವನ್ನು ಪ್ರಶ್ನಿಸಿ ಕಾನೂನು ಹೋರಾಟ ನಡೆಸಲು ದರ್ಶನ್ ಸಿದ್ಧತೆ ನಡೆಸಿದ್ದು, ಮಾಫಿ ಸಾಕ್ಷಿಯ ಭವಿಷ್ಯ ಈಗ ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ನಿರ್ಧಾರವಾಗಲಿದೆ. ದರ್ಶನ್ ಪಾಲಿಗೆ ಇದು ಕೊನೆಯ ಕಾನೂನು ದಾರಿಯಾಗಿದೆ.




