ರಾಜಕೀಯ

6 ವರ್ಷಗಳ ಬಳಿಕ ಧಾರವಾಡಕ್ಕೆ ವಿನಯ್ ಕುಲಕರ್ಣಿ ಎಂಟ್ರಿ!

Vinay Kulkarni enters Dharwad after 6 years!

ಧಾರವಾಡ : ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣ ಸಂಬಂಧ 6 ವರ್ಷಗಳಿಂದ ಧಾರವಾಡ ಪ್ರವೇಶಕ್ಕೆ ಕೋರ್ಟ್​ನಿಂದ ಅನುಮತಿ ಇಲ್ಲದೇ ದೂರ ಉಳಿದಿದ್ದ ಶಾಸಕ ವಿನಯ್ ಕುಲಕರ್ಣಿಗೆ ರಿಲೀಫ್ ಸಿಕ್ಕಿದೆ.

ಇಂದು ಅಧಿಕೃತವಾಗಿ ಧಾರವಾಡ ಜಿಲ್ಲೆಗೆ ಪ್ರವೇಶಿಸಿದ್ದು ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ರೇಣುಕಾ ಯಲ್ಲಮ್ಮ ದೇವಸ್ಥಾನ, ಮುರುಘಾಮಠ, ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ಗದ್ದುಗೆ ದರ್ಶನ ಪಡೆದಿದ್ದಾರೆ.

ಯಾವುದೇ ಜಯಘೋಷಣೆಗಳನ್ನು ಹಾಕಬಾರದು ಹಾಗೂ ಮೆರವಣಿಗೆ ಮಾಡಬಾರದು ಎಂಬ ಷರತ್ತನ್ನು ನ್ಯಾಯಾಲಯ ವಿನಯ್ ಕುಲಕರ್ಣಿ ಅವರಿಗೆ ವಿಧಿಸಿದ್ದರಿಂದ ಅವರ ಬೆಂಬಲಿಗರು ಮುರುಘಾಮಠದಲ್ಲಿ ಅವರನ್ನು ಯಾವುದೇ ಆಡಂಬರವಿಲ್ಲದೇ ಸರಳವಾಗಿ ಸ್ವಾಗತಿಸಿದರು. ನಂತರ ಶಿವಗಿರಿಯಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದ ವಿನಯ್ ಅವರನ್ನು ಬೆಂಬಲಿಗರು ಸಂತಸದಿಂದ ಬರಮಾಡಿಕೊಂಡರು.

Comments (0)

Your email address will not be published. Required fields are marked *

Back to top button