ದೇಶ/ವಿದೇಶ

ಮತ್ತೆ ಕದಡಿದ ಮಧ್ಯಪ್ರಾಚ್ಯ – ಅಮೆರಿಕ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ!

Middle East Turmoil Reignites – Iran Launches Missile Attacks on US Bases!

ವಾಷಿಂಗ್ಟನ್ : ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೆಲೆಗಳ ಮೇಲೆ ಅಮೆರಿಕ ಸೇನೆ ನಡೆಸಿದ ವಾಯುದಾಳಿಗೆ ಪ್ರತಿಯಾಗಿ ಇರಾನ್ ಕೂಡ ಪ್ರತೀಕಾರದ ಹೆಜ್ಜೆ ಇಟ್ಟಿದೆ. ಮಧ್ಯಪ್ರಾಚ್ಯದಾದ್ಯಂತ ಉದ್ವಿಗ್ನತೆ ಮತ್ತಷ್ಟು ಸ್ಫೋಟಕ ಹಂತ ತಲುಪಿದೆ.

ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳು ಹಾಗೂ ಮಧ್ಯಪ್ರಾಚ್ಯದಲ್ಲಿ ನಿಯೋಜನೆಗೊಂಡಿರುವ ಅಮೆರಿಕ ಸೈನಿಕರ ಮೇಲೆ ಇರಾನ್ ಸತತ ದಾಳಿಗೆ ಯತ್ನಿಸಿತ್ತು. ಈ ಕೃತ್ಯಕ್ಕೆ ತಕ್ಕೇಟು ನೀಡಲು ಅಮೆರಿಕ ಸೇನೆಯು ಇರಾನ್‌ನ ಪ್ರಮುಖ ಐಆರ್‌ಜಿಸಿ ನೆಲೆಗಳ ಮೇಲೆ ವಾಯುದಾಳಿ ಆರಂಭಿಸಿತ್ತು. ಈ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಪ್ರಮುಖ ಅಮೆರಿಕನ್ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.

ಜೋರ್ಡಾನ್‌ನಲ್ಲಿರುವ ಅಮೆರಿಕ ಮಿಲಿಟರಿ ನೆಲೆಗಳ ಮೇಲೆ ಭೀಕರ ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ ನಡೆಸಿರುವ ಇರಾನ್, ಇದರೊಂದಿಗೆ ಬಹ್ರೇನ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಯ ಮೇಲೆ ಬೃಹತ್‌ ಪ್ರಮಾಣದ ಡ್ರೋನ್‌ ದಾಳಿಯನ್ನೂ ನಡೆಸಿದೆ. ಜೋರ್ಡಾನ್‌ ವಾಯುಪ್ರದೇಶ ಪ್ರವೇಶಿಸಿದ ಒಟ್ಟು 13 ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪೈಕಿ 10 ಕ್ಷಿಪಣಿಗಳನ್ನು ಸ್ಥಳೀಯ ವಾಯು ರಕ್ಷಣಾ ವ್ಯವಸ್ಥೆಗಳು ಯಶಸ್ವಿಯಾಗಿ ತಡೆಹಿಡಿದು ನಾಶಪಡಿಸಿವೆ.

ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಈ ನೇರ ಸಂಘರ್ಷವು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಕಳಕಳಿಗೆ ಕಾರಣವಾಗಿದ್ದು, ಜಾಗತಿಕ ತೈಲ ಪೂರೈಕೆ ಹಾಗೂ ಹಡಗು ಸಂಚಾರದ ಮೇಲೂ ಭಾರಿ ಪರಿಣಾಮ ಬೀರುವ ಆತಂಕ ಎದುರಾಗಿದೆ.

Comments (0)

Your email address will not be published. Required fields are marked *

Back to top button