Top Newsಮನರಂಜನೆ

Tamannaah Bhatia: ಜೈಲರ್ ಹಿಟ್​ ಆಗಿದ್ದು ನನ್ನಿಂದ್ಲೇ.. ನಿರ್ಮಾಪಕರಿಗೆ ತಮನ್ನಾ ಹೊಸ ಡಿಮ್ಯಾಂಡ್

ಸೂಪರ್ ಸ್ಟಾರ್ ರಜಿನಿಕಾಂತ್ ಹೀರೋ ಆಗಿ ನಟಿಸಿದ್ದ ಸಿನಿಮಾ ಜೈಲರ್ (Jailer).. ಈ ಸಿನಿಮಾದಲ್ಲಿ ನಟಿ ತಮನ್ನಾ (Tamannaah Bhatia)ಒಂದು ಹಾಡು ಮತ್ತು ಕೆಲ ಸನ್ನಿವೇಶಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ರು. ನೆಲ್ಸನ್ ನಿರ್ದೇಶನದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು.

ಇದರ ಸೀಕ್ವೆಲ್ ತೆರೆಗೆ ತರಲು ನೆಲ್ಸನ್ ಸಿದ್ಧತೆ ನಡೆಸಿದ್ದಾರೆ. ಆದರೆ, ನಟಿ ತಮನ್ನಾ ತಮ್ಮ ಸಂಭಾವನೆಯನ್ನು ವಿಪರೀತವಾಗಿ ಹೆಚ್ಚಿಸಿಕೊಂಡಿದ್ದಾರೆ ಎಂಬ ಟಾಕ್ ಸ್ಪ್ರೆಡ್ ಆಗುತ್ತಿದೆ.

ಅಷ್ಟೇ ಅಲ್ಲ, ಜೈಲರ್ ಸಿನಿಮಾ ಹಿಟ್ ಆಗಲು ನಟ ರಜಿನಿಕಾಂತ್ ಕಾರಣ ಅಲ್ಲ.. ಈ ಸಿನಿಮಾ ಸೂಪರ್ ಹಿಟ್ ಆಗಲು ತಾನು ಕಾರಣ ಎಂದು ತಮನ್ನಾ ಹೇಳಿಕೊಂಡಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ನಿಜ ಹೇಳಬೇಕು ಎಂದರೇ ಈ ಸಿನಿಮಾದಲ್ಲಿ ತಮನ್ನಾ ಹಾಡಿ ಕುಣಿದ ನುವ್ವು ಕಾವಾಲಯ್ಯ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ತಮನ್ನಾ ಸೌಂದರ್ಯ ಪ್ರದರ್ಶನ ಪಡ್ಡೆ ಹೈಕಳನ್ನು ಸಿಕ್ಕಾಪಟ್ಟೆ ಸೆಳೆದಿತ್ತು.

ಆದರೂ, ತಮನ್ನಾಗೆ ಬೇರೆ ಅವಕಾಶಗಳು ಅರಸಿ ಬರಲಿಲ್ಲ. ಸದ್ಯ ಕೆಲ ಹಿಂದಿ ಚಿತ್ರಗಳಲ್ಲಿ ಮಾತ್ರ ತಮನ್ನಾ ನಟಿಸ್ತಿದ್ದಾರೆ.

ದಕ್ಷಿಣದ ಒಂದು ಚಿತ್ರವೂ ತಮನ್ನಾ ಕೈಯಲ್ಲಿ ಇಲ್ಲ. ಆದರೂ, ತಮ್ಮ ಸಂಭಾವನೆಯನ್ನು 5 ಕೋಟಿಗೆ ಹೆಚ್ಚಿಸಿದ್ದಾರೆ.. ಅಲ್ಲದೇ ಸಿನಿಮಾ ಹಿಟ್ ಆಗಲು ತಾನೆ ಕಾರಣ ಎಂದು ಬೇರೆ ಹೇಳಿಕೊಂಡಿದ್ದಾರಂತೆ. ಇದಕ್ಕೆ ಚಿತ್ರ ತಂಡ ಹೇಗೆ ರಿಯಾಕ್ಟ್ ಮಾಡುತ್ತೆ ಕಾದು ನೋಡಬೇಕು.

Comments (0)

Your email address will not be published. Required fields are marked *

Back to top button