ಕ್ರೈಂ ಸ್ಟೋರಿ

ಚಿಂತಾಮಣಿಯಲ್ಲಿ ಡಬಲ್‌ ಮರ್ಡರ್‌ – ಪತ್ನಿ-ನಾದಿನಿಯ ಕತ್ತು ಕೊಯ್ದು ಭೀಕರ ಕೊಲೆ!

Double murder in Chintamani – Wife and sister-in-law brutally murdered by having their throats slit!

ಚಿಕ್ಕಬಳ್ಳಾಪುರ : ಕೌಟುಂಬಿಕ ಕಲಹದ ಹಿನ್ನೆಲೆ ವ್ಯಕ್ತಿಯೋರ್ವ ಡಬಲ್ ಮರ್ಡರ್ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ. ಕೋಲಾರ ಮೂಲದ ಗಲ್ ಪೇಟೆ ನಿವಾಸಿ ಏಜಾಜ್ ತನ್ನ ಹೆಂಡತಿ ಹಾಗೂ ಆಕೆಯ ಅಕ್ಕಳನ್ನು ಕತ್ತು ಕೊಯ್ದು ಕೊಲೆಗೈದಿದ್ದಾನೆ.

ರೇಷ್ಮಾ ಹಾಗೂ ಶಮಾ ಕೊಲೆಯಾದ ದುರ್ದೈವಿ ಮಹಿಳೆಯರು. ಏಜಾಜ್ ತನ್ನ ಮಾತು ಕೇಳದೆ ಮನೆ ಬಿಟ್ಟು ಬಂದಿದ್ದ ಹೆಂಡತಿ ಹಾಗೂ ಆಕೆಗೆ ಆಸರೆಯಾಗಿದ್ದ ಅಕ್ಕನನ್ನು ಕೊಲೆ ಮಾಡಿ, ಚಾಕು ಜೊತೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಜಿಲ್ಲಾ SP ಕುಶಾಲ್ ಚೌಕ್ಸೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆಯ ಹಿನ್ನೆಲೆ:

ಕೋಲಾರದ ಏಜಾಜ್ ಜೊತೆ ವಿವಾಹವಾಗಿದ್ದ ಶಮಾ, ಪತಿಯೊಂದಿಗೆ ಮುನಿಸಿಕೊಂಡು ಆತನನ್ನು ಬಿಟ್ಟು ಚಿಂತಾಮಣಿಗೆ ಬಂದಿದ್ದರು. ಚಿಂತಾಮಣಿಯ ಜಿ.ಜಿ. ಪೇಟೆಯಲ್ಲಿ ವಾಸವಿದ್ದ ತನ್ನ ಅಕ್ಕ ರೇಷ್ಮಾ ಅವರ ಮನೆಯಲ್ಲಿ ಶಮಾ ಆಶ್ರಯ ಪಡೆದುಕೊಂಡಿದ್ದರು. ಕೋಪಗೊಂಡು ಏಜಾಜ್ 3 ತಿಂಗಳಿಂದ ಗಲಾಟೆ ಮಾಡ್ತಿದ್ದ. ನನ್ನ ಮಾತು ಕೇಳಲಿಲ್ಲ ಅಂತ ಹೆಂಡತಿ, ಅಕ್ಕನನ್ನು ಕೊಲೆ ಮಾಡಿದ್ದಾನೆ.

Comments (0)

Your email address will not be published. Required fields are marked *

Back to top button