ಸಿನಿಮಾ

‘ಟಾಕ್ಸಿಕ್’ ರಂಗು.. ಯಶ್-ಕಿಯಾರಾ ಕೆಮಿಸ್ಟ್ರಿಗೆ ನೆಟ್ಟಿಗರು ಫಿದಾ!

The ‘Toxic’ vibe... Netizens are captivated by the Yash-Kiara chemistry!

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಸಿನಿಮಾದ ‘ತಬಾಹಿ’ ವಿಡಿಯೋ ಹಾಡು ಬಿಡುಗಡೆಯಾಗಿದೆ. ಯಶ್- ಕಿಯಾರಾ ಅಡ್ವಾಣಿ ಜೋಡಿಯ ಈ ರೊಮ್ಯಾಂಟಿಕ್ ಹಾಡು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದ್ದು, ಹಾಡು ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಟ್ರೆಂಡಿಂಗ್ ಕ್ರಿಯೇಟ್ ಮಾಡಿದೆ.

ಯಶ್-ಕಿಯಾರಾ ಸೂಪರ್ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ!

ಈ ಹಾಡಿನಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಕಟ್ಟುಮಸ್ತಾದ ದೇಹ ಮತ್ತು ರಗಡ್ ಲುಕ್‌ಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇನ್ನು ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ ತಮ್ಮ ಗ್ಲಾಮರ್ ಮತ್ತು ಅದ್ಭುತ ನೃತ್ಯದ ಮೂಲಕ ಸಿನಿಪ್ರೇಕ್ಷಕರ ಮನ ಕದ್ದಿದ್ದಾರೆ. ತೆರೆಮೇಲೆ ಯಶ್ ಮತ್ತು ಕಿಯಾರಾ ಜೋಡಿಯ ಕೆಮಿಸ್ಟ್ರಿ ಅದ್ಭುತವಾಗಿ ಮೂಡಿಬಂದಿದ್ದು, ನೆಟ್ಟಿಗರು ಇವರಿಬ್ಬರ ಕಾಂಬಿನೇಷನ್‌ಗೆ ಫಿದಾ ಆಗಿದ್ದಾರೆ.

‘ತಬಾಹಿ’ ಹಾಡಿಗೆ ಸ್ಯಾಂಡಲ್‌ವುಡ್‌ನ ಸ್ಟಾರ್ ನಿರ್ದೇಶಕ, ಸಾಹಿತಿ ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿದ್ದಾರೆ. ಭಟ್ಟರ ಲೇಖನಿಯಿಂದ ಮೂಡಿಬಂದಿರುವ ಸಾಹಿತ್ಯದ ಜಾದೂ ಈ ಹಾಡಿನ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಕೇವಲ ಇದೊಂದು ಹಾಡಲ್ಲ, ಇಡೀ ಸಿನಿಮಾದ ವೈಭವದ ಪ್ರತಿಬಿಂಬದಂತೆ ಈ ವಿಡಿಯೋ ಮೂಡಿಬಂದಿದೆ ಎಂದು ಸಿನಿಪ್ರೇಕ್ಷಕರು ಕೊಂಡಾಡುತ್ತಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್ ದಾಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಅವರ ಮ್ಯಾಜಿಕ್ ಈ ಹಾಡಿನ ಪ್ರತಿಯೊಂದು ಫ್ರೇಮ್‌ನಲ್ಲೂ ಎದ್ದು ಕಾಣುತ್ತಿದೆ. ಬರೀ ಯಶ್ ಮತ್ತು ಕಿಯಾರಾ ಮಾತ್ರವಲ್ಲದೆ, ಚಿತ್ರದಲ್ಲಿ ಹುಮಾ ಖುರೇಷಿ ಹಾಗೂ ರುಕ್ಮಿಣಿ ವಸಂತ್ ಅವರಂತಹ ಪ್ರಮುಖ ತಾರೆಯರ ಭರ್ಜರಿ ಕಾಂಬಿನೇಷನ್ ಇದೆ. ಈ ನಟಿಯರ ಪಾತ್ರಗಳು ಕೂಡ ಸಿನಿಮಾದ ಮೇಲಿನ ಕುತೂಹಲವನ್ನು ದುಪ್ಪಟ್ಟುಗೊಳಿಸಿವೆ.

ಆಗಸ್ಟ್ 26ರಂದು ಜಗತ್ತಿನಾದ್ಯಂತ ಈ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರಲಿದ್ದು, ರಿಲೀಸ್‌ಗೆ ಕೌಂಟ್ ಡೌನ್ ಈಗಾಗಲೇ ಶುರುವಾಗಿದೆ. ಕೆಜಿಎಫ್ ನಂತರ ಯಶ್ ಅವರ ಗ್ಲೋಬಲ್ ಸಿನಿಮಾ ನೋಡಲು ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿದೆ.

Comments (0)

Your email address will not be published. Required fields are marked *

Back to top button