Freedom TV

ಅಲ್ಪಸಂಖ್ಯಾತರ ಓಲೈಕೆಯೇ ಕಾಂಗ್ರೆಸ್ ಮಂತ್ರ- ಬಿಜೆಪಿ ಆಕ್ರೋಶ!

Governement dicision Alanda Darga issue cases removed on muslim protesters

ಬೆಂಗಳೂರು: ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ವಿವಾದಿತ ಲಾಡ್ಲೇ ಮಶಾಕ್ ದರ್ಗಾ ಆವರಣದಲ್ಲಿ ನಡೆದಿದ್ದ ಭಾರಿ ಕೋಮು ಗಲಭೆಗೆ ಸಂಬಂಧಿಸಿದ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆಯಲು ಕಾಂಗ್ರೆಸ್ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಹಾಗೂ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಇದು ಸಿದ್ದರಾಮಯ್ಯ ಸರ್ಕಾರದ ‘ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ‘ಕ್ಕೆ ಹಿಡಿದ ಕೈಗನ್ನಡಿ ಎಂದು ಬಿಜೆಪಿ ಕಿಡಿಕಾರಿದೆ. ರಾಜ್ಯ ರಾಜಕಾರಣದಲ್ಲಿ ಈ ನಿರ್ಧಾರವನ್ನು ಮತ ಓಲೈಕೆಯ ನಿರ್ಧಾರವೆನ್ನಲಾಗುತ್ತಿದೆ.

ಆಳಂದ ದರ್ಗಾ ಕೇಸ್ ವಾಪಸ್- ಸಭಾಧ್ಯಕ್ಷ ಶಿಫಾರಸು!


ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್ ಅವರ ಲಿಖಿತ ಶಿಫಾರಸು ಮತ್ತು ವಿಶೇಷ ಮನವಿಯ ಮೇರೆಗೆ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಲಾಡ್ಲೇ ಮಶಾಕ್ ದರ್ಗಾ ಕಮಿಟಿಯು ಈ ಹಿಂದೆ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಿ, ಪ್ರಕರಣದಲ್ಲಿ ಸಿಲುಕಿರುವ ಮುಸ್ಲಿಂ ಯುವಕರ ಮೇಲಿನ ಕೇಸ್ ಹಿಂಪಡೆಯುವಂತೆ ಕೋರಲಾಗಿತ್ತು.ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ಯು.ಟಿ. ಖಾದರ್ ಅವರು ಈ ರೀತಿ ಏಕಪಕ್ಷೀಯವಾಗಿ ಶಿಫಾರಸು ಮಾಡಿರುವುದು ಎಷ್ಟು ಸರಿ ಎಂದು ಹಿಂದೂ ಪರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

2022ರ ದರ್ಗಾ ಘಟನೆ!

2022ರ ಮಹಾಶಿವರಾತ್ರಿಯಂದು ಕಲಬುರಗಿಯ ಆಳಂದ ಪಟ್ಟಣದ ಲಾಡ್ಲೇ ಮಶಾಕ್ ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗದ ಪೂಜೆ ಮತ್ತು ಶುದ್ಧೀಕರಣದ ವೇಳೆ ಭಾರಿ ಕೋಮು ಸಂಘರ್ಷ ಉಂಟಾಗಿತ್ತು.ದರ್ಗಾ ಆವರಣದಲ್ಲಿದ್ದ ಶಿವಲಿಂಗದ ಮೇಲೆ ಮಲಮೂತ್ರ ವಿಸರ್ಜಿಸಿ ಅಪಚಾರ ಎಸಗಲಾಗಿತ್ತು ಎಂಬ ಗಂಭೀರ ಆರೋಪ ಬಂದಿತ್ತು. ಈ ಅಪಚಾರವನ್ನು ಸ್ವಚ್ಛಗೊಳಿಸಿ, ಶಿವಲಿಂಗ ಶುದ್ಧೀಕರಣ ಹಾಗೂ ಪೂಜೆಗೆ ತೆರಳಲು ಹಿಂದೂ ಭಕ್ತರಿಗೆ ಮುಸ್ಲಿಂ ಯುವಕರ ಗುಂಪು ತೀವ್ರ ತಡೆ ಒಡ್ಡಿತ್ತು.ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಭೀಕರ ಕಲ್ಲು ತೂರಾಟ ನಡೆದಿತ್ತು. ಗಲಭೆಕೋರರು ಅಂದಿನ ಕಲಬುರಗಿ ಜಿಲ್ಲಾಧಿಕಾರಿ (DC), ಸಹಾಯಕ ಕಮಿಷನರ್ (AC) ಹಾಗೂ ಮಾಜಿ ಕೇಂದ್ರ ಸಚಿವ ಭಗವಂತ ಖುಬಾ ಸೇರಿದಂತೆ ಹಲವು ಗಣ್ಯರ ಕಾರುಗಳ ಗಾಜುಗಳನ್ನು ಪುಡಿಪುಡಿ ಮಾಡಿದ್ದರು.ಸಾಕಷ್ಟು ಸಾರ್ವಜನಿಕರು ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಮಚ್ಚು-ಲಾಂಗ್‌ಗಳಿಂದ ಪ್ರಾಣ ಬೆದರಿಕೆ ಹಾಕಿದ್ದರು.ಈ ದೊಂಬಿ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಒಟ್ಟು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.

ಆರೋಪಿಗಳ ಪರ ಸರ್ಕಾರ-ಒಟ್ಟು 52 ಪ್ರಕರಣ ರದ್ದು
ವಿಧಾನಸೌಧದಲ್ಲಿ ಸಚಿವ ಎಚ್.ಕೆ. ಪಾಟೀಲ್ ಮಾಹಿತಿ ನೀಡಿದ್ದು,ಅಭಿಯೋಜನಾ ಇಲಾಖೆಯಿಂದ ಪ್ರಕರಣಗಳನ್ನು ಹಿಂಪಡೆಯಲು ಸಂಪುಟ ಒಪ್ಪಿಗೆ ನೀಡಿದೆ ಎಂದಿದ್ದಾರೆ. ದರ್ಗಾ ಗಲಭೆಗೆ ಸಂಬಂಧಿಸಿದ 8 ಪ್ರಮುಖ ಪ್ರಕರಣಗಳು ಸೇರಿದಂತೆ ಒಟ್ಟು 13 ಪ್ರಕರಣಗಳನ್ನು ಹಿಂಪಡೆಯುವ ಮೂಲಕ ನೂರಾರು ಮುಸ್ಲಿಂ ಆರೋಪಿಗಳಿಗೆ ಸರ್ಕಾರ ಕ್ಲೀನ್ ಚೀಟ್ ನೀಡಿದೆ. ಈ ಮೂಲಕ ಕೇವಲ ನಾಲ್ಕೇ ವರ್ಷಗಳಲ್ಲಿ ಇಂತಹ ಭೀಕರ ಕ್ರಿಮಿನಲ್ ಪ್ರಕರಣವನ್ನು ಸರ್ಕಾರ ರದ್ದುಗೊಳಿಸಿರುವುದು ಬಿಜೆಪಿ ಕೆಂಗಣ್ಣಿಗೆ ಕಾರಣವಾಗಿದೆ.
ಇದಲ್ಲದೆ, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮೇಲಿನ ಕೇಸ್‌ಗಳು, ಕಾವೇರಿ ಹೋರಾಟ, ಕಳಸಾ ಬಂಡೂರಿ ಹೋರಾಟ ಹಾಗೂ ರೈತ ಮತ್ತು ದಲಿತ ಮುಖಂಡರ ಮೇಲಿನ ಪ್ರಕರಣಗಳು ಸೇರಿ ಒಟ್ಟು 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಸಂಪುಟ ಒಪ್ಪಿಗೆ ನೀಡಿದೆ. ಆದರೆ,ದೇಶದ್ರೋಹ ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿ ಧ್ವಂಸ ಮಾಡಿದ ಗಲಭೆಕೋರರ ಕೇಸ್ ವಾಪಸ್ ಪಡೆದು ಕಾವೇರಿ ಹಾಗೂ ರೈತ ಹೋರಾಟದ ಕೇಸು ವಾಪಸ್ಸಿಗೆ ಹೋಲಿಕೆ ಮಾಡುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.


ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದವರನ್ನು ರಾಜಾರೋಷವಾಗಿ ಬಿಡುಗಡೆ ಮಾಡಿ ಓಟಿಗಾಗಿ ಕಾಂಗ್ರೆಸ್ ಸರ್ಕಾರ ಮುಸ್ಲಿಂ ಪರ ನಿಂತಿದೆ ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹಿಂದೂಪರ ಸಂಘಟನೆಗಳು ಹಾಗೂ ಶಿವಸೇನೆ ಎಚ್ಚರಿಸಿವೆ.

#LadleMashakDargah #AlandViolence #KarnatakaCabinet #UTKhader #SiddaramaiahGovernment #KalaburagiNews #CongressPolitics #HindutvaProtest #FreedomTV

Comments (0)

Your email address will not be published. Required fields are marked *

Back to top button