mangaloreಕ್ರೈಂ ಸ್ಟೋರಿ

ಸೌಜನ್ಯ ಕೇಸ್​​ನಲ್ಲಿ ಬಿಗ್ ಡೆವಲಪ್ಮೆಂಟ್ – ಎಲ್ಲ ತನಿಖಾಧಿಕಾರಿಗಳಿಗೆ SIT ನೋಟಿಸ್!

Major development in the Soujanya case – SIT issues notices to all investigating officers!

ಮಂಗಳೂರು : ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ತನಿಖೆಯನ್ನು ತೀವ್ರಗೊಳಿಸಿದೆ. 2012ರಲ್ಲಿ ನಡೆದ ಈ ಘಟನೆಯಿಂದ ಹಿಡಿದು ಇಲ್ಲಿಯವರೆಗಿನ ಎಲ್ಲಾ ಹಂತಗಳ ತನಿಖೆಯ ಮೇಲೆ SIT ಕಣ್ಣಿಟ್ಟಿದ್ದು, ಈವರೆಗೆ ಕೇಸ್ ತನಿಖೆ ನಡೆಸಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

CRPC ಸೆಕ್ಷನ್ 160ರ ಅಡಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದ್ದು, ಇದು ಪ್ರಕರಣದಲ್ಲಿ ಹೊಸ ತಿರುವು ಪಡೆದುಕೊಳ್ಳುವ ಮುನ್ಸೂಚನೆ ನೀಡಿದೆ.

ಪ್ರಕರಣದ ಆರಂಭಿಕ ಹಂತದಿಂದ ಹಿಡಿದು ಸಿಬಿಐ ತನಿಖೆವರೆಗೂ ಕರ್ತವ್ಯ ನಿರ್ವಹಿಸಿದ್ದ ಬೆಳ್ತಂಗಡಿ ಪೊಲೀಸ್ ಠಾಣೆ, ಸಿಐಡಿ (CID) ಹಾಗೂ ಸಿಬಿಐ (CBI) ತಂಡದ ಪ್ರಮುಖ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು SIT ವಿಚಾರಣೆಗೆ ಕರೆದಿದೆ. ಆಗಿನ ಬೆಳ್ತಂಗಡಿ ಠಾಣೆಯ ಇನ್ಸ್‌ಪೆಕ್ಟರ್ ಭಾಸ್ಕರ್ ರೈ, ಪಿಎಸ್‌ಐ ಯೋಗೀಶ್, ಸಿಐಡಿ ತನಿಖಾಧಿಕಾರಿಯಾಗಿದ್ದ ಡಿವೈಎಸ್ಪಿ ರುದ್ರಮುನಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ.

ಅಂದಿನ ಬೆಳ್ತಂಗಡಿ ಠಾಣೆಯ ಎಎಸ್‌ಐ ಕಲೈಮಾರ್, ಮಹಿಳಾ ಹೆಡ್ ಕಾನ್ಸ್‌ಸ್ಟೇಬಲ್ ಸವಿತಾ ಶೆಟ್ಟಿ, ಸಿಬ್ಬಂದಿಗಳಾದ ಸುಂದರ್ ಶೆಟ್ಟಿ, ಕೃಷ್ಣ, ರಿಷಬ್, ನವೀನ್ ಮತ್ತು ಭಾಸ್ಕರ್ ಸೇರಿದಂತೆ ಒಟ್ಟು ಹಲವು ಪೊಲೀಸ್ ಸಿಬ್ಬಂದಿಗೆ SITಯಿಂದ ನೋಟಿಸ್ ಜಾರಿಯಾಗಿದೆ.

Comments (0)

Your email address will not be published. Required fields are marked *

Back to top button
Verified by MonsterInsights