bengaluru

ಬೆಂಗಳೂರಿನಲ್ಲಿ ಜೆಸಿಬಿ ಘರ್ಜನೆ – ಫುಟ್‌ಪಾತ್ ಒತ್ತುವರಿ ತೆರವು!

GBA JCB roars in Bengaluru - Clearing footpath encroachment!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಇಂದು ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗಿದೆ. ಫುಟ್‌ಪಾತ್‌ಗಳ ಮೇಲಿದ್ದ ಅಂಗಡಿಗಳು ಮತ್ತು ಬೋರ್ಡ್‌ಗಳನ್ನು GBA ಸಿಬ್ಬಂದಿಗಳು ತೆರವು ಮಾಡುತ್ತಿದ್ದಾರೆ.

ನಗರದಲ್ಲಿ ಜೆಸಿಬಿಗಳ ಘರ್ಜನೆ ಜೋರಾಗಿದ್ದು, ಅಧಿಕಾರಿಗಳ ನೇತೃತ್ವದಲ್ಲಿ ಮೆಜೆಸ್ಟಿಕ್, ಮಲ್ಲೇಶ್ವರಂ, ವಿಜಯನಗರ, ಯಲಹಂಕ ನ್ಯೂಟೌನ್, ಬಸವನಗುಡಿ, ಜೆ.ಪಿ.ನಗರ ಸೇರಿ ಹಲವೆಡೆ ಒತ್ತುವರಿ ತೆರವು ನಡೆಯುತ್ತಿದೆ. ಕೇಂದ್ರ ಪಾಲಿಕೆ ವ್ಯಾಪ್ತಿಯ ಒಟ್ಟು 16 ಆಯಕಟ್ಟಿನ ಸ್ಥಳಗಳಲ್ಲಿ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳು ಈಗಾಗಲೇ ಮಾರ್ಕ್ ಮಾಡಿಕೊಂಡಿದ್ದರು. ಅದರಂತೆ ಸದ್ಯ 4 ಪ್ರಮುಖ ಏರಿಯಾಗಳ 16 ಕಡೆಗಳಲ್ಲಿ ಯಶಸ್ವಿಯಾಗಿ ಒತ್ತುವರಿ ತೆರವುಗೊಳಿಸಲಾಗಿದೆ.

ಅಶೋಕ ಪಿಲ್ಲರ್‌ನಿಂದ ಮಾಧವನ್ ಪಾರ್ಕ್‌ವರೆಗೆ ಈ ತೆರವು ನಡೆಯುತ್ತಿದೆ. ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದ ಎಲ್ಲ ಒತ್ತುವರಿಗಳನ್ನು ತೆರವುಗೊಳಿಸುತ್ತಿದೆ.

ಪಾಲಿಕೆ ಸಿಬ್ಬಂದಿ ಮತ್ತು ವ್ಯಾಪಾರಿಗಳ ನಡುವೆ ಜಟಾಪಟಿ :

ತೆರವು ಕಾರ್ಯಾಚರಣೆ ವೇಳೆ ಕೆಲವೆಡೆ ವ್ಯಾಪಾರಿಗಳು ಮತ್ತು ಪಾಲಿಕೆ ಸಿಬ್ಬಂದಿಗಳ ನಡುವೆ ಜಟಾಪಟಿ ನಡೆದಿದೆ. ಹಠಾತ್ ಕಾರ್ಯಾಚರಣೆಯಿಂದ ತಮಗೆ ನಷ್ಟವಾಗುತ್ತಿದೆ ಎಂದು ಆರೋಪಿಸಿ ಕೆಲವೆಡೆ ಒತ್ತುವರಿ ತೆರವಿಗೆ ತಡೆ ಒಡ್ಡಲು ಯತ್ನಿಸಲಾಯಿತು. ಈ ವೇಳೆ ಪಾಲಿಕೆ ಸಿಬ್ಬಂದಿ ಹಾಗೂ ಸ್ಥಳೀಯ ವ್ಯಾಪಾರಿಗಳ ನಡುವೆ ತೀವ್ರ ವಾಕ್ಸಮರ ಮತ್ತು ಜಟಾಪಟಿ ನಡೆದಿದೆ.

Comments (0)

Your email address will not be published. Required fields are marked *

Back to top button