#Exclusive NewsTop News
ಫ್ರೀಡಂ ಟಿವಿ ಬಿಗ್ ಇಂಪ್ಯಾಕ್ಟ್: ಗಣಿ ಇಲಾಖೆಗೆ ಸಿಎಂ ಡಿ.ಕೆ.ಶಿವಕುಮಾರ್ ಸಖತ್ ಸರ್ಜರಿ!

ಫ್ರೀಡಂ ಟಿವಿ ಸರಣಿ ವರದಿ ಬೆನ್ನಲ್ಲೇ ಸರ್ಕಾರ ಜಾಗೃತಗೊಂಡಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮಹಾ ಅಕ್ರಮಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಬ್ರೇಕ್ ಹಾಕಿದ್ದಾರೆ.
ಒಂದೇ ಕಡೆ ಠಿಕಾಣಿ ಹೂಡಿ ದರ್ಬಾರ್ ನಡೆಸುತ್ತಿದ್ದ 21 ಹಿರಿಯ ಭೂವಿಜ್ಞಾನಿಗಳನ್ನು ದಿಢೀರ್ ಎತ್ತಂಗಡಿ ಮಾಡಲಾಗಿದೆ. ಅಧಿಕಾರಿಗಳ ಏಕಸ್ವಾಮ್ಯ ಹಾಗೂ ಸಾಂಸ್ಥಿಕ ಅಕ್ರಮ ತಡೆಯಲು ಸರ್ಕಾರ ಈ ಕಡಕ್ ಆಕ್ಷನ್ ತೆಗೆದುಕೊಂಡಿದೆ.
ಪ್ರಮುಖ ಅಧಿಕಾರಿಗಳ ವರ್ಗಾವಣೆ ಪಟ್ಟಿ ಇಲ್ಲಿದೆ:
- ಎಸ್. ದಿನಕರ: ಬೆಂಗಳೂರಿನಿಂದ ಮೈಸೂರು ಜಂಟಿ ನಿರ್ದೇಶಕರ ಕಚೇರಿಗೆ.
- ಕೆ.ಎಂ. ನಂಜುಂಡಸ್ವಾಮಿ: ಮೈಸೂರಿನಿಂದ ಬೆಂಗಳೂರು ಪ್ರಧಾನ ಕಚೇರಿಗೆ.
- ಆರ್.ಜೆ. ವಿಜಯ ವಿಕ್ರಮ್: ಬೆಂಗಳೂರಿನಿಂದ ಬೆಂಗಳೂರು ಗ್ರಾಮಾಂತರಕ್ಕೆ.
- ಸಿ.ಆರ್. ರಶ್ಮಿ: ದಾವಣಗೆರೆಯಿಂದ ಬೆಂಗಳೂರು ನಿರ್ದೇಶಕರ ಕಚೇರಿಗೆ.
- ಆಸೀಫುಲ್ಲಾ: ಬೆಂಗಳೂರಿನಿಂದ ಗಣಿ ಜಿಲ್ಲೆ ವಿಜಯನಗರಕ್ಕೆ.
- ಚಂದ್ರಶೇಖರ ಹಿರೇಮನಿ: ಬಳ್ಳಾರಿಯಿಂದ ಬೆಂಗಳೂರು ಕೇಂದ್ರ ಕಚೇರಿಗೆ.
- ಎಸ್. ರೋಹಿತ್: ಕಲಬುರಗಿಯಿಂದ ಬಳ್ಳಾರಿ ಚಾಲಿತ ದಳಕ್ಕೆ.
- ರಯೀಸ್ ಫಾತಿಮಾ: ತುಮಕೂರಿನಿಂದ ಕಾರವಾರಕ್ಕೆ (ಉತ್ತರ ಕನ್ನಡ).
- ಕೆ.ಎನ್. ಪುಷ್ಪವತಿ: ಮೈಸೂರಿನಿಂದ ಧಾರವಾಡ ಜಿಲ್ಲೆಗೆ.
- ಗೋಪಾಲಕೃಷ್ಣ: ಬೆಂಗಳೂರಿನಿಂದ ಮೈಸೂರು ಜಂಟಿ ನಿರ್ದೇಶಕರ ಕಚೇರಿಗೆ.
- ಪ್ರವೀಣ್ ಜೋಷಿ: ಬಳ್ಳಾರಿಯಿಂದ ಬೆಂಗಳೂರು ನಿರ್ದೇಶಕರ ಕಚೇರಿಗೆ.
- ಜಿ. ಮಂಜುನಾಥ್: ಬಳ್ಳಾರಿಯಿಂದ ಬೀದರ್ ಜಿಲ್ಲೆಗೆ.
- ವೈ.ಹೆಚ್. ಕೀರ್ತಿಕುಮಾರ್: ವಿಜಯನಗರದಿಂದ ಕಲಬುರಗಿ ಚಾಲಿತ ದಳಕ್ಕೆ.
- ಉಮೇಶ ಬಗರಿ: ಧಾರವಾಡದಿಂದ ಗದಗ ಜಿಲ್ಲೆಗೆ.
- ಎನ್. ಶೋಭಾ: ಬೆಂಗಳೂರಿನಿಂದ ದಾವಣಗೆರೆಗೆ.
- ಪಿ.ಎಸ್. ನವೀನ್: ಹಾವೇರಿಯಿಂದ ಚಾಮರಾಜನಗರಕ್ಕೆ.
- ಕೆ.ಪಿ. ಚಿದಂಬರ: ಬೆಂಗಳೂರಿನಿಂದ ಶಿವಮೊಗ್ಗಕ್ಕೆ.
- ಎಂ.ಎಸ್. ಆಶಾ: ಕಾರವಾರದಿಂದ ಬಳ್ಳಾರಿ ಚಾಲಿತ ದಳಕ್ಕೆ.
- ಡಿ.ಎಸ್. ರಾಜೇಶ್: ಚಾಮರಾಜನಗರದಿಂದ ತುಮಕೂರು ಚಾಲಿತ ದಳಕ್ಕೆ.
- ಲೋಕೇಶ್ ಎನ್.: ಬೆಂಗಳೂರು ಗ್ರಾಮಾಂತರದಿಂದ ಮೈಸೂರಿಗೆ.
- ಕೆ.ಎಂ. ನಾಗಭೂಷಣ್: ಗದಗದಿಂದ ಬಳ್ಳಾರಿ ಚಾಲಿತ ದಳಕ್ಕೆ.
ಎಲ್ಲಾ ಅಧಿಕಾರಿಗಳಿಗೆ ತಕ್ಷಣವೇ ಹೊಸ ಸ್ಥಳಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಫ್ರೀಡಂ ಟಿವಿ ನಡೆಸಿದ ಈ ತನಿಖಾ ವರದಿಯ ಧಮಾಕಾಗೆ ಈಗ ಇಡೀ ಗಣಿ ಇಲಾಖೆಯೇ ನಡುಗಿಹೋಗಿದೆ!




