BIharಶಿಕ್ಷಣ

ಹೆಣ್ಣು ಮಕ್ಕಳಿಗೆ ಶಿಕ್ಷಣ ಬೇಡ! ಎಂದ ಶಿಕ್ಷಣ ಸಚಿವ

education no need for girl children in Bihar said Education minister mIthilesh Tiwari

ಶಿಕ್ಷಣ ಸಚಿವರಿಂದಲೇ ಸ್ತ್ರೀ ಕುಲಕ್ಕೆ ಅಪಮಾನ!

ಪಾಟ್ನಾ: ನಳಂದಾ, ವಿಕ್ರಮಶಿಲೆಯಂತಹ ವಿಶ್ವವಿದ್ಯಾಲಯಗಳನ್ನು ಭಾರತಕ್ಕೆ ಕೊಡುಗೆಯಾಗಿ ನೀಡಿದ ಜ್ಞಾನದ ಭೂಮಿ ಬಿಹಾರ. ಇಂತಹ ನೆಲದಲ್ಲೇ ಶಿಕ್ಷಣ ಸಚಿವ ಮಿಥಿಲೇಶ್ ತಿವಾರಿ ‘ಮಹಿಳೆಯರಿಗೆ ಶಿಕ್ಷಣ ಬೇಡ, ಅವರು ಮನೆಯಲ್ಲಿದ್ದರೆ ಸಾಕು’ಎಂದು ಹೇಳಿರುವುದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಇವರ ಮನಸ್ಥಿತಿ, ಇವರ ಮೂರ್ಖತನ, ಅಜ್ಞಾನದ ಮಾತುಗಳು ನಾವು 21ನೇ ಶತಮಾನದಲ್ಲಿ ಜೀವಿಸುತ್ತಿದ್ದೇವೆಯೇ ಅಥವಾ ಶಿಲಾಯುಗದಲ್ಲಿ ಜೀವಿಸುತ್ತಿದ್ದೇವೆಯೇಎಂಬ ಅನುಮಾನ ಮೂಡಿಸಿದೆ.

ಮಿಥಿಲೇಶ್ ತಿವಾರಿ ವಿರುದ್ಧ ಸಾರ್ವಜನಿಕರ ಆಕ್ರೋಶ!

ಬಿಹಾರದಲ್ಲಿ ಹೊಸ ಸರ್ಕಾರದ ರಚನೆಯ ಬೆನ್ನಲ್ಲೇ ಶಿಕ್ಷಣ ಸಚಿವ ಮಿಥಿಲೇಶ್ ತಿವಾರಿ ಅವರು ಮಹಿಳಾ ಶಿಕ್ಷಣದ ಕುರಿತು ನೀಡಿರುವ ಹೇಳಿಕೆ ಈಗ ದೇಶಾದ್ಯಂತ ಭಾರಿ ವಿವಾದಕ್ಕೆ ನಾಂದಿ ಹಾಡಿದೆ. ಶಿಕ್ಷಣದ ಗುಣಮಟ್ಟ ಸುಧಾರಿಸಬೇಕಾದ ಸಚಿವರೇ, ಹೆಣ್ಣುಮಕ್ಕಳು ಮನೆಯಲ್ಲಿದ್ದರೆ ಸಾಕು ಅವರಿಗೆ ಶಿಕ್ಷಣದ ಅಗತ್ಯವಿಲ್ಲ ಎನ್ನುವ ಮೂಲಕ ಸಂಕುಚಿತ ಹೇಳಿಕೆ ನೀಡಿದ್ದಾರೆ.ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಿಕ್ಷಣ ಸಚಿವ ಮಿಥಿಲೇಶ್ ತಿವಾರಿ, “ಹೆಣ್ಣುಮಕ್ಕಳು ಮನೆಯಲ್ಲಿದ್ದರೆ ಸಾಕು, ಅವರಿಗೆ ಶಿಕ್ಷಣದ ಅವಶ್ಯಕತೆ ಏನಿದೆ? ಮಹಿಳೆಯರನ್ನು ಕತ್ತಲಿನ ಕೂಪಕ್ಕೆ ತಳ್ಳುವ ಇವರ ಈ ಮಾತು ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಭಾರತದ ಸಾಧಕಿಯರನ್ನೇ ಮರೆತ ಮೂಢ ಸಚಿವ!
ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಅಂದು ಸಮಾಜದ ಕಲ್ಲು-ಸಗಣಿ ಏಟು ತಿಂದಿದ್ದಕ್ಕೆ ಇಂದು ಭಾರತದ ನಾರಿಯರು ದೇಶ ವಿದೇಶದಲ್ಲಿ ಸಾಧನೆ ಮಾಡುತ್ತಿದ್ದಾರೆ. ಇಂದಿರಾ ಗಾಂಧಿ, ಕಲ್ಪನಾ ಚಾವ್ಲಾ, ಕಿರಣ್ ಬೇಡಿ, ಲತಾ ಮಂಗೇಶ್ಕರ್ ಅಂತಹ ಸಾಧಕಿಯರು ಶಿಕ್ಷಣ ಪಡೆದಿದ್ದಕ್ಕೇ ಇಂದು ದೇಶ ಹೆಮ್ಮೆ ಪಡುವಂತಾಗಿದೆ.”ಒಬ್ಬ ಹೆಣ್ಣು ಅಕ್ಷರ ಕಲಿತರೆ ಒಂದು ಕುಟುಂಬವೇ ಅಕ್ಷರ ಕಲಿತಂತೆ ಎಂಬ ಕನಿಷ್ಠ ಜ್ಞಾನವೂ ಸಚಿವರಿಗಿಲ್ಲವೇ ಎಂಬ ಪ್ರಶ್ನೆ ಮೂಡಿದೆ.

ಅಧಿಕಾರದ ಮದವೋ ಅಥವಾ ಅಜ್ಞಾನವೋ?
ಲಿಂಗ ತಾರತಮ್ಯದ ಪರಮಾವಧಿಯಂತಿರುವ ಈ ಹೇಳಿಕೆ ಪುರುಷ ಪ್ರಧಾನ ಸಮಾಜದ ಕ್ರೂರ ಮನಸ್ಥಿತಿಯನ್ನು ಬಿಂಬಿಸುತ್ತಿದೆ. ಸಂವಿಧಾನವು ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಿದೆ, ಅದನ್ನು ಯಾರೋ ಒಬ್ಬ ಸಚಿವರ ಬಳಿ ಕೇಳಿ ಪಡೆಯುವ ಅಗತ್ಯವಿಲ್ಲ.ಮಹಿಳೆಯರನ್ನು ಕೇವಲ ಅಡುಗೆ ಮನೆಗೆ ಸೀಮಿತಗೊಳಿಸಲು ಹೊರಟಿರುವ ಶಿಕ್ಷಣ ಸಚಿವರ ನಡೆಯು ಕೋಟ್ಯಾಂತರ ವಿದ್ಯಾರ್ಥಿನಿಯರ ಕೆಂಗಣ್ಣಿಗೆ ಪಾತ್ರವಾಗಿದೆ.
#BiharEducationMinister #MithileshTiwari #WomenEducation #GenderEquality #BiharPolitics #SavitribaiPhule #BreakingNews #FreedomTV #WomenEmpowerment #RightToEducation

Comments (0)

Your email address will not be published. Required fields are marked *

Back to top button