ರಾಜ್ಯ
ರಾಜ್ಯ ಸರ್ಕಾರದ ಆಡಳಿತ ಯಂತ್ರಕ್ಕೆ ಭರ್ಜರಿ ಸರ್ಜರಿ – 15 ಮಂದಿ IPS ಅಧಿಕಾರಿಗಳ ವರ್ಗಾವಣೆ!
Major overhaul of the state government's administrative machinery – 15 IPS officers transferred!

ಬೆಂಗಳೂರು : ಸರ್ಕಾರ ಪೊಲೀಸ್ ಇಲಾಖೆಗೆ ಭರ್ಜರಿ ಸರ್ಜರಿ ಮಾಡಿದೆ. ಒಂದೇ ಬಾರಿಗೆ ಒಟ್ಟು 15 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಪ್ರಮುಖವಾಗಿ ಎಡಿಜಿಪಿ ಹರಿಶೇಖರನ್ ಅವರನ್ನು ಡಿ.ಸಿ.ಆರ್.ಇಗೆ, ನಂಜುಂಡಸ್ವಾಮಿ ಅವರನ್ನು ಮಾನವ ಹಕ್ಕುಗಳ ಆಯೋಗಕ್ಕೆ ನೇಮಿಸಲಾಗಿದೆ.
ಅಮಿತ್ ಸಿಂಗ್ ಕೆ.ಎಸ್.ಆರ್.ಪಿ ಐಜಿಪಿಯಾಗಿ, ಚೇತನ್ ವೆಸ್ಟ್ರನ್ ರೇಂಜ್ ಮಂಗಳೂರು ಐಜಿಪಿಯಾಗಿ ಹಾಗೂ ನಿಕಮ್ ಪ್ರಕಾಶ್ ಬೆಳಗಾವಿ ಪೊಲೀಸ್ ಕಮಿಷನರ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಯಾರು- ಎಲ್ಲಿಗೆ ವರ್ಗಾವಣೆ?
- ಪಿ.ಹರಿಶೇಖರನ್, (ಎಡಿಜಿಪಿ)- ಡಿಸಿಆರ್ಇಗೆ ವರ್ಗಾವಣೆ
- ನಂಜುಂಡಸ್ವಾಮಿ (ಎಡಿಜಿಪಿ)– ಮಾನವಹಕ್ಕುಗಳ ಆಯೋಗ
- ದಿವ್ಯಜ್ಯೋತಿ ರೇ-(ಎಡಿಜಿಪಿ), ಅಪರಾಧ ಮತ್ತು ತಾಂತ್ರಿಕ ವಿಭಾಗ
- ಅಮಿತ್ ಸಿಂಗ್, (ಐಜಿಪಿ)- ಕೆಎಸ್ಆರ್ಪಿ
- ಆರ್.ಚೇತನ್, (ಐಜಿಪಿ)– ಪಶ್ಚಿಮ ವಲಯ, ಮಂಗಳೂರು
- ನಿಕ್ಕಮ್ ಪ್ರಕಾಶ್, (ಐಜಿಪಿ)– ಪೊಲೀಸ್ ಆಯುಕ್ತ, ಬೆಳಗಾವಿ
- ಭೂಷಣ್ ಬೊರಸೆ, (ಡಿಐಜಿಪಿ) – ಆಯುಕ್ತ, ಹುಬ್ಬಳ್ಳಿ-ಧಾರವಾಡ
- ಡಿಐಜಿಪಿ ಎನ್.ಶಶಿಕುಮಾರ್ಗೆ ಸ್ಥಳ ತೋರಿಸದೆ ವರ್ಗಾವಣೆ
- ಶಿವಪ್ರಕಾಶ ದೇವರಾಜ್, ಎಸ್ಪಿ, ಮಾದಕದ್ರವ್ಯ ನಿಗ್ರಹ ಪಡೆ
- ಪದ್ಮಿನಿ ಸಾಹು, ಪೊಲೀಸ್ ವರಿಷ್ಠಾಧಿಕಾರಿ)- ಚಿಕ್ಕಬಳ್ಳಾಪುರ
- ಆರ್.ಶ್ರೀನಿವಾಸಗೌಡ, (ಡಿಸಿಪಿ) ಸಿಸಿಬಿ-1 ಬೆಂಗಳೂರು
- ಡಾ.ಶಿವಕುಮಾರ್, (ಎಸ್ಪಿ) -ಕರ್ನಾಟಕ ಲೋಕಾಯುಕ್ತ
- ಕುಶಲ್ ಚೌಕ್ಸೆ, (ಡಿಸಿಪಿ);ಆಡಳಿತ ವಿಭಾಗ, ಬೆಂಗಳೂರು
- ಸಾಹಿಲ್ ಬಾಗ್ಲಾ, ಪೊಲೀಸ್ ವರಿಷ್ಠಾಧಿಕಾರಿ, ಕೊಪ್ಪಳ
- ರೋಹನ್ ಜಗದೀಶ್ (ಎಸ್ಪಿ)- ಬೆಂಗಳೂರು ದಕ್ಷಿಣ ಜಿಲ್ಲೆ
- ಹೆಚ್.ಎನ್.ಮಿಥುನ್, ಪೊಲೀಸ್ ವರಿಷ್ಠಾಧಿಕಾರಿ- ಗದಗ




