National

ಚಿನ್ನದ ಆಮದು ಸುಂಕ ಶೇ.15ಕ್ಕೆ ಏರಿಸಿದ ಕೇಂದ್ರ ಸರ್ಕಾರ!

Import duty hike on Gold by central government - Modi government

ನವದೆಹಲಿ: ಬಂಗಾರದ ಮೇಲೆ ಆಸೆ ಇಟ್ಟುಕೊಂಡಿದ್ದವರಿಗೆ ಕೇಂದ್ರ ಸರ್ಕಾರ ಭಾರಿ ಶಾಕ್ ನೀಡಿದೆ. ದೇಶದ ಆರ್ಥಿಕತೆಯನ್ನು ರಕ್ಷಿಸುವ ನೆಪವೊಡ್ಡಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಕೇಂದ್ರ ಸರ್ಕಾರವು ದಿಢೀರ್ ಆಗಿ ಶೇ. 15 ಕ್ಕೆ ಏರಿಕೆ ಮಾಡಿದೆ.ಕೆಲವೇ ದಿನಗಳ ಹಿಂದೆ “ಒಂದು ವರ್ಷ ಚಿನ್ನ ಖರೀದಿಸಬೇಡಿ, ಹಣವನ್ನು ಮಿತವಾಗಿ ವ್ಯಯಿಸಿ” ಎಂದು ಪ್ರಧಾನಿ ಮೋದಿ ನೀಡಿದ್ದ ಕರೆ ಈಗ ಕಠಿಣ ಕಾನೂನಿನ ರೂಪ ಪಡೆದಂತಿದೆ.

ಸುಂಕದ ಹೊಸ ಲೆಕ್ಕಾಚಾರ
ಹಣಕಾಸು ಸಚಿವಾಲಯದ ಅಧಿಸೂಚನೆಯಂತೆ ಪರಿಷ್ಕೃತ ಸುಂಕದ ವಿವರ ಹೀಗಿದೆ:

ಮೂಲ ಕಸ್ಟಮ್ಸ್ ಸುಂಕ (BCD): ಶೇ. 10

ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (AIDC): ಶೇ. 5

ಒಟ್ಟು ಪರಿಣಾಮಕಾರಿ ಸುಂಕ: ಶೇ. 15

ಇದರ ಜೊತೆಗೆ ಪ್ಲಾಟಿನಂ ಮೇಲಿನ ಆಮದು ಸುಂಕವನ್ನು ಕೂಡ ಶೇ. 6.4 ರಿಂದ ಶೇ. 15.4 ಕ್ಕೆ ಏರಿಸಲಾಗಿದೆ. ಪಶ್ಚಿಮ ಏಷ್ಯಾ ಬಿಕ್ಕಟ್ಟು ಮತ್ತು ಜಾಗತಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಹೆಚ್ಚುತ್ತಿರುವ ಆಮದು ವೆಚ್ಚವನ್ನು ನಿಯಂತ್ರಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ಮಾರುಕಟ್ಟೆಯಲ್ಲಿ ಬೆಲೆ ಸ್ಫೋಟ!
ಸುಂಕ ಏರಿಕೆಯ ಬೆನ್ನಲ್ಲೇ ಮಲ್ಟಿ ಕಮಾಡಿಟಿ ಎಕ್ಸ್​​ಚೇಂಜ್ (MCX) ನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಗಗನಕ್ಕೇರಿವೆ.

ಚಿನ್ನ-ಬುಧವಾರ ಬೆಳಿಗ್ಗೆ 10 ಗ್ರಾಂ ಚಿನ್ನದ ದರ ₹ 11,055 ಏರಿಕೆಯಾಗಿ ₹ 1,64,497 ರ ಗರಿಷ್ಠ ಮಟ್ಟ ತಲುಪಿದೆ. ಪ್ರಸ್ತುತ ₹ 1,62,728 ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ.

ಬೆಳ್ಳಿ-ಪ್ರತಿ ಕೆಜಿ ಬೆಳ್ಳಿ ಬೆಲೆ ₹ 22,367 ರಷ್ಟು ಭಾರಿ ಏರಿಕೆ ಕಂಡಿದ್ದು, ₹ 3,01,429 ತಲುಪುವ ಮೂಲಕ ದಾಖಲೆ ಬರೆದಿದೆ.

2025-26ರ ಸಾಲಿನಲ್ಲಿ ಭಾರತದ ಚಿನ್ನದ ಆಮದು ಶೇ. 24ಕ್ಕಿಂತ ಹೆಚ್ಚು ಏರಿಕೆಯಾಗಿ ದಾಖಲೆಯ 71.98 ಶತಕೋಟಿ ಡಾಲರ್ ತಲುಪಿತ್ತು. ರತ್ನ ಮತ್ತು ಆಭರಣ ಉದ್ಯಮವನ್ನು ಬೆಂಬಲಿಸಲು ಸರ್ಕಾರವು 2024-25ರ ಬಜೆಟ್‌ನಲ್ಲಿ ಸುಂಕವನ್ನು ಶೇ. 6 ಕ್ಕೆ ಇಳಿಸಿತ್ತು. ಆದರೆ, ಪ್ರಸ್ತುತ ರೂಪಾಯಿ ಮೌಲ್ಯವು ಡಾಲರ್ ಎದುರು 95.63 ರಷ್ಟು ಕುಸಿದು ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪಿರುವುದರಿಂದ,ಸರ್ಕಾರ ತನ್ನ ಹಳೆಯ ನಿರ್ಧಾರವನ್ನು ಹಿಂತೆಗೆದುಕೊಂಡು ಮತ್ತೆ ಶೇ. 15ರ ಸುಂಕವನ್ನು ಜಾರಿಗೆ ತಂದಿದೆ.ಕೇಂದ್ರದ ಈ ನಡೆಯಿಂದಾಗಿ ಮದುವೆ ಮತ್ತು ಹಬ್ಬದ ಸೀಸನ್‌ನಲ್ಲಿ ಚಿನ್ನ ಕೊಳ್ಳುವವರಿಗೆ ಭಾರಿ ಆರ್ಥಿಕ ಹೊರೆ ಬೀಳುವುದು ಖಚಿತವಾಗಿದ್ದು ಬಂಗಾರಪ್ರಿಯರಿಗೆ ಭಾರಿ ನಿರಾಸೆಯಾಗಿದೆ.

#GoldPriceHike #ImportDuty #PMModi #BreakingNews #MCXIndia #SilverPrice #IndianEconomy #FinanceMinistry #GoldRateToday #RupeeDepreciation #FreedomTV

Comments (0)

Your email address will not be published. Required fields are marked *

Back to top button