Tamil naduರಾಜಕೀಯ

ಶಬರೀನಾಥನ್ ಪ್ರಮಾಣವಚನ – ವಿಜಯ್ ಮುಖದಲ್ಲಿ ಮಂದಹಾಸ

Driver son Shabarinathan as MLA

ಚೆನ್ನೈ: ರಾಜಕೀಯ ಕೇವಲ ಧನಿಕರು,ಪ್ರಭಾವಿಗಳು ಹಾಗೂ ರಾಜಕೀಯ ಹಿನ್ನೆಲೆಯುಳ್ಳವರಿಗೆ ಮಾತ್ರ ಎಂಬ ಪ್ರತೀತಿಯನ್ನು ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಸುಳ್ಳು ಮಾಡಿದ್ದಾರೆ. ದಶಕಗಳ ಕಾಲ ತಮ್ಮ ಕಾರು ಚಾಲಕನಾಗಿದ್ದ ಮಗನನ್ನು ಶಾಸನಸಭೆಯ ಮೆಟ್ಟಿಲು ಹತ್ತಿಸುವ ಮೂಲಕ ವಿಜಯ್ ಸಾಮಾಜಿಕ ನ್ಯಾಯದ ಹೊಸ ಪರ್ವ ಆರಂಭಿಸಿದ್ದಾರೆ.

ಈ ಶಬರಿನಾಥನ್ ಯಾರು?
2026ರ ಮಾರ್ಚ್ 29 ರಂದು ತಮಿಳಗ ವೆಟ್ರಿ ಕಳಗಂ (TVK) ಪಕ್ಷದ 234 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದಾಗ,ವಿರುಗಂಬಾಕ್ಕಂ ಕ್ಷೇತ್ರದ ಅಭ್ಯರ್ಥಿಯಾಗಿ ಶಬರಿನಾಥನ್ ಎಂಬ ಹೆಸರೂ ಘೋಷಣೆಯಾಗಿತ್ತು.
ಶಬರಿನಾಥನ್ ಬೇರೆ ಯಾರೂ ಅಲ್ಲ, ಕಳೆದ 30 ವರ್ಷಗಳಿಂದ ವಿಜಯ್ ಕಾರು ಚಾಲಕನಾಗಿ ಸೇವೆ ಸಲ್ಲಿಸುತ್ತಿರುವ ರಾಜೇಂದ್ರನ್ ಅವರ ಪುತ್ರ.ವಿಜಯ್ ಅವರ ಈ ಆಯ್ಕೆ ಕಂಡು ಇಡೀ ತಮಿಳುನಾಡೇ ಅಚ್ಚರಿ ಪಟ್ಟಿತ್ತು.ತನ್ನ ಮಗನಿಗೆ ಟಿಕೆಟ್ ಸಿಕ್ಕಿದ್ದನ್ನು ಕಂಡು ತಂದೆ ರಾಜೇಂದ್ರನ್ ಮತ್ತು ಮಗ ಶಬರಿನಾಥನ್ ಇಬ್ಬರೂ ಭಾವುಕರಾಗಿ ಕಣ್ಣೀರಿಟ್ಟಿದ್ದರು.

ವಿರುಗಂಬಾಕ್ಕಂ ಚುನಾವಣಾ ಫಲಿತಾಂಶ
ಹಣಬಲ ಮತ್ತು ತೋಳ್ಬಲವಿರುವ ಘಟಾನುಘಟಿ ರಾಜಕಾರಣಿಗಳ ಎದುರು ಕಣಕ್ಕಿಳಿದ ವಿಜಯ್ ಚಾಲಕನ ಮಗ ತನ್ನ ಸರಳತೆ ಹಾಗೂ ಪ್ರಾಮಾಣಿಕತೆಯಿಂದಲೇ ಜನರ ಮನಸ್ಸು ಗೆದ್ದರು.ಮೇ 4 ರಂದು ಪ್ರಕಟವಾದ ಫಲಿತಾಂಶದಲ್ಲಿ ಶಬರಿನಾಥನ್ ಬರೊಬ್ಬರಿ 27,000ಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದರು.

ವಿಧಾನಸಭೆಯಲ್ಲಿ ಸಾಮಾನ್ಯನ ಸಾರ್ಥಕ ಸನ್ನಿವೇಶ
ತಮಿಳುನಾಡು ವಿಧಾನಸಭೆಯಲ್ಲಿ ಶಬರಿನಾಥನ್ ಅವರು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದರೆ,ದೂರದಲ್ಲಿ ಕುಳಿತಿದ್ದ ದಳಪತಿ ವಿಜಯ್ ಅವರ ಮುಖದಲ್ಲಿ ಒಂದು ಸಾರ್ಥಕ ಮಂದಹಾಸವಿತ್ತು. ತನ್ನ ಒಡನಾಡಿಯ ಮಗನನ್ನು ಜನನಾಯಕನನ್ನಾಗಿ ಮಾಡಿದ ತೃಪ್ತಿ ವಿಜಯ್ ಅವರ ಕಣ್ಣುಗಳಲ್ಲಿ ಎದ್ದು ಕಾಣುತ್ತಿತ್ತು.ಈ ದೃಶ್ಯವು ಪ್ರಜಾಪ್ರಭುತ್ವದ ನೈಜ ಆಶಯಕ್ಕೆ ಸಾಕ್ಷಿಯಾಯಿತು. “ಅಧಿಕಾರ ಎಂಬುದು ಕೇವಲ ಸಿರಿವಂತರಿಗೆ ಸೀಮಿತವಲ್ಲ, ಅದು ಸಾಮಾನ್ಯ ಜನರಿಗೂ ದಕ್ಕಬೇಕು ಎಂಬುದನ್ನು ವಿಜಯ್ ಸಾಬೀತು ಮಾಡಿದ್ದಾರೆ.”
ಶಬರೀನಾಥನ್ ನ್ನು ಗೆಲ್ಲಿಸುವ ಮೂಲಕ ಸಂವಿಧಾನದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ನ್ಯಾಯದ ಪರಿಪಾಲನೆಗೆ ಇಂದಿಗೂ ಬೆಲೆ ಇದೆ ಎಂಬುದನ್ನು ವಿರುಗಂಬಾಕ್ಕಂ ಮತದಾರರು ಸಾಬೀತುಪಡಿಸಿದ್ದಾರೆ. #ThalapathyVijay #TVK #SabarinathanMLA #Virugambakkam #TamilNaduPolitics #SocialJustice #SuccessStory #CommonManToMLA #VijayPoliticalEntry #FreedomTV

Comments (0)

Your email address will not be published. Required fields are marked *

Back to top button