
ಬೆಂಗಳೂರು : ಬಹುನಿರೀಕ್ಷಿತ GBA ಚುನಾವಣೆ ಮತ್ತೆ ಮುಂದೂಡಿಕೆಯಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್ ಡಿಸೆಂಬರ್ ಅಂತ್ಯದೊಳಗೆ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿದೆ. ಮತ್ತೆ ಚುನಾವಣೆ ಮುಂದೂಡುವಂತೆ ಯಾವುದೇ ಕಾರಣ ಹೇಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿವೆ, ಈ ಹಂತದಲ್ಲಿ ಚುನಾವಣೆ ನಡೆಸಲು ಅಸಾಧ್ಯವಾಗಿದೆ. ಅಧಿಕಾರಿಗಳ ನಿಯೋಜನೆ ಕಷ್ಟಸಾಧ್ಯ ಎಂಬ ವಾದವನ್ನು ರಾಜ್ಯ ಸರ್ಕಾರ ಸುಪ್ರೀಕೋರ್ಟ್ನಲ್ಲಿ ಮಂಡಿಸಿತ್ತು. ಇದೀಗ ಸರ್ಕಾರ ವಾದಕ್ಕೆ ಮನ್ನಣೆದೊರೆತಿದ್ದು, ಜಿಬಿಎ ಚುನಾವಣೆ ಸಧ್ಯಕ್ಕೆ ಮುಂದೂಡಲಾಗಿದೆ.
ವಾಸ್ತವವಾಗಿ 3 ರಾಜಕೀಯ ಪಕ್ಷಗಳು ಚುನಾವಣೆ ಮುಂದೂಡುವಂತೆ ಆಗ್ರಹಿಸಿದ್ದವು. ಕಾಂಗ್ರೆಸ್ ಜಿಬಿಎ ಚುನಾವಣೆ ಸಂಬಂಧ ಪೂರ್ವ ಸಿದ್ದತೆ ಮಾಡಿಕೊಂಡಿದ್ದರೂ ಅದು ಚುನಾವಣೆ ಎದುರಿಸುವಷ್ಟು ಪೂರ್ಣತೆ ಪಡೆದಿರಲಿಲ್ಲ. ವಿಪಕ್ಷ ಬಿಜೆಪಿ ಜಿಬಿಎ ಚುನಾವಣೆಗೆ ಇದುವೆರೆಗೂ ಯಾವುದೇ ಪೂರ್ವ ಸಿದ್ದತೆ ಮಾಡಿಕೊಂಡಿಲ್ಲ. ಜೆಡಿಎಸ್ ಹೆಸರಿಗೆ ಮಾತ್ರ ಸುದ್ದಿಗೋಷ್ಠಿ ಕರೆದು ಚುನಾವಣೆಗೆ ಸಜ್ಜಾಗಿದೆ ಎಂದು ಘೋಷಿಸಿತ್ತು.




