New delhiದೇಶ/ವಿದೇಶ

ಹಬ್ಬದ ಹೊಸ್ತಿಲಲ್ಲೇ ಗ್ರಾಹಕರಿಗೆ ಶಾಕ್ – ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ 62 ರೂ. ಏರಿಕೆ! 

Shock for consumers right before the festival – Commercial LPG cylinder price hiked by ₹62!

ನವದೆಹಲಿ : ಹಬ್ಬದ ಸೀಸನ್‌ ಆರಂಭಕ್ಕೂ ಮುನ್ನವೇ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇಂದಿನಿಂದ (ಅಕ್ಟೋಬರ್ 1) ಜಾರಿಗೆ ಬರುವಂತೆ 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ರೂ. 62.50 ರಷ್ಟು ಹೆಚ್ಚಿಸಲಾಗಿದೆ.

ದಸರಾ ಹಾಗೂ ದೀಪಾವಳಿಯಂತಹ ಪ್ರಮುಖ ಹಬ್ಬಗಳು ಹತ್ತಿರ ಬರುತ್ತಿರುವ ಈ ಸಂದರ್ಭದಲ್ಲಿ ಬೆಲೆ ಏರಿಕೆಯಾಗಿರುವುದು ಹೋಟೆಲ್ ಮಾಲೀಕರು ಹಾಗೂ ವ್ಯಾಪಾರಸ್ಥರಿಗೆ ದಿಢೀರ್ ಹೊಡೆತ ನೀಡಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯು ರೂ. 62.50 ರಷ್ಟು ಹೆಚ್ಚಳವಾಗುವುದರೊಂದಿಗೆ, ಒಟ್ಟು ಬೆಲೆಯು ರೂ. 2,810 ತಲುಪಿದೆ. ಇದಕ್ಕೂ ಮುನ್ನ ಸೆಪ್ಟೆಂಬರ್ ತಿಂಗಳಲ್ಲಿ ಈ ಸಿಲಿಂಡರ್ ಬೆಲೆ ರೂ. 2,747.50 ಇತ್ತು. ಈ ಹೊಸ ದರಗಳು ಇಂದಿನಿಂದಲೇ ದೇಶಾದ್ಯಂತ ಜಾರಿಗೆ ಬಂದಿವೆ.

ವಾಣಿಜ್ಯ ಸಿಲಿಂಡರ್ ಬೆಲೆ ಗಗನಕ್ಕೇರಿದ್ದರೂ, ಸಾಮಾನ್ಯ ಜನರಿಗೆ ಕೊಂಚ ಸಮಾಧಾನಕರ ಸಂಗತಿಯೆಂದರೆ ಗೃಹಬಳಕೆಯ (14.2 ಕೆ.ಜಿ) ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹೌದು, ಸಾಮಾನ್ಯ ಮನೆಗಳಲ್ಲಿ ಬಳಸುವ ಅಡುಗೆ ಸಿಲಿಂಡರ್ ದರವು ಯಥಾಸ್ಥಿತಿಯಲ್ಲಿದೆ.

ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಿಂದಾಗಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಡಾಬಾಗಳು ಹಾಗೂ ಕ್ಯಾಟರಿಂಗ್ ಉದ್ಯಮಗಳ ಒಟ್ಟು ನಿರ್ವಹಣಾ ವೆಚ್ಚದ ಮೇಲೆ ನೇರ ಪರಿಣಾಮ ಬೀರಲಿದೆ. ಇದು ಮುಂಬರುವ ದಿನಗಳಲ್ಲಿ ಹೊರಗಿನ ತಿಂಡಿ-ತಿನಿಸುಗಳು ಮತ್ತು ಹೋಟೆಲ್ ಊಟದ ಬೆಲೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

Comments (0)

Your email address will not be published. Required fields are marked *

Back to top button
Verified by MonsterInsights