ದೇಶ/ವಿದೇಶ

ನೇಪಾಳದಲ್ಲಿ ರಣಭೀಕರ ಪ್ರವಾಹ – ಸಾವಿನ ಸಂಖ್ಯೆ 469ಕ್ಕೆ ಏರಿಕೆ!

Devastating floods in Nepal – Death toll rises to 469!

ಕಠ್ಮಂಡು : ನೇಪಾಳದಲ್ಲಿ ಸಂಭವಿಸಿದ ರಣಭೀಕರ ಪ್ರವಾಹಕ್ಕೆ 469 ಜನ ಸಾವನ್ನಪ್ಪಿದ್ದಾರೆ. ಮೃತಪಟ್ಟವರ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದ್ದು, ಪ್ರವಾಹದಿಂದಾಗಿ 1,600ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ.

ಪ್ರವಾಹಕ್ಕೆ ಕೆಸರು, ಅವಶೇಷಗಳಡಿ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ಭರದಿಂದ ಸಾಗಿದ್ದು, ಇದುವರೆಗೆ ರಕ್ಷಣಾ ಸಿಬ್ಬಂದಿ 270 ಶವಗಳನ್ನು ಪತ್ತೆ ಹಚ್ಚಿ ಹೊರತೆಗೆದಿದ್ದಾರೆ. ಪ್ರವಾಹದಲ್ಲಿ ಕನ್ನಡಿಗರು ಸೇರಿ ನೂರಾರು ಭಾರತೀಯರು ಕಣ್ಮರೆಯಾಗಿದ್ದು, ಇದುವರೆಗೆ 21 ಭಾರತೀಯರನ್ನು ರಕ್ಷಣೆ ಮಾಡಲಾಗಿದೆ. ಉಳಿದವರಿಗಾಗಿ ಶೋಧಕಾರ್ಯ ಮುಂದುವರೆದಿದೆ.

ನೇಪಾಳದ ಜಲ ಪ್ರಳಯದಲ್ಲಿ ಧಾರವಾಡದ ರಾಕೇಶ್ (45) ನಾಯಕ್ ನಾಪತ್ತೆಯಾಗಿದ್ದಾರೆ. ಕಳೆದ 10 ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದ ರಾಕೇಶ್ ನಾಯಕ್, ಇಶಾ ಫೌಂಡೇಶನ್ ವತಿಯಿಂದ ಇದೇ ತಿಂಗಳು 10 ರಂದು ಮಾನಸ ಸರೋವರದ ಪ್ರವಾಸಕ್ಕೆ ತೆರಳಿದ್ದರು.

ಆಗಸ್ಟ್ 12ರಂದು ರಾಕೇಶ್ ನಾಯಕ್ ತಮ್ಮ ಪೋಷಕರೊಂದಿಗೆ ಕೊನೆಯಬಾರಿಗೆ ಮಾತನಾಡಿದ್ದರು. ಆದರೆ ಪ್ರವಾಹದ ಅಬ್ಬರ ಶುರುವಾದ ಬಳಿಕ ಅವರು ಯಾವುದೇ ಸಂಪರ್ಕಕ್ಕೆ ಸಿಗಲಿಲ್ಲ. ಮಗನ ಸುಳಿವು ಸಿಗದೆ ಧಾರವಾಡದಲ್ಲಿರುವ ರಾಕೇಶ್ ಅವರ ಮನೆಯಲ್ಲಿ ತೀವ್ರ ಆತಂಕಕ್ಕೊಳಗಾಗಿದ್ದಾರೆ.

Comments (0)

Your email address will not be published. Required fields are marked *

Back to top button