ರಾಜಕೀಯ

ಅಪೆಕ್ಸ್​ ಬ್ಯಾಂಕ್ ಅಧ್ಯಕ್ಷರಾಗಿ ಡಿಕೆಶಿ ಆಪ್ತ MLC ರವಿ ಆಯ್ಕೆ!

MLC Ravi, a close associate of DKSHI, elected as Apex Bank Chairman!

ಬೆಂಗಳೂರು : ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್‌ನ(APEX BANK) ಅಧ್ಯಕ್ಷ ಗಾದಿ ಕೊನೆಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಪ್ತರಾಗಿರುವ MLC ರವಿ ಅವರ ಪಾಲಾಗಿದೆ. ಅದೇ ರೀತಿ, ಉಪಾಧ್ಯಕ್ಷರಾಗಿ ಶರಣಗೌಡ ಬಯ್ಯಾಪುರ ಅವರು ಆಯ್ಕೆಯಾಗಿದ್ದಾರೆ.

ಈ ಬೆಳವಣಿಗೆಯಿಂದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗ ಹಾಗೂ ಸಚಿವಾಕಾಂಕ್ಷಿಯಾಗಿದ್ದ ಕೆ.ಎನ್. ರಾಜಣ್ಣ ಅವರಿಗೆ ತೀವ್ರ ಮುಖಭಂಗ ಉಂಟಾಗಿದೆ. ಸಚಿವ ಸ್ಥಾನ ವಂಚಿತರಾಗಿದ್ದ ರಾಜಣ್ಣ ಅವರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಮೇಲೆ ತೀವ್ರ ಕಣ್ಣಿಟ್ಟಿದ್ದರು. ಆದರೆ ರಾಜಕೀಯ ಸಮೀಕರಣಗಳು ಮತ್ತು ಒಮ್ಮೂಲದ ಲಾಬಿಯಿಂದಾಗಿ ಕೊನೆ ಕ್ಷಣದಲ್ಲಿ ಅವರಿಗೆ ಹಿನ್ನಡೆಯಾಗಿದೆ.

ನಿಜವಾಗಿ ಈ ಚುನಾವಣೆಯು ನಾಲ್ಕು ತಿಂಗಳ ಹಿಂದೆಯೇ ನಡೆಯಬೇಕಿತ್ತು. ಆದರೆ ಆಕಾಂಕ್ಷಿಗಳ ನಡುವೆ ಉಂಟಾದ ತೀವ್ರ ಪೈಪೋಟಿ ಹಾಗೂ ಒಮ್ಮತದ ಕೊರತೆಯಿಂದಾಗಿ ಚುನಾವಣೆ ಪ್ರಕ್ರಿಯೆ ಮುಂದೂಡಲ್ಪಟ್ಟಿತ್ತು. ಅಂತಿಮವಾಗಿ ಹೈಕಮಾಂಡ್ ಮಟ್ಟದ ತೀರ್ಮಾನದಂತೆ ಎಂಎಲ್ಸಿ ರವಿಗೆ ಅಧ್ಯಕ್ಷ ಪಟ್ಟ ಒಲಿದುಬಂದಿದ್ದು, ಶರಣಗೌಡ ಬಯ್ಯಾಪುರ ಅವರು ಉಪಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಮೂಲಕ ಸಹಕಾರಿ ಕ್ಷೇತ್ರದಲ್ಲೂ ಬಲಿಷ್ಠ ನಾಯಕರ ನಡುವಿನ ರಾಜಕೀಯ ಮೇಲಾಟ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

Comments (0)

Your email address will not be published. Required fields are marked *

Back to top button