bengaluru

ಮೆಟ್ರೋ ಪ್ರಯಾಣಿಕರೇ ಗಮನಿಸಿ – ಇಂದು ರಾತ್ರಿ ಮೆಟ್ರೋ ಸೇವೆಗಳಲ್ಲಿ ತಾತ್ಕಾಲಿಕ ಬದಲಾವಣೆ!

Attention Metro passengers – temporary changes to Metro services tonight!

ಬೆಂಗಳೂರು : ಮೆಟ್ರೋ ಸುರಕ್ಷತಾ ಆಯುಕ್ತರ (CMRS) ತಪಾಸಣೆ ಹಿನ್ನೆಲೆಯಲ್ಲಿ, ಇಂದು ರಾತ್ರಿ ನಮ್ಮ ಮೆಟ್ರೋದ ಹಸಿರು ಮಾರ್ಗ ಮೆಟ್ರೋ ಸೇವೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.

ಇಂದು ರಾತ್ರಿ 10:30 ರಿಂದ ರಾತ್ರಿ 11:00 ಗಂಟೆಯವರೆಗೆ ಯಶವಂತಪುರದಿಂದ ಮಾದಾವರ ವರೆಗಿನ ರೈಲು ಸೇವೆಯಲ್ಲಿ ಮಾತ್ರ ತಾತ್ಕಾಲಿಕ ಬದಲಾವಣೆ ಇರಲಿದೆ. ಈ ಅರ್ಧ ಗಂಟೆಯ ಅವಧಿಯಲ್ಲಿ ಪ್ರತಿ 10 ನಿಮಿಷಗಳ ಬದಲಿಗೆ 20 ನಿಮಿಷಕ್ಕೊಂದು ರೈಲು ಮಾತ್ರ ಸಂಚರಿಸಲಿದೆ.

ಮಾದಾವರದಿಂದ ರೇಷ್ಮೆ ಸಂಸ್ಥೆ (Silk Institute) ವರೆಗಿನ ಉಳಿದ ಹಸಿರು ಮಾರ್ಗದ ಸೆಕ್ಷನ್‌ನಲ್ಲಿ ರೈಲು ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಎಂದಿನಂತೆ ಮೆಟ್ರೋ ಸಂಚರಿಸಲಿವೆ.

ಪ್ರಯಾಣಿಕರು ಈ ತಾತ್ಕಾಲಿಕ ಬದಲಾವಣೆಯನ್ನು ಗಮನಿಸಿ, ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳುವಂತೆ ಬಿಎಂಆರ್‌ಸಿಎಲ್‌ ಮನವಿ ಮಾಡಿದೆ.

Comments (0)

Your email address will not be published. Required fields are marked *

Back to top button