bengaluruಮನರಂಜನೆ

ದೊಡ್ಮನೆ ಪ್ರಶಂಸೆಗೆ ಪಾತ್ರವಾದ ‘ಲೋ ನವೀನ’

Ashwini punith rajkumar watches Lo Naveena Movie and praises

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ತನ್ನ ವಿಭಿನ್ನ ಮೇಕಿಂಗ್ ಹಾಗೂ ಮಂಡ್ಯ ಶೈಲಿಯ ಭಾಷಾಶೈಲಿ ಮೂಲಕ ಸದ್ದು ಮಾಡುತ್ತಿರುವ ‘ಲೋ ನವೀನ’ ಸಿನಿಮಾಗೆ ಈಗ ದೊಡ್ಮನೆ ಕುಟುಂಬದ ಆಶೀರ್ವಾದ ಸಿಕ್ಕಿದೆ. ಬಿಡುಗಡೆಯಾದ ದಿನದಿಂದ ದಿನಕ್ಕೆ ಪ್ರೇಕ್ಷಕರಿಂದ ಉತ್ತಮ ಕಲೆಕ್ಷನ್ ಹಾಗೂ ಅದ್ಭುತ ಹೆಸರು ಪಡೆಯುತ್ತಿರುವ ಈ ಚಿತ್ರವನ್ನು ಪಿಆರ್‌ಕೆ ಪ್ರೊಡಕ್ಷನ್ಸ್‌ನ ಅಶ್ವಿನಿ ಪುನೀತ್ ರಾಜ್‌ಕುಮಾರ್ ವೀಕ್ಷಿಸಿದ್ದು, ಚಿತ್ರತಂಡದ ಬೆನ್ನುತಟ್ಟಿದ್ದಾರೆ.

“ಸರಳ ಕಥೆ ಜನರ ಮನದಾಳದಲ್ಲಿ”-ಅಶ್ವಿನಿ ಪುನೀತ್ ರಾಜ್‌ಕುಮಾರ್


ಸಿನಿಮಾ ವೀಕ್ಷಿಸಿದ ಬಳಿಕ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ನಟ ನವೀನ್ ಸಜ್ಜು ಹಾಗೂ ಇಡೀ ಚಿತ್ರತಂಡದ ಜೊತೆ ಚರ್ಚೆ ನಡೆಸಿ, ತಮ್ಮ ಅನಿಸಿಕೆ ಅಭಿಪ್ರಾಯ ಹಂಚಿಕೊಂಡರು.ಚಿತ್ರದ ಕಥೆ, ಸಹಜ ನಟನೆ ಮತ್ತು ಮನರಂಜನಾತ್ಮಕ ನಿರೂಪಣೆಯ ಬಗ್ಗೆ ಮಾತನಾಡಿದ ಅವರು, “ಸರಳವಾದ ಕಥೆಯೊಂದನ್ನು ಜನರ ಮನಸ್ಸಿಗೆ ನೇರವಾಗಿ ತಲುಪುವ ರೀತಿಯಲ್ಲಿ ಹೇಳಿರುವುದೆ ಈ ಚಿತ್ರದ ಅತಿ ದೊಡ್ಡ ಶಕ್ತಿ” ಎಂದು ಕೊಂಡಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇಂತಹ ಪ್ರತಿಭಾವಂತ ಯುವ ಕಲಾವಿದರ ಅಗತ್ಯವಿದೆ ಎಂದು ಹೇಳಿದ ಅಶ್ವಿನಿ ಅವರು, ಮುಂದಿನ ದಿನಗಳಲ್ಲಿ ಸಿನಿಮಾ ಪ್ರಚಾರ ಹಾಗೂ ಬೆಳವಣಿಗೆಯನ್ನು ಯಾವ ರೀತಿ ಹೆಜ್ಜೆ ಇಟ್ಟು ಮುನ್ನಡೆಸಬೇಕು ಎಂಬ ಬಗ್ಗೆ ಚಿತ್ರತಂಡಕ್ಕೆ ಅಮೂಲ್ಯವಾದ ಸಲಹೆಗಳನ್ನು ನೀಡಿದ್ದಾರೆ. ಚಿತ್ರದಲ್ಲಿ ಬಳಸಿರುವ ಮಂಡ್ಯ ಶೈಲಿಯ ಭಾಷೆ ಮತ್ತು ನೈಜ ಜೀವನಕ್ಕೆ ಹತ್ತಿರವಾಗಿರುವ ಪಾತ್ರಗಳು ತಮಗೆ ತುಂಬಾ ಇಷ್ಟವಾಗಿವೆ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.

“ಕಾಮಿಡಿ ಸೀನ್‌ಗಳು ಬಿದ್ದು ಬಿದ್ದು ನಗಬೇಕು ಹಂಗಿವೆ!”- ಓಂ ಪ್ರಕಾಶ್ ರಾವ್
ದೊಡ್ಮನೆ ಪ್ರಶಂಸೆಯ ಜೊತೆಗೆ ಸ್ಯಾಂಡಲ್‌ವುಡ್‌ನ ಸ್ಟಾರ್ ನಿರ್ದೇಶಕ ಓಂ ಪ್ರಕಾಶ್ ರಾವ್ ಸಹ ‘ಲೋ ನವೀನ’ ಸಿನಿಮಾ ನೋಡಿ ಟೀಂ ಬೆನ್ನುತಟ್ಟಿದ್ದಾರೆ. “ಸಿನಿಮಾದ ಮೇಕಿಂಗ್ ಅದ್ಭುತವಾಗಿದೆ. ಚಿತ್ರದ ಕೆಲವೊಂದು ಸನ್ನಿವೇಶಗಳು ಥೇಟ್ ನನ್ನ ವೈಯಕ್ತಿಕ ಜೀವನದಲ್ಲೇ ನಡೆದ ಹಾಗೆ ಅನಿಸಿದವು. ಇನ್ನು ಚಿತ್ರದ ಕಾಮಿಡಿ ಸೀನ್ ಗಳಂತೂ ಅತ್ಯಂತ ರಿಫ್ರೆಶಿಂಗ್ ಆಗಿದ್ದು, ಪ್ರೇಕ್ಷಕರು ಥಿಯೇಟರ್‌ನಲ್ಲಿ ಬಿದ್ದು ಬಿದ್ದು ನಗುವಂತಿವೆ” ಎಂದು ಚಿತ್ರದ ಹಾಸ್ಯ ಪ್ರಸಂಗಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
:ಒಬ್ಬ ತಂತ್ರಜ್ಞನಾಗಿ ಹಾಗೂ ಗಾಯಕನಾಗಿ ಗುರುತಿಸಿಕೊಂಡಿದ್ದ ನವೀನ್ ಸಜ್ಜು ಅವರ ನಟನೆಯ ‘ಲೋ ನವೀನ’ ಚಿತ್ರಕ್ಕೆ ಪ್ರೇಕ್ಷಕರ ಅಪೂರ್ವ ಬೆಂಬಲ ಸಿಗುತ್ತಿರುವುದು ಒಳ್ಳೆಯ ಬೆಳವಣಿಗೆ. ಚಿತ್ರರಂಗದ ಪ್ರಮುಖರಾದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಓಂ ಪ್ರಕಾಶ್ ರಾವ್ ಅವರ ಮೆಚ್ಚುಗೆಯ ಮಾತುಗಳು ತಂಡದ ಆತ್ಮವಿಶ್ವಾಸವನ್ನು ದುಪ್ಪಟ್ಟುಗೊಳಿಸಿದ್ದು, ಗಾಂಧಿನಗರದಲ್ಲಿ ಸಿನಿಮಾದ ಮೇಲಿನ ಕ್ರೇಜ್ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

#FreedomTV #LoNaveena #NaveenSajju #AshwiniPuneethRajkumar #PRKProductions #Doddamane #OmPrakashRao #Sandalwood #KannadaCinema #MandyaStyle #LoNaveenaMovie #CinemaUpdates #TrendingNews

Comments (0)

Your email address will not be published. Required fields are marked *

Back to top button