bengaluru

ಸ್ಟಾರ್ ಹೋಟೆಲ್​​​ಗಳ ಮೇಲೆ ರೇಡ್ – ಕೊಳೆತ ಮಾಂಸ, ಅವಧಿ ಮೀರಿದ ಪದಾರ್ಥಗಳು ಪತ್ತೆ!

Raids on star hotels - rotten meat, expired ingredients found!

ಬೆಂಗಳೂರು : ರಾಜಧಾನಿ ಬೆಂಗಳೂರಿನ 5 ಸ್ಟಾರ್​ ಹೋಟೆಲ್​, ರೆಸ್ಟೋರೆಂಟ್‌ಗಳಿಗೆ ಆಹಾರ ಇಲಾಖೆಯು ದಿಢೀರ್ ಎಂಟ್ರಿಕೊಟ್ಟಿದ್ದು, ಅಧಿಕಾರಿಗಳ ರೇಡ್​ ವೇಳೆ ಐಷಾರಾಮಿ ಹೋಟೆಲ್​ಗಳ ಬಣ್ಣ ಬಯಲಾಗಿದೆ.

ಯುಬಿ ಸಿಟಿಯಲ್ಲಿರೋ ಹೋಟೆಲ್​​​ಗಳ ಮೇಲೆ ಆಹಾರ ಇಲಾಖೆ ಮೆಗಾ ರೇಡ್ ಮಾಡಿದ್ದು, ಈ ವೇಳೆ ಕೊಳೆತ ಮಾಂಸ, ಫಂಗಸ್​ ಹಿಡಿದ ತರಕಾರಿ ಮತ್ತು ಅವಧಿ ಮುಗಿದ ಹಾಲನ್ನು ಬಳಕೆ ಮಾಡುತ್ತಿರುವುದು ಪತ್ತೆಯಾಗಿದೆ. 

15ಕ್ಕೂ ಹೆಚ್ಚು ಅಧಿಕಾರಿಗಳ ತಂಡವು ನಡೆಸಿದ ಈ ಮೆಗಾ ರೈಡ್ ವೇಳೆ, ಐಷಾರಾಮಿ ಹೋಟೆಲ್‌ಗಳ ಕರ್ಮಕಾಂಡ ಬಯಲಾಗಿದೆ. ಯಲ್ ಚೈನ್ ಹೋಟೆಲ್‌ನಲ್ಲಿ ಬಳಕೆಗೆ ಇಡಲಾಗಿದ್ದ ಸುಮಾರು 55 ಕೆಜಿಗೂ ಅಧಿಕ ಕೊಳೆತ ಹಾಗೂ ಬಳಕೆಗೆ ಯೋಗ್ಯವಲ್ಲದ ಮಾಂಸವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಹೋಟೆಲ್‌ನಲ್ಲಿ ಅವಧಿ ಮುಗಿದ ಮಶ್ರೂಮ್, ಯಾವುದೇ ಲೇಬಲ್ ಇಲ್ಲದ ಕೇಕ್‌ಗಳು ಹಾಗೂ ಬ್ರೆಡ್, ಬನ್ಲ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದು ನಾಶಪಡಿಸಿದ್ದಾರೆ. ಪದೇ ಪದೇ ಕಾಯಿಸಿ ಬಳಸಿದ್ದರಿಂದ ಸಂಪೂರ್ಣ ಕಪ್ಪಾಗಿ, ಆರೋಗ್ಯಕ್ಕೆ ಹಾನಿಕಾರಕವಾಗಿದ್ದ ಬರೋಬ್ಬರಿ 15 ಲೀಟರ್ ಅಡುಗೆ ಎಣ್ಣೆಯನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button