ಸಿದ್ದರಾಮಯ್ಯ ಪ್ರಶ್ನಾತೀತ ನಾಯಕ, ಅವರ ನಡೆ ದೇಶಕ್ಕೆ ಮಾದರಿ-ದಿನೇಶ್ ಗುಂಡೂರಾವ್
Dinesh Gundurao says there is no permanancy in politics position changes

ಮೈಸೂರು: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಮಹಾ ಪರ್ವ ಆರಂಭವಾಗುತ್ತಿದ್ದಂತೆ, ನಾಯಕರ ಹೇಳಿಕೆಗಳು ಮತ್ತು ಮುಂದಿನ ನಡೆಗಳು ಭಾರಿ ಕುತೂಹಲ ಮೂಡಿಸುತ್ತಿವೆ. ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿರುವ ವಿಚಾರವಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. “ಮುಖ್ಯಮಂತ್ರಿ ಬದಲಾವಣೆ ಎನ್ನುವುದು ಪಕ್ಷದ ಆಂತರಿಕ ಪ್ರಕ್ರಿಯೆ. ಹೈಕಮಾಂಡ್ ತೀರ್ಮಾನದಂತೆಯೇ ಸಿದ್ದರಾಮಯ್ಯ ಅವರು ಗೌರವಯುತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ” ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ನಡೆ ಮಾದರಿ!
, “ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೋ ಅದಕ್ಕೆ ಬದ್ಧನಾಗಿರುತ್ತೇನೆ ಎಂದು ಸಿದ್ದರಾಮಯ್ಯ ಅವರು ಈ ಹಿಂದೆಯೂ ಹಲವು ಬಾರಿ ಪುನರುಚ್ಚರಿಸುತ್ತಿದ್ದರು. ಅದರಂತೆ ನಡೆದುಕೊಂಡು ತಮ್ಮ ನುಡಿದಂತೆ ನಡೆದಿದ್ದಾರೆ. ಸಿದ್ದರಾಮಯ್ಯ ಅವರು ಎಂದಿಗೂ ನಮ್ಮ ಪ್ರಶ್ನಾತೀತ ನಾಯಕರು. ಯಾವುದೇ ಗೊಂದಲಕ್ಕೆ ಆಸ್ಪದ ನೀಡದೆ ಅಧಿಕಾರ ಹಸ್ತಾಂತರಕ್ಕೆ ಸಹಕರಿಸಿದ ಅವರ ಈ ನಡೆ ರಾಜಕೀಯ ವಲಯದಲ್ಲಿ ನಿಜಕ್ಕೂ ಅತ್ಯಂತ ಮಾದರಿಯಾದದ್ದು” ಎಂದು ದಿನೇಶ್ ಗುಂಡೂರಾವ್ ಮುಕ್ತಕಂಠದಿಂದ ಶ್ಲಾಘಿಸಿದರು.
ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ!
ಇದೇ ವೇಳೆ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಹಾಗೂ ಹೊಸ ಸಂಪುಟ ಪುನಾರಚನೆ ಕುರಿತು ಕೇಳಲಾದ ಪ್ರಶ್ನೆಗೆ ಸಚಿವರು ಅತ್ಯಂತ ಮಾರ್ಮಿಕವಾಗಿ ಉತ್ತರಿಸಿದರು. “ರಾಜಕೀಯದಲ್ಲಿ ಯಾವುದೂ ಪರ್ಮನೆಂಟ್ (ಶಾಶ್ವತ) ಅಲ್ಲ. ಸದ್ಯಕ್ಕೆ ಸಂಪುಟದಲ್ಲಿ ಯಾರ ಇರುತ್ತಾರೆ, ಯಾರು ಹೋಗುತ್ತಾರೆ ಎನ್ನುವ ಚರ್ಚೆ ತೀರಾ ಅನಗತ್ಯ. ಶಾಸಕಾಂಗ ಪಕ್ಷದ (CLP) ಸಭೆ ಮುಗಿದ ಬಳಿಕ, ನೂತನ ಮುಖ್ಯಮಂತ್ರಿ ಯಾರು ಮತ್ತು ಇನ್ನಿತರ ವಿಷಯಗಳ ಕುರಿತು ನಮ್ಮ ಕಾಂಗ್ರೆಸ್ ವರಿಷ್ಠರು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಆದರೆ, ಬಹುತೇಕ ಡಿ.ಕೆ. ಶಿವಕುಮಾರ್ ಅವರೇ ನಮ್ಮ ಮುಂದಿನ ಮುಖ್ಯಮಂತ್ರಿಯಾಗುವುದು ನಿಶ್ಚಿತ” ಎಂದು ದಿನೇಶ್ ಗುಂಡೂರಾವ್ ಹೊಸ ನಾಯಕತ್ವಕ್ಕೆ ಬೆಂಬಲ ಸೂಚಿಸಿದರು.
#FreedomTV #DineshGunduRao #SiddaramaiahResignation #DKShivakumar #KarnatakaNewCM #CongressPowerShift #MysuruPolitics #KarnatakaPolitics #CongressHighCommand #CabinetReshuffle #BreakingNews #KannadaNews #CLPMeeting #PoliticalUpdates




