ನೀಟ್ ಹಗರಣ; ಹಿಗ್ಗಾಮುಗ್ಗ ಜಾಡಿಸಿದ ಸಚಿವ ಶರಣಪ್ರಕಾಶ್ ಪಾಟೀಲ್!
Minister Sharan prakash patil slams Neet scam

ಕಲಬುರಗಿ: ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿರುವ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ಕೇಂದ್ರ ಸರ್ಕಾರಕ್ಕೆ ಅಲ್ಪಸ್ವಲ್ಪ ಮಾನವೀಯತೆ ಇದ್ದರೂ, ಈ ಹಗರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಕ್ಷಣ ಪರಿಹಾರ ಘೋಷಿಸಬೇಕು” ಎಂದು ಅವರು ಕಟುವಾಗಿ ಆಗ್ರಹಿಸಿದ್ದಾರೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಲು ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ. ಪರೀಕ್ಷೆ ನಡೆಸುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಕಾರ್ಯವೈಖರಿ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಅಸಮಾಧಾನ ವ್ಯಕ್ತಪಡಿಸಿದೆ. ಇದು ಇದೇ ಮೊದಲ ಬಾರಿಯೇನಲ್ಲ, ಪ್ರತಿ ವರ್ಷವೂ ಇಂತಹ ಗೊಂದಲಗಳು ಮರುಕಳಿಸುತ್ತಿವೆ. ಎಂದರು
ಪ್ರತಿಭಾವಂತರ ಪಾಲಿಗೆ ಮೃತ್ಯು
ಕಷ್ಟಪಟ್ಟು ಓದಿ ಉತ್ತಮ ಅಂಕ ಗಳಿಸಿದ್ದ ಲಕ್ಷಾಂತರ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಅನ್ಯಾಯಕ್ಕೆ ಒಳಗಾಗಿದ್ದು ತೀವ್ರ ಶಾಕ್ ಗೆ ಗುರಿಯಾಗಿದ್ದಾರೆ.ಪುನಃ ಅವರು ಜೂನ್ ೨೧ ರಂದು ಮರುಪರೀಕ್ಷೆ ಬರೆಯಬೇಕಾದ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ. ವೈದ್ಯಕೀಯ ಪ್ರವೇಶ ಪರೀಕ್ಷೆಗಳನ್ನು ನಡೆಸುವ ಸಂಪೂರ್ಣ ಜವಾಬ್ದಾರಿಯನ್ನು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೇ ಹಸ್ತಾಂತರಿಸಬೇಕು. ನಮ್ಮ ರಾಜ್ಯದ ಸಿಇಟಿ (CET) ವ್ಯವಸ್ಥೆ ಅತ್ಯಂತ ಪಾರದರ್ಶಕವಾಗಿದೆ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿದರು.
ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ-ಇಂಜಿನಿಯರಿಂಗ್ ಶುಲ್ಕ ವಾಪಸ್
ನೀಟ್ ಮರುಪರೀಕ್ಷೆಯ ಗೊಂದಲಗಳ ನಡುವೆಯೇ ಕರ್ನಾಟಕದ ವಿದ್ಯಾರ್ಥಿಗಳಿಗೆ ಸಚಿವರು ಪ್ರಮುಖ ಭರವಸೆಗಳನ್ನು ನೀಡಿದ್ದಾರೆ.ನೀಟ್ ವಿಳಂಬದ ಹಿನ್ನೆಲೆಯಲ್ಲಿ ಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆ ನಿಗದಿತ ವೇಳಾಪಟ್ಟಿಯಂತೆ ಆರಂಭವಾಗಲಿದೆ. ಒಂದು ವೇಳೆ ವಿದ್ಯಾರ್ಥಿಗೆ ಮೊದಲು ಇಂಜಿನಿಯರಿಂಗ್ ಸೀಟು ಸಿಕ್ಕು, ಬಳಿಕ ನೀಟ್ ಮೂಲಕ ವೈದ್ಯಕೀಯ (Medical) ಸೀಟು ದೊರೆತರೆ, ಇಂಜಿನಿಯರಿಂಗ್ ಕಾಲೇಜಿಗೆ ಪಾವತಿಸಿದ ಸಂಪೂರ್ಣ ಶುಲ್ಕವನ್ನು ಸರ್ಕಾರವು ಹಿಂತಿರುಗಿಸಲು ಸೂಚನೆ ನೀಡಿದೆ.ಜೂನ್ 21 ರಂದು ನೀಟ್ ಮರುಪರೀಕ್ಷೆ ನಡೆಯುವುದರಿಂದ ವೈದ್ಯಕೀಯ ಕಾಲೇಜುಗಳ ಮೊದಲ ಸೆಮಿಸ್ಟರ್ ತರಗತಿಗಳು ಆರಂಭವಾಗುವುದು ಸ್ವಲ್ಪ ತಡವಾಗಬಹುದು. ಆದರೆ ಇಂಜಿನಿಯರಿಂಗ್ ತರಗತಿಗಳು ಎಂದಿನಂತೆ ಶುರುವಾಗಲಿವೆ.
ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ 1122 ವೈದ್ಯಕೀಯ ಸೀಟುಗಳ ಹೆಚ್ಚಳ!
ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಈ ವರ್ಷ ಕರ್ನಾಟಕದ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಭಾರಿ ಕೊಡುಗೆ ನೀಡಿದೆ ಎಂದು ಸಚಿವರು ಪ್ರಕಟಿಸಿದ್ದಾರೆ. ಒಟ್ಟು 11 ಸರ್ಕಾರಿ ಕಾಲೇಜುಗಳಲ್ಲಿ ಸೀಟು ಹೆಚ್ಚಳವಾಗಿದ್ದು, ಕೊಪ್ಪಳ ಮತ್ತು ಯಾದಗಿರಿ ವೈದ್ಯಕೀಯ ಸಂಸ್ಥೆಗಳಲ್ಲಿ ತಲಾ 50 ಸೀಟುಗಳು ಹೆಚ್ಚಾಗಿವೆ (ಈಗ ತಲಾ 150 ಸೀಟುಗಳು ಲಭ್ಯ). ರಾಜ್ಯದ 23 ವೈದ್ಯಕೀಯ ಕಾಲೇಜುಗಳಲ್ಲಿ ಸ್ನಾತಕೋತ್ತರ ಸೀಟುಗಳು ಹೆಚ್ಚಳವಾಗಿವೆ. ಬಳ್ಳಾರಿಗೆ 38, ರಾಯಚೂರಿಗೆ 17, ಬೀದರ್‌ಗೆ 15, ಕೊಪ್ಪಳಕ್ಕೆ 19 ಮತ್ತು ಯಾದಗಿರಿಗೆ ಗರಿಷ್ಠ 69 ಪಿಜಿ ಸೀಟುಗಳು ಮಂಜೂರಾಗಿವೆ.
ಈ ಒಟ್ಟು ಸೀಟುಗಳ ಪೈಕಿ ಕಲ್ಯಾಣ ಕರ್ನಾಟಕ ಭಾಗಕ್ಕೆ 100 ಯುಜಿ ಹಾಗೂ 158 ಪಿಜಿ ಸೀಟುಗಳನ್ನು ಹಂಚಿಕೆ ಮಾಡಲಾಗಿದೆ.
ಕೇಂದ್ರದ ನೀಟ್ ನೀತಿಯಿಂದಾಗಿ ವಿದ್ಯಾರ್ಥಿಗಳು ಬೀದಿಗೆ ಬೀಳುವಂತಾಗಿದ್ದರೆ, ರಾಜ್ಯ ಸರ್ಕಾರ ಮಾತ್ರ ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ಶುಲ್ಕ ಮರುಪಾವತಿ ಹಾಗೂ ಕೌನ್ಸೆಲಿಂಗ್ ನಿಯಮಗಳನ್ನು ಸಡಿಲಗೊಳಿಸಿ ಬೆನ್ನೆಲುಬಾಗಿ ನಿಂತಿದೆ.
#FreedomTV #NEETScam2026 #SharanprakashPatil #MedicalEducation #NEETPaperLeak #NTAFailure #MBBSSeats #KarnatakaCET #JusticeForStudents #BreakingNews #KannadaNews


