#Exclusive Newsಕ್ರೈಂ ಸ್ಟೋರಿ
IPS ಅಧಿಕಾರಿ ರಾಮಚಂದ್ರರಾವ್ ಅಮಾನತ್ತು.. ವಾಪಸ್ ಹಿಂಪಡೆದ ಸರ್ಕಾರ..!

ರಾಜ್ಯ ಸರ್ಕಾರವು ಹಿರಿಯ IPS ಅಧಿಕಾರಿ ಡಾ. ರಾಮಚಂದ್ರ ರಾವ್ ಅವರ ವಿರುದ್ಧದ ಅಮಾನತ್ತು ಆದೇಶವನ್ನು ಹಿಂಪಡೆದು ಮಹತ್ವದ ನಿರ್ಧಾರ ಕೈಗೊಂಡಿದೆ. ರಾಸಲೀಲೆ ಪ್ರಕರಣದ ಆರೋಪಗಳ ಹಿನ್ನೆಲೆಯಲ್ಲಿ ಅವರು ಹಿಂದೆ ಅಮಾನತ್ತುಗೊಂಡಿದ್ದರು.
ಆದರೆ, ಪ್ರಕರಣದ ಪರಿಶೀಲನೆ ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳ ನಂತರ ಸರ್ಕಾರ ಇದೀಗ ಅಮಾನತ್ತು ಆದೇಶವನ್ನು ರದ್ದುಗೊಳಿಸಿದೆ. ಇದರೊಂದಿಗೆ ಅವರನ್ನು ಮತ್ತೆ ಪೊಲೀಸ್ ಸೇವೆಗೆ ಮರುನಿಯೋಜಿಸಲಾಗಿದೆ.

ಸರ್ಕಾರದ ಹೊಸ ಆದೇಶದಂತೆ, ಡಾ. ರಾಮಚಂದ್ರ ರಾವ್ ಅವರಿಗೆ ಸಿಐಡಿ ಡಿಜಿಪಿ (ಫೈನಾನ್ಸ್ ಅಫೆನ್ಸ್ ವಿಂಗ್) ಹುದ್ದೆಯನ್ನು ನೀಡಲಾಗಿದೆ. ಈ ಹುದ್ದೆಯಲ್ಲಿ ಅವರು ಆರ್ಥಿಕ ಅಪರಾಧಗಳ ತನಿಖೆ ಹಾಗೂ ಸಂಬಂಧಿತ ಕಾರ್ಯಗಳನ್ನು ನಿರ್ವಹಿಸಲಿದ್ದಾರೆ. ಮೂಲಗಳ ಪ್ರಕಾರ, ಇಲಾಖೆಯ ಅಗತ್ಯತೆ ಹಾಗೂ ಅವರ ಸೇವಾ ಅನುಭವವನ್ನು ಗಮನದಲ್ಲಿಟ್ಟುಕೊಂಡು ಈ ನಿಯೋಜನೆ ಮಾಡಲಾಗಿದೆ.
ಇತ್ತ ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ಮತ್ತು ತನಿಖಾ ಪ್ರಕ್ರಿಯೆಗಳು ಮುಂದುವರಿಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.





