
ಬೆಂಗಳೂರು: ಪೆಟ್ರೋಲ್-ಡೀಸೆಲ್ ದರ ಏರಿಕೆಗೆ ಬೆಲ್ಲಿಲ್ಲ ಬ್ರೇಕ್ ಇಲ್ಲ. ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳ (EV) ಕ್ರೇಜ್ ದಿನದಿಂದ ದಿನಕ್ಕೆ ರಾಕೆಟ್ ವೇಗದಲ್ಲಿ ಹೆಚ್ಚುತ್ತಿದೆ. ಇದರ ನೇರ ಪರಿಣಾಮ ರಾಜ್ಯದ ವಿದ್ಯುತ್ ಬಳಕೆಯ ಮೇಲಾಗಿದ್ದು, ಕಳೆದ ಕೇವಲ ಎರಡೇ ತಿಂಗಳಲ್ಲಿ (ಏಪ್ರಿಲ್ ಮತ್ತು ಮೇ) ರಾಜ್ಯದ ಇವಿ ಚಾರ್ಜಿಂಗ್ ವಿದ್ಯುತ್ ಬೇಡಿಕೆಯಲ್ಲಿ ಬರೋಬ್ಬರಿ ಶೇಕಡಾ 2 ರಷ್ಟು ಏರಿಕೆ ದಾಖಲಾಗಿದೆ ಎಂದು ಎಸ್ಕಾಂ (ESCOM) ಮೂಲಗಳು ತಿಳಿಸಿವೆ. ಹೆಚ್ಚುತ್ತಿರುವ ಇವಿ ವಾಹನಗಳ ದಟ್ಟಣೆಯನ್ನು ನಿಭಾಯಿಸಲು ಮತ್ತು ಇಂಧನ ಇಲಾಖೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸರ್ಕಾರ ಈಗ ಭರ್ಜರಿ ಮಾಸ್ಟರ್ ಪ್ಲಾನ್ ಒಂದನ್ನು ಸಿದ್ಧಪಡಿಸುತ್ತಿದೆ.

ಹೈವೇಗಳಲ್ಲಿ ಸೋಲಾರ್‘ಫಾಸ್ಟ್ ಚಾರ್ಜಿಂಗ್ ಸ್ಟೇಷನ್ಸ್!
ಬೆಂಗಳೂರು ಸೇರಿದಂತೆ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇವಿ ವಾಹನಗಳ ಸಂಚಾರ ಹೆಚ್ಚಾಗಿದ್ದು, ‘ಡಿಸಿ ಫಾಸ್ಟ್ ಚಾರ್ಜಿಂಗ್’ (DC Fast Charging) ಕೇಂದ್ರಗಳಿಗೆ ಭಾರಿ ಬೇಡಿಕೆ ಬಂದಿದೆ. ಗ್ರಾಹಕರು ಕೇವಲ 30 ನಿಮಿಷಗಳಲ್ಲಿ ತಮ್ಮ ವಾಹನ ಫುಲ್ ಚಾರ್ಜ್ ಆಗಬೇಕೆಂದು ಬಯಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂಧನ ಇಲಾಖೆಯು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ಹಾಗೂ ಹೆದ್ದಾರಿ ಪ್ರಾಧಿಕಾರಗಳೊಂದಿಗೆ ಕೈಜೋಡಿಸಿ ಸೌರಶಕ್ತಿ ಆಧಾರಿತ ಫಾಸ್ಟ್ ಚಾರ್ಜಿಂಗ್ ಘಟಕಗಳನ್ನು ಸ್ಥಾಪಿಸಲು ಮುಂದಾಗಿದೆ.ಈಗಾಗಲೇ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಸಮೀಪ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಸೋಲಾರ್ ಇವಿ ಘಟಕದ ಮಾದರಿಯಲ್ಲೇ, ಅತ್ಯಾಧುನಿಕ ತಂತ್ರಜ್ಞಾನದ 2ನೇ ಸೌರಶಕ್ತಿ ಆಧಾರಿತ ಚಾರ್ಜಿಂಗ್ ಕೇಂದ್ರವನ್ನು ಸ್ಥಾಪಿಸಲು ಇಂಧನ ಇಲಾಖೆ ಯೋಜನೆ ರೂಪಿಸಿದೆ.
ಇವಿ ಪಾಯಿಂಟ್ ಲೆಕ್ಕಾಚಾರ!
ರಾಜ್ಯದಲ್ಲಿರುವ ಒಟ್ಟು ಇವಿ ಚಾರ್ಜಿಂಗ್ ಕೇಂದ್ರಗಳು (ಸರ್ಕಾರಿ + ಖಾಸಗಿ)ಸುಮಾರು 8,000, ಬೆಂಗಳೂರು ಮತ್ತು ಸುತ್ತಮುತ್ತಲಿನ ಭಾಗದಲ್ಲೇ ಇರುವ ಕೇಂದ್ರಗಳು 4,000 ಕ್ಕೂ ಹೆಚ್ಚು (ಶೇ. 50ಕ್ಕಿಂತ ಅಧಿಕ)ಬೆಸ್ಕಾಂ (BESCOM) ವ್ಯಾಪ್ತಿಯ ಇವಿ ಚಾರ್ಜಿಂಗ್ ಕೇಂದ್ರಗಳು209,ಬೆಸ್ಕಾಂ ವ್ಯಾಪ್ತಿಯ ಒಟ್ಟು ಚಾರ್ಜಿಂಗ್ ಪಾಯಿಂಟ್‌ಗಳು 471 ಆಗಿವೆ.
ಇವಿ ಚಾರ್ಜಿಂಗ್‌ಗೆ ಪ್ರತ್ಯೇಕ ಮೀಟರ್
ಪ್ರಸ್ತುತ ಬಹುತೇಕ ವಾಹನ ಸವಾರರು ತಮ್ಮ ಮನೆ ಬಳಕೆಯ ಮೀಟರ್‌ಗಳಲ್ಲೇ ಇವಿ ವಾಹನಗಳನ್ನು ಚಾರ್ಜ್ ಮಾಡುತ್ತಿದ್ದಾರೆ. ಇದರಿಂದಾಗಿ ಇವಿ ವಾಹನಗಳು ನಿಖರವಾಗಿ ಎಷ್ಟು ವಿದ್ಯುತ್ ಬಳಸುತ್ತಿವೆ ಎಂಬ ಡೇಟಾ ಸಿಗುತ್ತಿಲ್ಲ. ಹೀಗಾಗಿ, ಭವಿಷ್ಯದ ನೀತಿ ನಿರೂಪಣೆ ಹಾಗೂ ಲೋಡ್ ಮ್ಯಾನೇಜ್‌ಮೆಂಟ್‌ಗಾಗಿ ಇವಿ ವಾಹನಗಳಿಗೆ ಪ್ರತ್ಯೇಕ ಮೀಟರ್ ವ್ಯವಸ್ಥೆ ಜಾರಿಗೆ ತರಬೇಕೆಂದು ರಾಜ್ಯ ಲೋಡ್ ಡಿಸ್ಪ್ಯಾಚ್ ಸೆಂಟರ್ (SLDC) ಸರ್ಕಾರಕ್ಕೆ ಬಲವಾದ ಒತ್ತಾಯ ಮಾಡಿದೆ. ಪ್ರತ್ಯೇಕ ಮೀಟರ್ ಅಳವಡಿಸಿದರೆ ಭವಿಷ್ಯದಲ್ಲಿ ಇವಿ ಚಾರ್ಜಿಂಗ್‌ಗೆ ಪ್ರತ್ಯೇಕ ದರ ನಿಗದಿಪಡಿಸುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ತೈಲ ಬಿಕ್ಕಟ್ಟು ಮತ್ತು ಪರಿಸರ ಜಾಗೃತಿಯಿಂದಾಗಿ ಜನರು ಇವಿ ಕಡೆ ಮುಖ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ, ಸಾಂಪ್ರದಾಯಿಕ ವಿದ್ಯುತ್ ಮೇಲಿನ ಅವಲಂಬನೆ ತಗ್ಗಿಸಲು ಸರ್ಕಾರ ಇನ್ಮುಂದೆ ಸಂಪೂರ್ಣವಾಗಿ ಸೌರಶಕ್ತಿಯಂತಹ ನವೀಕರಿಸಬಹುದಾದ ಇಂಧನದತ್ತ ಹೆಜ್ಜೆ ಇಡಬೇಕಾಗಿರುವುದು ಇಂದಿನ ಅನಿವಾರ್ಯತೆಯಾಗಿದೆ.
#Freedom TV Digital#FreedomTV #EVMobility #ElectricVehicles #KarnatakaNews #BengaluruEV #SolarCharging #GreenEnergy #BESCOM #FuelPriceHike #EVChargingStation #KannadaNews #BreakingNews




