ದೇಶ/ವಿದೇಶ

ಭಾರತ, ಚೀನಾ ಮೇಲೆ ಶೇ. 100ರಷ್ಟು ಸುಂಕ ಹೇರಿದ ಅಮೆರಿಕ!

US imposes 100% tariffs on India and China!

ವಾಷಿಂಗ್ಟನ್ : ರಷ್ಯಾದಿಂದ ಕಚ್ಚಾ ತೈಲ ಮತ್ತು ಅನಿಲ ಖರೀದಿಸುತ್ತಿರುವ ಭಾರತ ಹಾಗೂ ಚೀನಾ ಸೇರಿದಂತೆ ಪ್ರಮುಖ ರಾಷ್ಟ್ರಗಳ ಮೇಲೆ ಬರೋಬ್ಬರಿ ಶೇ.100ರಷ್ಟು ಆಮದು ಸುಂಕ ವಿಧಿಸಲು ಪರಮಾಧಿಕಾರ ಹೊಂದಿರುವ ಮಹತ್ವದ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಸಹಿ ಹಾಕಿದ್ದಾರೆ. ಈ ಬೆಳವಣಿಗೆಯಿಂದ ರಷ್ಯಾದ ಪ್ರಮುಖ ಇಂಧನ ಖರೀದಿದಾರರ ಮೇಲೆ ತೀವ್ರ ಆರ್ಥಿಕ ಒತ್ತಡ ಬೀಳುವ ಸಾಧ್ಯತೆಯಿದೆ.

ʻಲಿಂಡ್ಸೆ ಒ. ಗ್ರಹಾಂ ನಿರ್ಬಂಧಗಳ ಕಾಯ್ದೆ-2026ʼ (Lindsey O. Graham Sanctions Act) ಹೆಸರಿನ ಈ ಮಸೂದೆಗೆ ಅಮೆರಿಕದ ಪ್ರತಿನಿಧಿಗಳ ಸಭೆಯಲ್ಲಿ ಬುಧವಾರ 262-159 ಮತಗಳ ಸ್ಪಷ್ಟ ಬಹುಮತದೊಂದಿಗೆ ಅನುಮೋದನೆ ದೊರೆಯಿತು. ಇದಕ್ಕೂ ಮುನ್ನ ಅಮೆರಿಕದ ಮೇಲ್ಮನೆಯಾದ ಸೆನೆಟ್‌ ಕೂಡ ಈ ಮಸೂದೆಗೆ ಹಸಿರು ನಿಶಾನೆ ತೋರಿತ್ತು.

ಡೆಮಾಕ್ರಟಿಕ್ ಸಂಸದ ಸ್ಟೆನಿ ಹೋಯರ್ ಮಂಡಿಸಿದ ತಿದ್ದುಪಡಿಯಲ್ಲಿ ರಷ್ಯಾದ ಇಂಧನವನ್ನು ನೆಚ್ಚಿಕೊಂಡಿರುವ ದೇಶಗಳ ಪಟ್ಟಿಯನ್ನು ಸ್ಪಷ್ಟಪಡಿಸಲಾಗಿದೆ.

ಡೆಮಾಕ್ರಟಿಕ್ ಸಂಸದ ಸ್ಟೆನಿ ಹೋಯರ್ ಮಂಡಿಸಿದ ತಿದ್ದುಪಡಿಯಲ್ಲಿ ಭಾರತ, ಚೀನಾ, ಯುಎಇ, ಟರ್ಕಿ, ಸಿಂಗಾಪುರ, ಅಜರ್‌ಬೈಜಾನ್, ಕಜಕಿಸ್ತಾನ್, ಹಂಗೇರಿ, ಕಿರ್ಗಿಸ್ತಾನ್ ಮತ್ತು ಸ್ಲೊವಾಕಿಯಾ ಸೇರಿ ಒಟ್ಟು 10 ರಾಷ್ಟ್ರಗಳನ್ನು ನೇರವಾಗಿ ಹೆಸರಿಸಲಾಗಿದೆ. ಈ ದೇಶಗಳು ರಷ್ಯಾದಿಂದ ಇಂಧನ ಆಮದು ಮಾಡಿಕೊಳ್ಳುತ್ತಿರುವುದರಿಂದ ಇವುಗಳ ಮೇಲೆ ಶೇ.100ರಷ್ಟು ದ್ವಿತೀಯ ಶ್ರೇಣಿಯ ಸುಂಕ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

ಮಸೂದೆಯಲ್ಲಿ ಏನಿದೆ?

  • ರಷ್ಯಾದ ನಾಯಕತ್ವ ಹಾಗೂ ಇಂಧನ ಕ್ಷೇತ್ರದ ಮೇಲೆ ಕಠಿಣ ನಿರ್ಬಂಧಗಳನ್ನು ಹೇರುವುದು.
  • ನಿರ್ಬಂಧಗಳನ್ನು ತಪ್ಪಿಸಿ ಕಚ್ಚಾತೈಲ ಪೂರೈಸುವ ರಷ್ಯಾದ ‘ಶಾಡೋ ಫ್ಲೀಟ್’ (ರಹಸ್ಯ ಹಡಗುಗಳ ಜಾಲ) ಹಡಗುಗಳನ್ನು ಗುರಿಯಾಗಿಸುವುದು.
  • ರಷ್ಯಾದ ಮೇಲಿನ ಅವಲಂಬನೆ ತಗ್ಗಿಸಲು ಭಾರತ ಮತ್ತು ಚೀನಾ ಸೇರಿದಂತೆ ಇತರ ದೇಶಗಳ ಮೇಲೆ ಭಾರಿ ಆಮದು ಸುಂಕ ವಿಧಿಸಲು ಅಧ್ಯಕ್ಷರಿಗೆ ಅಧಿಕಾರ ನೀಡುವುದು.
  • ಇರಾನ್ ಮೇಲೂ ಹೆಚ್ಚುವರಿ ಆರ್ಥಿಕ ನಿರ್ಬಂಧಗಳನ್ನು ಹೇರುವುದು.

Comments (0)

Your email address will not be published. Required fields are marked *

Back to top button