Freedom TV

ಪಡಿತರ ಅಕ್ಕಿ ಸಾಗಾಟ, ಆಹಾರ ಇಲಾಖೆ ಅಧಿಕಾರಿಗಳ ದಾಳಿ, ಪ್ರಕರಣ ದಾಖಲು

ಬೀಳಗಿ:ಸರ್ಕಾರದ ವಿವಿಧ ಯೋಜನೆಗಳ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನದ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮಾಲ್ ಸಮೇತ ವಾಹನವನ್ನು ವಶಕ್ಕೆ ಪಡೆದ ಘಟನೆ ಬೀಳಗಿಯಲ್ಲಿ ಬೆಳಕಿಗೆ ಬಂದಿದೆ.ಬಂಧಿತ ಆರೋಪಿ ಶಿವಾನಂದ ಮುತ್ತಪ್ಪ ಇಲ್ಯಾಳ (19), ಲಕ್ಷ್ಮಿನಗರ (ಹಾಲಿ ಬೇವಿನಮಟ್ಟಿ), ಬಾಗಲಕೋಟ ಎಂದು ಗುರುತಿಸಲಾಗಿದೆ. ಬೀಳಗಿ ಪಟ್ಟಣದ ಟಿಪ್ಪು ಸರ್ಕಲ್ ದಿಂದ ಬಸವೇಶ್ವರ ನಗರ ಕಡೆಗೆ ಟಾಟಾ ಇಂಟ್ರಾ ಸರಕು ವಾಹನ (ಕೆಎ-26/ಬಿ-6868)ದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನ ತಡೆದು ತಪಾಸಣೆ ನಡೆಸಿದಾಗ ಸರ್ಕಾರದ ವಿವಿಧ ಯೋಜನೆಗಳಡಿ ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗಿದ್ದ 2,580 ಕೆ.ಜಿ. ಪಡಿತರ ಅಕ್ಕಿಯನ್ನು ಯಾವುದೆ ದಾಖಲಾತಿಗಳಿಲ್ಲದೆ 54 ಪ್ಲಾಸ್ಟಿಕ್ ಚೀಲಗಳಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.ಜಪ್ತಿ ಮಾಡಿದ ಅಕ್ಕಿಯ ಅಂದಾಜು ಮೌಲ್ಯ ₹59,856 ಎಂದು ತಿಳಿದು ಬಂದಿದೆ, ಮಾಲ ಸಮೇತ ವಾಹನ ಹಾಗೂ ಚಾಲಕನನ್ನು ವಶಕ್ಕೆ ಪಡೆದ ಬೀಳಗಿ ಪೊಲೀಸ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.ದಾಳಿ ವೇಳೆ ಆಹಾರ ಶಿರಸ್ತೆದಾರ್ ಸಂತೋಷ ರಬಕವಿ, ಆಹಾರ ನಿರೀಕ್ಷಕ ಆಹಾರ ನಿರೀಕ್ಷಕ ಶಶಿಧರ್ ಭಜಂತ್ರಿ,ಅನ್ವರ ಸನದಿ ಉಪಸ್ಥಿತರಿದ್ದರು.

n

Comments (0)

Your email address will not be published. Required fields are marked *

Back to top button