ದೇಶ/ವಿದೇಶ

ಶೀಘ್ರವೇ ನೀರವ್ ಮೋದಿ ಗಡಿಪಾರು!

Nirav Modi to be extradited soon!

ಭಾರತದ ಬ್ಯಾಂಕ್​ಗಳಿಗೆ ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ನೀರವ್​ ಮೋದಿ ಶೀಘ್ರವೇ ಭಾರತಕ್ಕೆ ಹಸ್ತಾಂತರವಾಗುವ ಸಾಧ್ಯತೆಯಿದೆ. ಲಂಡನ್ ಹೈಕೋರ್ಟ್​ ಸೇರಿದಂತೆ ಎಲ್ಲಾ ಕೋರ್ಟ್​ಗಳಲ್ಲಿ ನೀರವ್ ಮೋದಿ ನಡೆಸಿದ್ದ ಕಾನೂನು ಸಮರಕ್ಕೆ ತೀವ್ರ ಹಿನ್ನಡೆಯಾಗಿದೆ.

ಭಾರತದಲ್ಲಿ ವಿಚಾರಣೆ ಎದುರಿಸಲು ನೀರವ್ ಮೋದಿಗೆ ಲಂಡನ್​ನ ಕೋರ್ಟ್​ ಆದೇಶ ನೀಡಿದೆ. ಹಲವು ರಾಷ್ಟ್ರೀಕೃತ ಬ್ಯಾಂಕ್​ಗಳಿಗೆ ಸಹಸ್ತ್ರಾರು ಕೋಟಿ ರೂಪಾಯಿ ವಂಚಿಸಿದ ಆರೋಪವನ್ನು ನೀರವ್ ಮೋದಿ ಎದುರಿಸುತ್ತಿದ್ದಾರೆ. ನೀರವ್ ಮೋದಿ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದ್ದು, ತಾರ್ಕಿಕ ಅಂತ್ಯ ಕೊಂಡೊಯ್ಯುವ ವಿಶ್ವಾಸ ವ್ಯಕ್ತಪಡಿಸಿದೆ.

ಇತ್ತೀಚೆಗೆ ತನಿಖಾ ತಂಡದ ಹಿರಿಯ ಅಧಿಕಾರಿಗಳು ಲಂಡನ್​ಗೆ ಭೇಟಿ ನೀಡಿದ್ದು, ಹಸ್ತಾಂತರ ಪ್ರಕ್ರಿಯೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ಕೋರ್ಟ್​ಗೆ ಸಲ್ಲಿಸಿದ್ದಾರೆ. ನೀರವ್ ಮೋದಿ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರತಿಪಕ್ಷ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಈ ವಿಚಾರದಲ್ಲಿ ತೀವ್ರ ವಾಗ್ಧಾಳಿ ನಡೆಸಿತ್ತು.

Comments (0)

Your email address will not be published. Required fields are marked *

Back to top button