ರೇಣುಕಾಸ್ವಾಮಿ ಕೊಲೆ ಕೇಸ್ – ಇಂದು ದರ್ಶನ್ ಪಾಲಿಗೆ ಬಿಗ್ ಡೇ!
Renukaswamy murder case - Big day for Darshan Pali today!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪಾಲಿಗೆ ಇಂದು ಮಹತ್ವದ ದಿನವಾಗಿದೆ. ಪ್ರಕರಣದ ಎ14 ಆರೋಪಿಯಾಗಿರುವ ಪ್ರದೋಷ್ ಸಲ್ಲಿಸಿರುವ ಮಾಫಿ ಸಾಕ್ಷಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು 59ನೇ ಸೆಷನ್ಸ್ ಕೋರ್ಟ್ ನಡೆಸಿದ್ದು, ಇಂದು ತೀರ್ಪು ನೀಡಲಿದೆ.
ನ್ಯಾಯಾಲಯವು ಪ್ರದೋಷ್ ಅರ್ಜಿಯನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿದರೆ, ನಟ ದರ್ಶನ್‌ಗೆ ಸಂಕಷ್ಟ ಎದುರಾಗಲಿದೆ.
ಏನಿದು ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ?
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾದ ಪ್ರದೋಷ್, ತನಿಖಾಧಿಕಾರಿಗಳ ಮುಂದೆ ಸತ್ಯ ಸಂಗತಿಗಳನ್ನು ಬಿಚ್ಚಿಟ್ಟು ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿರುವ 59ನೇ ಸೆಷನ್ಸ್ ಕೋರ್ಟ್ ಇಂದು ತನ್ನ ಅಂತಿಮ ಆದೇಶವನ್ನು ಹೊರಡಿಸಲಿದೆ. ಕೋರ್ಟ್ ತೀರ್ಪು ಪ್ರದೋಷ್ ಪರವಾಗಿ ಬಂದಲ್ಲಿ, ಅದು ದರ್ಶನ್‌ಗೆ ಹಿನ್ನಡೆಯಾಗಲಿದೆ.
ಜೈಲಿನಲ್ಲಿ ಒಂದೇ ಬ್ಯಾರಕ್‌ನಲ್ಲಿದ್ದರೂ ಕಳೆದ 20 ದಿನಗಳಿಂದ ದರ್ಶನ್ ಹಾಗೂ ಪ್ರದೋಷ್ ಪರಸ್ಪರ ದೂರವೇ ಉಳಿದಿದ್ದರು. ದರ್ಶನ್ ಜೊತೆ ಇರುವುದು ತಮಗೆ ಸರಿಹೋಗುತ್ತಿಲ್ಲ ಎಂದು ಪ್ರದೋಷ್ ಜೈಲಾಧಿಕಾರಿಗಳ ಬಳಿ ಹೇಳಿಕೊಂಡಿದ್ದರು ಎನ್ನಲಾಗಿದೆ.
ಜೈಲು ವಾಸಕ್ಕೆ ದರ್ಶನ್ ಕಾರಣ ಎಂದು ಪ್ರದೋಷ್ ತೀವ್ರ ಅಸಮಾಧಾನಗೊಂಡಿದ್ದು, ಇದೇ ಕಾರಣಕ್ಕಾಗಿ ಪ್ರತ್ಯೇಕ ಸೆಲ್ಗೆ ಶಿಫ್ಟ್ ಮಾಡುವಂತೆ ಪ್ರದೋಷ್ ಮನವಿ ಮಾಡಿದ್ದಾರೆ.




