ರಾಜ್ಯ
ಕರ್ನಾಟಕದವರ ರಕ್ಷಣೆಗೆ ವಿಶೇಷ ನೋಡಲ್ ಅಧಿಕಾರಿ ನೇಮಕ!
Special Nodal Officer appointed for the protection of people from Karnataka!

ಬೆಂಗಳೂರು : ನೇಪಾಳದಲ್ಲಿ ಸಂಭವಿಸಿದ ಭಾರೀ ಪ್ರಾಕೃತಿಕ ವಿಕೋಪದಲ್ಲಿ ನಾಪತ್ತೆಯಾಗಿರುವ ಕನ್ನಡಿಗರ ರಕ್ಷಣೆ ಹಾಗೂ ಪತ್ತೆ ಕಾರ್ಯಾಚರಣೆಗೆ ರಾಜ್ಯ ಸರ್ಕಾರವು ವಿಶೇಷ ನೋಡಲ್ ಅಧಿಕಾರಿಯನ್ನಾಗಿ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಯಾದ (OSD) ಅಭಿಜಿತ್ ಗೌಡ ಅವರನ್ನು ನೇಮಿಸಿದೆ.
ನೇಮಕಾತಿಯ ಹಿನ್ನೆಲೆ ನೇಪಾಳದ ದುರಂತ ಪ್ರದೇಶಗಳಲ್ಲಿ ಸಿಲುಕಿರುವ ರಾಜ್ಯದ ಪ್ರಜೆಗಳ ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಮತ್ತು ಸಂತ್ರಸ್ತರ ಕುಟುಂಬಗಳಿಗೆ ತುರ್ತು ನೆರವು ಕಲ್ಪಿಸಲು ಮುಖ್ಯಮಂತ್ರಿಗಳ ಕಚೇರಿಯು ಈ ನಿರ್ಧಾರ ಕೈಗೊಂಡಿದೆ.
ಸಹಾಯವಾಣಿ ಮಾಹಿತಿ ನೇಪಾಳ ದುರಂತದಲ್ಲಿ ಕರ್ನಾಟಕದಿಂದ ತೆರಳಿ ನಾಪತ್ತೆಯಾಗಿರುವವರ ಬಗ್ಗೆ ಮಾಹಿತಿ ಅಥವಾ ಸಹಾಯಕ್ಕಾಗಿ ಸಂಬಂಧಪಟ್ಟ ಕುಟುಂಬದವರು ನೋಡಲ್ ಅಧಿಕಾರಿಯನ್ನು ಸಂಪರ್ಕಿಸಲು ಸರ್ಕಾರವು ಈಗಾಗಲೇ ಅಗತ್ಯ ವ್ಯವಸ್ಥೆಗಳನ್ನು ಮಾಡಿದೆ. ರಾಜ್ಯ ಸರ್ಕಾರದ ತುರ್ತು ಸಹಾಯವಾಣಿಗಳ ಮೂಲಕವೂ ಹೆಚ್ಚಿನ ವಿವರಗಳನ್ನು ಪಡೆಯಬಹುದು.




