ದೇಶ/ವಿದೇಶ
ಗ್ವಾಟೆಮಲಾದ ಸರೋವರದಲ್ಲಿ ಹೆಲಿಕಾಪ್ಟರ್ ಪತನ – ಇಬ್ಬರು ನಾಪತ್ತೆ, ಐವರ ರಕ್ಷಣೆ!
Helicopter crashes into a lake in Guatemala – two missing, five rescued!

ವಾಷಿಂಗ್ಟನ್ : ಸೆಂಟ್ರಲ್ ಅಮೆರಿಕದ ಗ್ವಾಟೆಮಲಾದಲ್ಲಿ ಪ್ರಸಿದ್ಧ ಅಟಿಟ್ಲಾನ್ ಸರೋವರಕ್ಕೆ ಹೆಲಿಕಾಪ್ಟರ್ ಅಪ್ಪಳಿಸಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಇಬ್ಬರು ನಾಪತ್ತೆಯಾಗಿದ್ದು, ಉಳಿದ ಐವರನ್ನು ರಕ್ಷಿಸಲಾಗಿದೆ.
ಮಳೆಯ ವಾತಾವರಣದ ನಡುವೆ ಹೆಲಿಕಾಪ್ಟರ್ ಸಂಚರಿಸುತ್ತಿತ್ತು. ಈ ವೇಳೆ ಹೆಲಿಕಾಪ್ಟರ್ ಇದ್ದಕ್ಕಿದ್ದಂತೆ ಸರೋವರಕ್ಕೆ ಅಪ್ಪಳಿಸಿದೆ. ಇದರಲ್ಲಿ ಏಳು ಮಂದಿ ಪ್ರಯಾಣಿಸುತ್ತಿದ್ದರು. ಅದರಲ್ಲಿ ಐವರನ್ನು ರಕ್ಷಿಸಲಾಗಿದೆ. ಪೈಲಟ್ ಹಾಗೂ ಓರ್ವ ಪ್ರಯಾಣಿಕ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಮಳೆಯ ವಾತಾವರಣದ ನಡುವೆ ಹೆಲಿಕಾಪ್ಟರ್ ಸರೋವರಕ್ಕೆ ಅಪ್ಪಳಿಸುವ ದೃಶ್ಯ ಸ್ಥಳೀಯರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ನಾಪತ್ತೆಯಾದವರ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.




