ಕರೂರು ದುರಂತ – ಮೃತ 32 ಸಂತ್ರಸ್ತರ ಕುಟುಂಬಕ್ಕೆ ಉದ್ಯೋಗ ನೇಮಕ ಪತ್ರ ವಿತರಣೆ!
Karuru Tragedy - Distribution of job appointment letter to the family of 32 deceased victims!

ಕರೂರು : ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಇಂದು ಕರೂರಿಗೆ ಭೇಟಿ ನೀಡಿದ್ದು, ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬಗಳಿಗೆ ಮುಖ್ಯಮಂತ್ರಿ ವಿಜಯ್ ಭರವಸೆಯಂತೆ ನೆರವು ನೀಡಿದ್ದಾರೆ. ಕರೂರು ದುರಂತದಲ್ಲಿ ಮೃತಪಟ್ಟ 32 ಸಂತ್ರಸ್ತರ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿದರು.
ಸರ್ಕಾರದ ಭರವಸೆಯಂತೆ, ಸಂತ್ರಸ್ತರ ಕುಟುಂಬದ ಅರ್ಹ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವ ಪ್ರಕ್ರಿಯೆಯನ್ನು ಇದೀಗ ಪೂರ್ಣಗೊಳಿಸಲಾಗಿದೆ. ಇಂದು ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ವಿಜಯ್ ಅವರು ಮೃತ 32 ಮಂದಿ ಸಂತ್ರಸ್ತರ ಕುಟುಂಬದವರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು.
ಘಟನೆಯ ಹಿನ್ನೆಲೆ :
ಸೆಪ್ಟೆಂಬರ್ 27, 2025ರಂದು ಕರೂರಿನ ವೆನ್ನಮಲೈ ಬಳಿ ಆಯೋಜಿಸಲಾಗಿದ್ದ ರಾಜಕೀಯ ರ್ಯಾಲಿಯೊಂದರಲ್ಲಿ ವಿಪರೀತ ಜನಸಂದಣಿಯಿಂದಾಗಿ ಕಾಲ್ತುಳಿತ ಉಂಟಾಗಿತ್ತು. ಈ ದುರ್ಘಟನೆಯಲ್ಲಿ ಒಟ್ಟು 41 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು.
ಬಳಿಕ ಸಂತ್ರಸ್ತರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ವಿಜಯ್ ಭರವಸೆ ನೀಡಿದ್ದರು. ಸಿಎಂ ವಿಜಯ್ ಕೊಟ್ಟ ಮಾತಿನಂತೆ ಈಗ ಮೃತ 32 ಸಂತ್ರಸ್ತರ ಕುಟುಂಬಕ್ಕೆ ಉದ್ಯೋಗದ ನೇಮಕಾತಿ ಪತ್ರ ಹಸ್ತಾಂತರಿಸಿದ್ದಾರೆ.




