ದೇಶ/ವಿದೇಶ

ನೇಪಾಳದಲ್ಲಿ ಮತ್ತೆ ಆತಂಕ – ʻಮಹಾಕಾಳಿʼ ಸೇರುವ ಚೌಲಾನಿ ನದಿಗೆ ಭೂಕುಸಿತ!

Renewed concern in Nepal – Landslide into the Chaulani River, a tributary of the Mahakali!

ಕಠ್ಮಂಡು : ಪ್ರಕೃತಿ ವಿಕೋಪದಿಂದ ಚೇತರಿಸಿಕೊಳ್ಳದ ನೇಪಾಳದಲ್ಲಿ ಮತ್ತೊಂದು ಭೀಕರ ಪ್ರವಾಹದ ಆತಂಕ ಎದುರಾಗಿದೆ. ದಾರ್ಚುಲಾ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ಚೌಲಾನಿ ನದಿಯ ಹರಿವಿಗೆ ಭಾಗಶಃ ಅಡ್ಡಿಯಾಗಿದೆ. 

ನೇಪಾಳದ ಭಟ್ಟಾರ್ ಪ್ರದೇಶದಲ್ಲಿ ಗುಡ್ಡ ಕುಸಿದು ದೊಡ್ಡ ಪ್ರಮಾಣದ ಮಣ್ಣು ಮತ್ತು ಬಂಡೆಗಳು ನೇರವಾಗಿ ಚೌಲಾನಿ ನಡಿಗೆ ಬಿದ್ದಿರುವುದರಿಂದ ನೀರಿನ ಸ್ವಾಭಾವಿಕ ಹರಿವಿಗೆ ತಡೆಯಾಗಿದೆ. ಇದರಿಂದ ನದಿಯ ಕೆಳಭಾಗದಲ್ಲಿ ವಾಸಿಸುವ ಜನರಿಗೆ ಹಠಾತ್ ಪ್ರವಾಹ ಉಂಟಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಅಪಾರ ಪ್ರಮಾಣದ ಮಣ್ಣು ಮತ್ತು ಅವಶೇಷಗಳು ನದಿಗೆ ಕುಸಿದಿವೆ. ಇದರಿಂದ ನದಿಯ ನೀರಿನ ಹರಿವು ಅಸ್ತವ್ಯಸ್ತಗೊಂಡಿದೆ. ಮತ್ತಷ್ಟು ಭೂಕುಸಿತ ಸಂಭವಿಸಿ ನದಿ ಸಂಪೂರ್ಣವಾಗಿ ಬಂದ್ ಆಗುವ ಸಾಧ್ಯತೆಯಿದೆ.

Comments (0)

Your email address will not be published. Required fields are marked *

Back to top button